ಹೆಂಡತಿಯ ಕತ್ತು ಕೊಯ್ದು ಕೊಂದ ಉಪನ್ಯಾಸಕ ಪಕ್ಕದಲ್ಲೇ ಕೂತಿದ್ದ
ಬೆಂಗಳೂರು, ಜೂನ್ 2: ಕೋಪದ ಭರದಲ್ಲಿ ಎಂಥೆಂಥ ಅನಾಹುತಗಳು ಸಂಭವಿಸುತ್ತವೆ ಎಂಬುದಕ್ಕೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದ ಕೊಲೆಯೊಂದು ಉದಾಹರಣೆಯಂತಿದೆ. ಗುರುವಾರ ರಾತ್ರಿ ಮಂಜುಳಾ ಎಂಬುವರನ್ನು ಆಕೆಯ ಪತಿ ಮೈಲಾರಯ್ಯ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.
ಕೆಜಿಎಫ್ ನ ಸರಕಾರ ಕಾಲೇಜಿನಲ್ಲಿ ಈ ಮೈಲಾರಯ್ಯ ಉಪನ್ಯಾಸಕರಾಗಿದ್ದರು. ಹೆಂಡತಿ ಮತ್ತು ಇಬ್ಬರು ಮಕ್ಕಳ ಜತೆಗೆ ವಾಸವಾಗಿದ್ದರು. ಈ ದಂಪತಿ ಮಧ್ಯೆ ಆಗಾಗ ಜಗಳವಾಗುತ್ತಿದ್ದದ್ದು, ಗುರುವಾರ ರಾತ್ರಿ ವಿಕೋಪಕಕ್ಕೆ ಹೋಗಿದೆ. ನನಗೆ ವಿಚ್ಛೇಧನ ಕೊಟ್ಟುಬಿಡಿ ಎಂದು ಮಂಜುಳಾ ಕಿರುಚಾಡಿದ್ದಾರೆ.[ಆನೇಕಲ್ : ಬಿಜೆಪಿ ಕಾರ್ಯಕರ್ತ ಹರೀಶ್, ಕೊಚ್ಚಿ ಕೊಲೆ]

ಆಗ ಸಿಟ್ಟಿಗೆದ್ದ ಮೈಲಾರಯ್ಯ ಮಚ್ಚಿನಿಂದ ಮುಂಜುಳಾರ ಕತ್ತು ಕೊಯ್ದಿದ್ದಾರೆ. ವಿಪರೀತ ರಕ್ತ ಹರಿದುಹೋಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೇನು ಗಾಬರಿಯಾಯಿತೋ ಅಥವಾ ಪಶ್ಚಾತ್ತಾಪವೋ ಆರೋಪಿ ಮೈಲಾರಯ್ಯ ಹೆಂಡತಿಯ ಶವದ ಪಕ್ಕದಲ್ಲೇ ಕುಳಿತಿದ್ದಾರೆ. ಆ ನಂತರ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.[23 ವರ್ಷದ ಟೆಕಿ ನೋಯ್ಡಾದಲ್ಲಿ ಕೊಲೆ, ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ]
ಸಂಬಂಧಿಕರಿಂದ ಹೇಳಿಕೆ ಪಡೆದಿರುವ ಇಂದಿರಾನಗರ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ಉಪನ್ಯಾಸಕರಾಗಿದ್ದ ವ್ಯಕ್ತಿಯ ಸಿಟ್ಟು ಎಂಥ ಅನಾಹುತ ಮಾಡಿದೆ ನೋಡಿ. ಈ ದಂಪತಿಯ ಇಬ್ಬರು ಮಕ್ಕಳ ಭವಿಷ್ಯ ಏನಾಗಬೇಕು?












Click it and Unblock the Notifications