Rcb Row: ಆರ್‌ಸಿಬಿ ತಂಡಕ್ಕೆ ರಾಜ್ಯ ಸರ್ಕಾರದಿಂದ ಎಚ್ಚರಿಕೆ ಯಾಕೆ ?

ಐಪಿಎಲ್‌ನ ಪ್ರಮುಖ ಟೀಮ್‌ಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು - ಆರ್‌ಸಿಬಿ (Royal Challengers Bengaluru - rcb) ಫ್ರಾಂಚೈಸಿಗೆ ಇದೀಗ ರಾಜ್ಯ ಸರ್ಕಾರವೇ ಎಚ್ಚರಿಕೆಯನ್ನು ಕೊಟ್ಟಿದೆ. ಕಳೆದ ಎರಡು ದಿನಗಳಿಂದಲೂ ಆರ್‌ಸಿಬಿಯು ಸೋಷಿಯಲ್‌ ಮೀಡಿಯಾದಲ್ಲಿ ಹಿಂದಿ ಪೇಜ್‌ ಪ್ರಾರಂಭಿಸಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ನಡುವೆ ರಾಜ್ಯ ಸರ್ಕಾರವೇ ಮಧ್ಯಪ್ರವೇಶಿಸಿದ್ದು ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕಳೆದ ಎರಡು ದಿನಗಳಿಂದಲೂ ಈ ವಿಚಾರ ಸೋಷಿಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇದೀಗ ಮಧ್ಯಪ್ರವೇಶ ಮಾಡಿದೆ. ಕನ್ನಡಿಗರಿಗೆ ಯಾವುದೇ ಕಾರಣಕ್ಕೂ ನೋವು ಮಾಡಬೇಡಿ ಎಂದು ಹೇಳಲಾಗಿದೆ.

ಆರ್‌ಸಿಬಿ ಅವರು ಬದಲಾವಣೆ ಮಾಡಿಕೊಳ್ಳಬಹುದು ಎಂದು ಅಂದುಕೊಂಡಿದ್ದೇನೆ. ಇಲ್ಲವಾದರೆ ನಾವು (secretariat) ಕಾರ್ಯದರ್ಶಿಗೆ ನೋಟಿಸ್‌ ಜಾರಿ ಮಾಡ್ತೀವಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದ್ದಾರೆ. ಆರ್‌ಸಿಬಿಯ ಅಪ್ಡೇಟ್ಸ್‌ಗಳನ್ನು ನಾವು ಮೀಡಿಯಾದಲ್ಲಿ ಗಮನಿಸುತ್ತಿದ್ದೇವೆ. ಆರ್‌ಸಿಬಿ ಪೇಜ್‌ ಹಿಂದಿಯಲ್ಲಿ ಮಾಡಿದ್ದಾರೆ. ಆರ್‌ಸಿಬಿಯನ್ನು ನಾವು ಬಹಳ ಗೌರವಿಸುತ್ತೇವೆ. ಆರ್‌ಸಿಬಿ ಎಷ್ಟೇ ಬಾರಿ ಸೋತರೂ ನಾವು ಆ ತಂಡವನ್ನು ಬೆಂಬಲಿಸಿಕೊಂಡು ಬಂದಿದ್ದೇವೆ. ಅದಕ್ಕೆ ಹೆಚ್ಚು ಫ್ಯಾನ್ಸ್‌ ಫಾಲೋಯಿಂಗ್‌ ಇರುವುದು ಕನ್ನಡಿಗರು ಹಾಗೂ ಕರ್ನಾಟಕದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

Rcb Row Why is the RCB team warned by the Karnataka state government

ಆರ್‌ಸಿಬಿಯು ಹಿಂದಿಯಲ್ಲಿ ಪೇಜ್‌ ತಗೆಯುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಮತ್ತೊಂದು ವಿಷಯದಲ್ಲಿ ಕನ್ನಡಿಗರ ಕೋಪಕ್ಕೆ ಗುರಿಯಾಗಿದೆ. ಆರ್‌ಸಿಬಿಯು ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಿಂದಿ ಪೇಜ್‌ ಪ್ರಾರಂಭಿಸಿ, ಹಿಂದಿಯಲ್ಲಿ ಪೋಸ್ಟ್‌ ಮಾಡ್ತಿದೆ. ಈ ಬೆಳವಣಿಗೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರ್‌ಸಿಬಿಯ ಹಿಂದಿ ಪೇಜ್‌ ಪ್ರಾರಂಭಿಸಿದ್ದಕ್ಕೆ ಕನ್ನಡಿಗರು ಸಹ ಕಿಡಿಕಾರಿದ್ದಾರೆ.

ಕರವೇ ರಾಜ್ಯಾಧ್ಯಕ್ಷರ ಗುಡುಗು

ಇನ್ನು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ ನಾರಾಯಣಗೌಡ ಅವರು ಆರ್‌ಸಿಬಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿ, ಆರ್‌ಸಿಬಿಯು ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಬಾರದು ಎಂದಿದ್ದಾರೆ. ಅವರು ಯಾವ ಕಾರಣಕ್ಕೆ ಹಿಂದಿ ಪುಟ ತೆಗೆದಿದ್ದಾರೆ ಎಂದು ಸ್ಪಷ್ಟಪಡಿಸಬೇಕು. ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿ ಪದ್ಧತಿಯನ್ನು ಹೇರುವುದೇ ಇದರ ಹಿಂದಿನ ಉದ್ದೇಶವಿದ್ದರೆ, ಕರ್ನಾಟಕವನ್ನು ಬಿಟ್ಟು ತೊಲಗಲಿ. ನಿಮ್ಮ ಅವಶ್ಯಕತೆ ನಮಗೆ ಇಲ್ಲ ಎಂದು ಗುಡುಗಿದ್ದಾರೆ.

Rcb Row Why is the RCB team warned by the Karnataka state government

ಈ ಸಂಬಂಧ ಅವರು ಎಂಟಕ್ಕೂ ಹೆಚ್ಚು ಟ್ವೀಟ್‌ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ನಾವು ಮೊದಲಿನಿಂದಲೂ ಆರ್‌ಸಿಬಿ ತಂಡವನ್ನು ಬೆಂಬಲಿಸಿಕೊಂಡು ಬಂದಿದ್ದೇವೆ. ಈ ತಂಡಕ್ಕೆ ಇರುವಷ್ಟು ಅಭಿಮಾನಿಗಳು ಬೇರೆ ಯಾವ ತಂಡಕ್ಕೂ ಇಲ್ಲ. ಇದೇ ಕಾರಣಕ್ಕೆ ಅದರ ಆದಾಯವು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲ್ಲೇ ಇದೆ. ಒಂದೇ ಒಂದು ಬಾರಿ ಕಪ್‌ ಗೆಲ್ಲದೆ ಇದ್ದರೂ, ಐಪಿಎಲ್‌ನ ಮೂರನೇ ಅತ್ಯಂತ ಶ್ರೀಮಂತ ತಂಡವಾಗಿದೆ. ಇದಕ್ಕೆ ಕಾರಣ ಎನ್ನುವುದನ್ನು ಆರ್‌ಸಿಬಿ ಮರೆತಿರುವಂತ ಇದೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+