Bengaluru Pulse Polio: ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾಕರಣ: ಪೋಷಕರು ಗಮನಿಸಿ
ಬೆಂಗಳೂರು, ಮಾರ್ಚ್ 02: ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಇದೇ ತಿಂಗಳು ಶುರುವಾಗಲಿದೆ. ಸಿಹಿ ಸುದ್ದಿ ಏನೆಂದರೆ ಭಾರತದಲ್ಲಿ 2011 ರಿಂದ ಯಾವುದೇ ಪೋಲಿಯೊ ಪ್ರಕರಣಗಳು ವರದಿಯಾಗಿಲ್ಲ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಆರೋಗ್ಯವೇ ಭಾಗ್ಯ, ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು, ಪೋಲಿಯೊ ಒಂದು ಭಯಾನಕ ರೋಗ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಯನ್ನು ಉಂಟುಮಾಡುತ್ತದೆ. ಈ ರೋಗ 5 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಯಾವುದೇ ಪೋಲಿಯೊ ಪ್ರಕರಣಗಳು ವರದಿಯಾಗಿರುವುದಿಲ್ಲ. ಭಾರತ ದೇಶವು ಪೋಲಿಯೊ ಮುಕ್ತ ರಾಷ್ಟ್ರ ಎಂದು 2014 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಆದರೂ ಕೂಡ ಪಕ್ಕದ ನೆರೆಯ ದೇಶಗಳಾದ ಪಾಕಿಸ್ತಾನ, ಆಫ್‌ಘಾನಿಸ್ತಾನ ದೇಶಗಳಲ್ಲಿ 2024 ರಲ್ಲಿ 12 ಪ್ರಕರಣಗಳು ಕಂಡುಬಂದಿದೆ ಎಂದು ವರದಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪಾಲಿಕೆಯ ಆರೋಗ್ಯ ಇಲಾಖೆಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಅತ್ಯಂತ ಯಶಸ್ವಿಯಾಗಿ ಹಾಗೂ ಗುಣಾತ್ಮಕವಾಗಿ ನಡೆಸಲು ಕರ್ನಾಟಕ ಆರೋಗ್ಯ ಇಲಾಖೆ ನಿರ್ಧರಿಸಿದೆ.

ಮಾರ್ಚ್ 03ರಿಂದ 06ರ ತನಕ ಕಾರ್ಯಕ್ರಮ
ನಾಳೆ ಭಾನುವಾರ ಮಾರ್ಚ್ 03ರಿಂದ 06ರವರೆಗೆ ಪಲ್ಸ್ ಪೊಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಬಿಬಿಎಂಪಿ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಸಾರ್ವಜನಿಕ ಆರೋಗ್ಯ ವಿಭಾಗದ ಅಡಿಯಲ್ಲಿ ಬರುವ 145 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ 228 ನಮ್ಮ ಕ್ಲಿನಿಕ್‌ಗಳಲ್ಲಿ, ಔಷಧಾಲಯಗಳು, ಅಂಗನವಾಡಿ ಕೇಂದ್ರಗಳು, ಶಾಲೆಗಳಲ್ಲಿ ಹಾಗೂ ಸ್ಥಿರ ಮತ್ತು ಸಂಚಾರಿ ತಂಡಗಳನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸ್ವಯಂ ಸೇವಾ ಸಂಸ್ಥೆಯ ಆಸ್ಪತ್ರೆಗಳು, ಮಾಲ್‌ಗಳು, ಖಾಸಗಿ ನರ್ಸಿಂಗ್ ಹೋಮ್ ಗಳು, ವೈದ್ಯಕೀಯ ಮಹಾವಿದ್ಯಾಲಯ, ಪ್ರಮುಖ ಉದ್ಯಾನವನಗಳು, ಮೆಟ್ರೋ ನಿಲ್ದಾಣ ಇನ್ನು ಮುಂತಾದ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಇಲಾಖೆ ಪ್ರಕಟಣೆ ಮಾಹಿತಿ ನೀಡಿದೆ.
ಮಕ್ಕಳ ಸಂಖ್ಯೆ: ಪೊಲಿಯೊ ಕಾರ್ಯಕ್ರಮದ ವಿವರ
* 0-5 ವರ್ಷದ ಮಕ್ಕಳ ಸಂಖ್ಯೆ : c,12,998
* ಬೂತ್‌ಗಳ ಸಂಖ್ಯೆ: 3403
* ಸ್ಥಿರ ತಂಡಗಳು: 545
* ಸಂಚಾರಿ ತಂಡಗಳು: 380
* ಒಟ್ಟು ಲಸಿಕಾ ಕಾರ್ಯಕರ್ತರು: 15,354
* ಒಟ್ಟು ಮೇಲ್ವಿಚಾರಕರು: 758
ಸಾರ್ವಜನಿಕರು ಈ ಹಿಂದೆ ಎಷ್ಟೇ ಬಾರಿ ಸಹ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಿದ್ದರೂ ಕೂಡ ನಾಳೆ ಭಾನುವಾರ ಮಾರ್ಚ್ 03 ರಿಂದ ನಡೆಯಲಿರುವ ಪೊಲಿಯೋ ಲಸಿಕೆ ಕಾರ್ಯಕ್ರಮಕ್ಕೆ 5 ವರ್ಷದೊಳಗಿನ ಮಕ್ಕಳನ್ನು ಬೂತ್‌ಗೆ ಕರೆತಂದು ಎರಡು ಹನಿ ಪೋಲಿಯೊ ಹಾಕಿಸಸಬೇಕು. ಈ ಮೂಲಕ ಪೋಲಿಯೊ ಮುಕ್ತ ವಿಶ್ವವನ್ನಾಗಿ ಮಾಡಲು ಸಹಕರಿಸುವಂತೆ ಬಿಬಿಎಂಪಿ ತಿಲಿಸಿದೆ.












Click it and Unblock the Notifications