ಅಪನಂಬಿಕೆಯಿಂದ ದಿಗ್ಭಂಧನದಲ್ಲಿ ಕಾಂಗ್ರೆಸ್ ಶಾಸಕರು: ಆರ್.ಅಶೋಕ್
ಬೆಂಗಳೂರು, ಮೇ 17: ಕಾಂಗ್ರೆಸ್‌ನವರು ಚುನಾಯಿತ ಶಾಸಕರ ಬಳಿ ಮೊಬೈಲ್ ಎಲ್ಲವನ್ನೂ ತೆಗೆದುಕೊಂಡು ಜೈಲಿನಲ್ಲಿರುವಂತೆ ರೆಸಾರ್ಟ್‌ನಲ್ಲಿ ಬಂಧಿಸಿಟ್ಟಿದ್ದಾರೆ. ಹಾಗಾದರೆ ಕಾಂಗ್ರೆಸ್ ಪಕ್ಷಕ್ಕೆ ಅವರ ಶಾಸಕರ ಮೇಲೆ ನಂಬಿಕೆ ಇಲ್ಲವೇ ಎಂದು ಶಾಸಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಿ ಫಾರಂ ಕೊಟ್ಟಿದೆ, ಆದರೆ ಶಾಸಕರನ್ನು ಕರೆದುಕೊಂಡು ಹೋಗಿ ಜೈಲಿನ ರೀತಿಯಲ್ಲಿ ರೆಸಾರ್ಟ್‌ನಲ್ಲಿ ಇರಿಸಿದ್ದಾರೆ. 1975 ರಲ್ಲಿ ಕೂಡ ರಾಜ್ಯವನ್ನು ಕಾಂಗ್ರೆಸ್ ಇದೇ ಸ್ಥಿತಿಗೆ ತಂದು ನಿಲ್ಲಿಸಿತ್ತು. ಇದೀಗ ಜನತೆ ಕೊಟ್ಟ ತೀರ್ಪು ಕಾಂಗ್ರೆಸ್‌ಗೆ ಇಷ್ಟವಾಗಿಲ್ಲ ಎಂದರು.
ಬಿಜೆಪಿಗೆ ನೀಡಿರುವ ಅವಧಿಯಲ್ಲಿ ವಿಧಾನಸಭೆಯಲ್ಲಿ ಬಹುಮತ ಸಾಭೀತು ಮಾಡುತ್ತೇವೆ, ಸುಭದ್ರ ಸರ್ಕಾರವನ್ನು ನೀಡುವ ವಿಶ್ವಾಸ ನಮಗಿದೆ ಎಂದರು.

ಚುನಾಯಿತಗೊಂಡ ಶಾಸಕರನ್ನು ಸಂವಿಧಾನ ರೀತಿಯಲ್ಲಿ ಸೆಳೆಯಲು ಸರ್ಕಾರ ತಂತ್ರ, ಉಪಾಯಗಳನ್ನು ಮಾಡಿದೆ. ಈ ಮೊದಲು ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡ ಹಾವು ಮುಂಗುಸಿ ಥರ ಕಿತ್ತಾಡಿಕೊಂಡಿತ್ತು. ಈಗ ಅವರೆಲ್ಲರೂ ಒಗ್ಗಟ್ಟಾಗಿಲ್ಲವೇ ಹಾಗೆಯೇ ಬಿಜೆಪಿ ಕೂಡ ಶಾಸಕರನ್ನು ಸೆಳೆದುಕೊಂಡು ಬಹುಮತವನ್ನು ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications