ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಕ್ ಪ್ರಕರಣ ಎನ್‌ಐಎ ಗೆ ಒಪ್ಪಿಸಲು ಅಭ್ಯಂತರವಿಲ್ಲ: ರಾಮಲಿಂಗಾ ರೆಡ್ಡಿ

By Manjunatha
|
Google Oneindia Kannada News

ಬೆಂಗಳೂರು, ಜನವರಿ 05: ಮಂಗಳೂರಿನಲ್ಲಿ ಅನ್ಯಕೋಮಿನವರಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಲು ನಮ್ಮ ಅಭ್ಯಂತರ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಗೃಹ ಸಚಿವರು 'ನಮಗೆ ಸಿಬಿಐ ಮೆಲೂ ವಿಶ್ವಾಸವಿದೆ, ಎನ್‌ಐಎ ಮೇಲೂ ವಿಶ್ವಾಸವಿದೆ ನಮ್ಮ ಪೊಲೀಸರ ಮೇಲೂ ನಂಬಿಕೆ ಇದೆ, ದೀಪಕ್ ರಾವ್ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಲು ನಮ್ಮ ಅಭ್ಯಂತರ ಇಲ್ಲ' ಎಂದು ಬರೆದುಕೊಂಡಿದ್ದಾರೆ.

ದೀಪಕ್ ಕೊಲೆ: ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?ದೀಪಕ್ ಕೊಲೆ: ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?

ದೀಪಕ್ ರಾವ್ ಕೊಲೆ ಆದಾಗಿನಿಂದಲೂ ಬಿಜೆಪಿ ಮುಖಂಡರು ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ಒತ್ತಾಯಿಸಿದ್ದರು, ರಾಮಲಿಂಗಾ ರೆಡ್ಡಿ ಅವರ ಈಗಿನ ಹೇಳಿಕೆ ಗಮನಿಸಿದರೆ ಪ್ರಕರಣವನ್ನು ಎನ್‌ಐಎ ಗೆ ವಹಿಸುವ ಸಾಧ್ಯತೆ ದಟ್ಟವಾಗಿದೆ.

Ramalinga Reddy has no problem in hand over Deepak murder case to NIA

ಕೇವಲ ಟ್ವಿಟರ್ ನಲ್ಲಿ ಈ ಅಭಿಪ್ರಾಯವನ್ನು ಗೃಹಸಚಿವರು ಹಂಚಿಕೊಂಡಿದ್ದು, ಅಧಿಕೃತವಾಗಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ದೀಪಕ್ ರಾವ್ ಕೊಲೆಯ ನಂತರ ಪಿಎಫ್‌ಐ, ಎಸ್‌ಡಿಎಫ್‌ಐ ಸಂಘಟನೆಗಳ ನಿಷೇಧಕ್ಕೂ ಬಿಜೆಪಿ ಪಟ್ಟು ಹಿಡಿದಿದ್ದು, ಆ ಬಗ್ಗೆಯೂ ರಾಮಲಿಂಗಾ ರೆಡ್ಡಿ ಅವರು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಕೋಮು ದ್ವೇಷ ಹರಡುವ ಎಲ್ಲಾ ಸಂಘಟನೆಗಳೂ ನಿಷೇಧವಾಗಬೇಕು ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಪಿಎಫ್‌ಐ, ಎಸ್‌ಡಿಎಫ್‌ಐ ಸಂಘಟನೆಗಳ ಜೊತೆಗೆ ಭಜರಂಗದಳ ಸಂಘಟನೆಯೂ ನಿಷೇಧವಾಗಲಿ ಎಂಬುದನ್ನು ಸೂಚಿಸಿದ್ದಾರೆ.

English summary
Home minister Ramalinga Reddy wrote in twitter that their has no problem in hand over the BJP party worker Deepak Rao murder case to NIA. He also wrote all organizations which are spreading communal violence should be ban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X