ಬೆಂಗಳೂರಿನ ಕನ್ನಡ/ತುಳು ವಿಕಿಪೀಡಿಯ ಸಮ್ಮಿಲನಕ್ಕೆ ನೋಂದಾಯಿಸಿ
ಬೆಂಗಳೂರು, ಆಗಸ್ಟ್ 09 : ಕನ್ನಡ ಮತ್ತು ತುಳು ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವ ಉದ್ದೇಶದಿಂದ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯದ ಭೇಟಿಯನ್ನು 19 ಆಗಸ್ಟ್ 2018 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ದೊಮ್ಮಲೂರಿನಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯ ವರೆಗೆ ನಡೆಯಲಿರುವ ಈ ಸಮ್ಮಿಲನದಲ್ಲಿ ಹಲವಾರು ಭಾಷಾ ತಜ್ಞರು, ಕನ್ನಡ ಆಸಕ್ತರು, ವಿಕಿಪೀಡಿಯದಲ್ಲಿ ನಿರತರಾಗಿರುವವರು ಭಾಗವಹಿಸಲಿದ್ದು, ವಿಕಿ ಸಂಬಂಧಿತ ವಿಚಾರಗಳನ್ನು ಚರ್ಚಿಸಬಹುದು.
ಉದ್ದೇಶಗಳು :
* ಕನ್ನಡ ವಿಕಿಪೀಡಿಯದಲ್ಲಿ ಮುಂದೆ ನಡೆಸಬೇಕಾದ ಕಾರ್ಯಗಳು.
* ನಡೆಯುತ್ತಿರುವ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.
* ವಿಕಿಯ ಮುಂದುವರಿದ ತರಬೇತಿಯಲ್ಲಿ ಕಲಿತ ವಿಚಾರಗಳನ್ನು ಹಂಚಿಕೊಳ್ಳುವುದು.

ದಿನಾಂಕ ಮತ್ತು ಸ್ಥಳ
ದಿನಾಂಕ : 19 ಆಗಸ್ಟ್ 2018 ನೇ ಭಾನುವಾರ
ಸಮಯ : ಬೆಳಿಗ್ಗೆ 10ರಿಂದ ಸಾಯಂಕಾಲ 5 ಗಂಟೆ.
ಸ್ಥಳ : ದ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ, ದೊಮ್ಮಲೂರು ಹಂತ 2, ಬೆಂಗಳೂರು - 560071.
ಕನ್ನಡ/ತುಳು ವಿಕಿಪೀಡಿಯ ಸಮ್ಮಿಲನದಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಬೇಕಾಗಿ ವಿನಂತಿ.
ವಿಳಾಸಕ್ಕಾಗಿ ಗೂಗ್ಲ್ ಮ್ಯಾಪ್
ಹೆಚ್ಚಿನ ಮಾಹಿತಿಗೆ ವಿಕಿಪೀಡಿಯದ ಪುಟಕ್ಕೆ ಭೇಟಿ ಕೊಡಿ












Click it and Unblock the Notifications