RCB Victory: ಬೆಂಗಳೂರು ನಮ್ಮ ಮೆಟ್ರೋ ರೈಲಿನಲ್ಲಿ ಆರ್‌ಸಿಬಿ ಗೆಲುವು ಸಂಭ್ರಮಿಸಿದ ಅಭಿಮಾನಿಗಳು: ವಿಡಿಯೋ

ಬೆಂಗಳೂರು, ಏಪ್ರೀಲ್ 03: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಪಂದ್ಯಾವಳಿಯಲ್ಲಿ ನೆಚ್ಚಿನ 'ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)' ತಂಡ ಗೆದ್ದ ನಂತರ, 'ನಮ್ಮ ಮೆಟ್ರೋ' ರೈಲಿನಲ್ಲೂ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಕೆಲವು ಪಂದ್ಯಾವಳಿಗಳು ಬೆಂಗಳೂರಿನಲ್ಲಿ ಆರಂಭವಾಗಲಿದ್ದು, ಆ ಪೈಕಿ ಮೊದಲ ಪಂದ್ಯ ಭಾನುವಾರ ಏಪ್ರಿಲ್ 2 ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಖ್ಯಾತ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮುಂಬೈ ಇಂಡಿಯನ್ಸ್ ತಂಡ ವಿರುದ್ಧ ಜಯಭೇರಿ ಬಾರಿಸಿತು.

RCB Fans Celebrated Their Team Victory In Bengaluru Namma Metro

ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಜೊತೆಗೆ ಇಷ್ಟದ ಆರ್‌ಸಿಬಿ ತಂಡದ ಗೆಲವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣ್ತುಂಬಿಕೊಂಡ ಸಾವಿರಾರು ಆರ್‌ಸಿಬಿ ಅಭಿಮಾನಿಗಳು ನಮ್ಮ ಮೆಟ್ರೋ ರೈಲಿನಲ್ಲೂ ಹರ್ಷೊದ್ಘಾರ ಮೊಳಗಿಸಿದರು. ಆರ್‌ಸಿಬಿ ಗೆಲುವನ್ನು ಆರ್‌ಸಿಬಿ.... ಆರ್‌ಸಿಬಿ.... ಎಂದು ಮೆಟ್ರೋ ರೈಲಿನಲ್ಲಿ ಕೂಗುವ ಮೂಲಕ ಸಂತಸ ಸಂಭ್ರಮಾಚರಣೆ ಮಾಡಿದರು.

ಆರ್‌ಸಿಬಿ ಮ್ಯಾಚ್ ಗೆದ್ದ ನಂತರ ತಡರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮನೆಗಳತ್ತ ತೆರಳುತ್ತಿದ್ದ ಆರ್‌ಸಿಬಿ ಅಭಿಮಾನಿಗಳು ಮೆಟ್ರೋ ರೈಲು ಏರಿದರು. ರೈಲು ಬಹುತೇಕ ತುಂಬಿ ಹೋಗಿತ್ತು. ಈ ವೇಳೆ ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದರು. ಎಲ್ಲರೂ ಒಂದೇ ಧ್ವನಿಯಿಂದ ಆರ್‌ಸಿಬಿ, ವಿರಾಟ್ ಕೊಹ್ಲಿ ಎಂದು ಕೂಗಿದ ವಿಡಿಯೋ ವೈರಲ್ ಆಗಿದೆ.

ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಹಂಚಿಕೊಂಡ ಬಿಜೆಪಿ ಸಂಸದ

ಈ ವಿಡಿಯೋವನ್ನು ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೆಟ್ರೋ ಒಳಗಿನ ಆರ್‌ಸಿಬಿ ಅಭಿಮಾನಿಗಳ ಗೆಲವಿನ ಖಷಿಯನ್ನು ವಿಡಿಯೋ ಮಾಡಿದ್ದಾರೆ. ಅದನ್ನು ಪೋಸ್ಟ್ ಮಾಡಿ, 'ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತಮ್ಮ ಇಷ್ಟದ ಆರ್‌ಸಿಬಿ ತಂಡದ ಗೆಲುವನ್ನು ಅಭಿಮಾನಿಗಳು ತಡರಾತ್ರಿ ಮೆಟ್ರೋದಲ್ಲಿ ಹೀಗೆ ಸಂಭ್ರಮಿಸಿದ್ದಾರೆ' ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

