Breaking: ಬೆಂಗಳೂರಿನ ಕೆಲವೆಡೆ ಬುಧವಾರ ಸಂಜೆ ಜೋರು ಮಳೆ
ಬೆಂಗಳೂರು ಆಗಸ್ಟ್ 24: ಹವಾಮಾನದಲ್ಲಿ ಉಂಟಾದ ಬದಲಾವಣೆಗಳ ಪರಿಣಾಮವಾ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಮುಂದುವರಿದಿದೆ. ಬುಧವಾರ ನಗರದ ದೊಡ್ಡಬಿದರಕಲ್ಲಿನ ಅಧಿಕ ಮಳೆ ದಾಖಲಾಗಿದೆ.
ಬುಧವಾರ ಬೆಳಗ್ಗೆಯಿಂದ ಸಹಜವಾಗಿದ್ದ ವಾತಾವರಣ ಮಧ್ಯಾಹ್ನದ ನಂತರ ಬದಲಾಯಿತು. ಎಲ್ಲೆಡೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಜಿಟಿ ಜಿಟಿ ಮಳೆ ಶುರುವಾಯಿತು. ಮುಂದಿನ ಎರಡು ನಗರದ ಮಳೆ ಮುಂದುವರಿಯಲಿದೆ. ಆದರೆ ಮಳೆಯಲ್ಲಿ ತುಸು ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
ಮಧ್ಯಾಹ್ನ 2ಗಂಟೆ ನಂತರ ಬಹುತೇಕ ನಗರದ ಎಲ್ಲ ಬಡಾವಣೆಗಳಲ್ಲೂ ತುಂತುತು ಮಳೆ ಆರಂಭವಾದರೆ, ಕೆಲವು ಬಡಾವಣೆಗಳಲ್ಲಿ ಜೋರಾಗಿ ಅಬ್ಬರಿಸಿತು. ಈ ಪೈಕಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಜೆ 6ಗಂಟೆಯ ವರದಿ ಪ್ರಕಾರ, ದೊಡ್ಡಬಿದರಕಲ್ಲುವಿನಲ್ಲಿ ಅಧಿಕ 21.5ಮಿ.ಮೀ. ಮಳೆ ದಾಖಲಾಗಿದೆ.

ಉಳಿದಂತೆ ರಾಜಮಹಲ್ ಗುಟ್ಟಹಳ್ಳಿಯಲ್ಲಿ 18.5 ಮಿ.ಮೀ, ವಿದ್ಯಾಪೀಠ 16ಮಿ.ಮೀ, ಪುಲಕೇಶಿನಗರ 14.5ಮಿ.ಮೀ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ 13ಮಿ.ಮೀ, ದೊಮ್ಮಲೂರು ಮತ್ತು ಹಂಪಿ ನಗರದಲ್ಲಿ ತಲಾ 13.5ಮಿ.ಮೀ, ಸಂಪಂಗಿರಾಮನಗರ 11ಮಿ.ಮೀ ಹಾಗೂ ಹೊಯ್ಸಳ ನಗರದಲ್ಲಿ 10.5ಮಿ.ಮೀ. ಮಳೆ ಬಿದ್ದಿದೆ.
ಮಾರುತಿ ಮಂದಿರ ವಾರ್ಡ್, ಹೆರೋಹಳ್ಳಿ, ಯಲಹಂಕ, ಜಯನಗರ, ಹೆಬ್ಬಾಳ, ವಿಜಯನಗರ, ರಾಜಾಜಿನಗರ, ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶ, ಮಲ್ಲೇಶ್ವರಂ, ಶೇಷಾದ್ರಿಪುರಂ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಳೆ ಸುರಿಯಿತು. ನಗರದ ಕೆಲವು ಬಡಾವಣೆಗಳಲ್ಲಿ ತಡರಾತ್ರಿವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಗರಕ್ಕೆ ಮಳೆ ಮುನ್ಸೂಚನೆ ಏನಿದೆ?
ಸಿಲಿಕಾನ್ ಸಿಟಿಯಲ್ಲಿ ಮುಂದಿನ 48ಗಂಟೆಗೆ ಅಂದರೆ ಆಗಸ್ಟ್ 26ರವರೆಗೆ ಮಳೆ ಮುಂದುವರಿಯಲಿದೆ. ಆದರೆ ಬುಧವಾರ ಆದಷ್ಟು ಹಗುರದಿಂದ ಸಾಧಾರಣ ಮಳೆ ಆಗದೇ ಕೇವಲ ತುಂತುರು ರೂಪದಲ್ಲಿ ಸುರಿಯುವ ಲಕ್ಷಣಗಳು ಇವೆ. ಇದರ ಹೊರತು ಒಂದೆರಡು ಕಡೆಗಳಲ್ಲಿ ಸಾಧಾರಣವಾಗಿ ಜಿಟಿ ಜಿಟಿ ಮಳೆ ಬೀಳುವ ಸಾಧ್ಯತೆ ಇದೆ. ಎಲ್ಲೆ ಚಳಿ ಮತ್ತು ಮೋಡ ಕವಿದ ವಾತಾವರಣ ಕಂಡು ಬರಬಹುದು. ಈ ಅವಧಿಯಲ್ಲಿ ಗರಿಷ್ಠ 28 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.












Click it and Unblock the Notifications