RCB Fans Celebrated Their Team Victory In Bengaluru Namma Metro

ಬೆಂಗಳೂರಿನಲ್ಲಿ ಬಹುನಿರೀಕ್ಷೆಯ ಐಪಿಎಲ್ ನ ಕೆಲವು ಪಂದ್ಯಾವಳಿಗಳು ನಡೆಯುವ ಹಿನ್ನೆಲೆಯಲ್ಲಿ ಅಭಿಮಾನಿಗಳು/ವೀಕ್ಷಕರ ಅನುಕೂಲಕ್ಕಾಗಿ ಕೆಲವು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ನಮ್ಮ ಮೆಟ್ರೋ ರೈಲು ಸೇವೆಯನ್ನು ತಡರಾತ್ರಿ 1 ಗಂಟೆ ವರೆಗೆ ವಿಸ್ತರಣೆ ಮಾಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣವನ್ನು ತಲುಪಲು ಜನರು ಎಂ.ಜಿ ರಸ್ತೆ ನಿಲ್ದಾಣ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ ಇಳಿಯುತ್ತಾರೆ, ಮತ್ತು ಮ್ಯಾಚ್ ಮುಗಿದ ಬಳಿಕ ಇಲ್ಲಿಂದಲೇ ಬೇರೆಡೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ಭಾನುವಾರ ತಡರಾತ್ರಿ ಇವೆರಡು ನಿಲ್ದಾಣಗಳು ಆರ್‌ಸಿಬಿ ಅಭಿಮಾನಿಗಳಿಂದ ತುಂಬಿ ತುಳುಕಿದ್ದವು.

ಮೇ.21ರವರೆಗೆ ಮ್ಯಾಚ್: ಮೆಟ್ರೋ-ಬಿಎಂಟಿಸಿ ಸೇವೆ ಲಭ್ಯ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 10, 17, 26 ಮತ್ತು ಮೇ 21 ರಂದು ಸಹ ಐಪಿಎಲ್‌ ಪಂದ್ಯಗಳು ನಡೆಯಲಿವೆ. ಆಟ ನಡೆಯುವ ಈ ಎಲ್ಲ ದಿನಾಂಕಗಳಲ್ಲಿ ಮೆಟ್ರೋ ಸೇವೆ ಮಧ್ಯರಾತ್ರಿ 1ಗಂಟೆವರೆಗ ಲಭ್ಯವಿರಲಿದೆ ಎಂದು ನಿಗಮ ತಿಳಿಸಿದೆ. ಅಲ್ಲದೇ ಇದಕ್ಕೆಂದೆ ಈ ಎಂಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ಎರಡು ನಿಲ್ದಾಣಗಳಿಂದ ಯಾವುದೇ ನಿಲ್ದಾಣ ತಲುಪಲು ಪೇಪರ್ ಟಿಕೆಟ್ ವಿತರಿಸಲಾಗುತ್ತಿದೆ. ಆದರೆ ಈ ಸೇವೆಯನ್ನು ಕೆಆರ್‌ಪುರ- ವೈಟ್‌ಫಿಲ್ಡ್‌ಗೆ ವಿಸ್ತರಣೆ ಮಾಡಿಲ್ಲ.

ಇದರ ಮದ್ಯೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಹ ಐಪಿಎಲ್ ಪಂದ್ಯದ ನಂತರ ಚಿನ್ನಸ್ವಾಮಿ ಬಸ್ ನಿಲ್ದಾಣದಿಂದ ನಗರದ ವಿವಿಧ ಭಾಗಗಳಿಗೆ ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಿತ್ತು. ಅನೇಕ ಮಂದಿ ಬಸ್‌ಗಳ ಮೂಲಕ ತಮ್ಮ ನಿವಾಸದ ಸ್ಥಳಗಳಿಗೆ ತೆರಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+