ಪಿಎಸ್ಐ ನೇಮಕಾತಿ ಹಗರಣದಲ್ಲಿ ಸರ್ಕಾರ ಶಾಮೀಲು ಎಂದ ಕಾಂಗ್ರೆಸ್

ಬೆಂಗಳೂರು, ಮೇ 2: ಕರ್ನಾಟಕದ ಪಿಎಸ್ಐ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದಲ್ಲಿ ಇಡೀ ಸರ್ಕಾರವೇ ಭಾಗಿ ಆಗಿರುವುದರಲ್ಲಿ ಯಾವುದೇ ಸಂಶಯಗಳಿಲ್ಲ ಎಂದು ಕಾಂಗ್ರೆಸ್ ದೂಷಿಸಿದೆ.

ಪಿಎಸ್ಐ ಹಗರಣದಲ್ಲಿ ಇಡೀ ಸರ್ಕಾರವೇ ಭಾಗಿಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. PSI ಅಭ್ಯರ್ಥಿಯಿಂದ ದರ್ಶನ್ ಗೌಡ ಎಂಬ ವ್ಯಕ್ತಿ 80 ಲಕ್ಷ ರೂಪಾಯಿ ಪಡೆದಿದ್ದು ಬೆಳಕಿಗೆ ಬಂದಿದೆ, ಆತನನ್ನು ವಿಚಾರಣೆಯಿಂದ ರಕ್ಷಿಸಲಾಗಿದೆ. ಕಾರಣ, ಆತ ಮಂತ್ರಿಯೊಬ್ಬರ ಸಂಬಂಧಿ. ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರೇ, ಈ ಬಗ್ಗೆ ತಮಗೆ ಹೆಚ್ಚು ತಿಳಿದಿದೆಯಲ್ಲವೇ??," ಎಂದು ಕಾಂಗ್ರೆಸ್ ಕೂ ಮಾಡಿದೆ.

"ಪಿಎಸ್ಐ ಪರೀಕ್ಷೆಯ ಅಕ್ರಮವು ಇಡೀ ಕರ್ನಾಟಕಕ್ಕೆ ಸುತ್ತಿಕೊಂಡಿದೆ. ಅಂದು ಸದನದಲ್ಲಿ ಗೃಹಸಚಿವರ ಜೊತೆಗೆ ಸಮರ್ಥನೆಗೆ ನಿಂತಿದ್ದ ಅಶ್ವತ್ಥ ನಾರಾಯಣ ಅವರೇ, ಅಂದಿನ ನಿಮ್ಮ 'ಹಗರಣವೇ ನಡೆದಿಲ್ಲ' ಎಂಬ ಸಮರ್ಥನೆಗೆ ಕಾರಣ ಈಗ ಹೊರಬರುತ್ತಿದೆ. ವಿಚಾರಣೆಯಿಂದ ದರ್ಶನ್ ಗೌಡನನ್ನು ರಕ್ಷಣೆಗೆ ನಿಂತಿದ್ದು ಯಾರು ಎಂದು ಪ್ರತ್ಯೇಕವಾಗಿ ಹೇಳಬೇಕೆ?," ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಈ ಸಂಬಂಧ ತನಿಖಾಧಿಕಾರಿಗಳು ನೀಡಿರುವ ನೋಟಿಸ್ ಅನ್ನು ಪೋಸ್ಟ್ ಮಾಡಲಾಗಿದೆ. ಈ ನೋಟಿಸ್ ನಲ್ಲಿ ಏನು ಉಲ್ಲೇಖವಾಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ:

ಈ ಮೂಲಕ ತಮಗೆ ತಿಳಿಸುವುದೆನೆಂದರೆ, ಕಲಬುರಗಿ ಚೌಕ್ ಪೊಲೀಸ್ ಠಾಣೆಯಲ್ಲಿ ಸರ್ಕಾರದ ಅಧಿಸೂಚನೆ ಸಂಖ್ಯೆ ನಂ.98, ನೇಮಕಾತಿ 2/2020-21ರ ಅನ್ವಯ ನಡೆದ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬುದಕ್ಕೆ ಸಂಬಂಧಿಸಿದಂತೆ ಮೊ.ಸಂಖ್ಯೆ 48/2022, ಕಲಂ 465, 468, 471, 420, 120(ಬಿ), ಸಂಹಿತೆ 34 ಐಪಿಸಿ ರೀತಿ ಪ್ರಕರಣ ದಾಖಲಾಗಿದ್ದು, ಹಾಲಿ ಸಿಐಡಿಯಲ್ಲಿ ತನಿಖಾ ಹಂತದಲ್ಲಿದೆ. ಸದರಿ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದು ಸರಿಯಷ್ಟೇ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ವಿಚಾರಣೆ ಮಾಡಬೇಕಾಗಿರುವುದರಿಂದ ದಿನಾಂಕ 20/4/2022ರಂದು ಬೆಳಗ್ಗೆ 10 ಗಂಟೆಗೆ ಸಿಐಡಿ ಕಚೇರಿಯ ಅನೆಕ್ಸ್-2 ಕಟ್ಟಡದ ರೂಂ ನಂಬರ್ 7ರಲ್ಲಿ ತನಿಖಾಧಿಕಾರಿ ಮುಂದೆ ಖುದ್ದಾಗಿ ಹಾಜರಾಗುವುದು ಮತ್ತು ಈ ಕೆಳಗಿನ ದಾಖಲಾತಿಗಳನ್ನು ಹಾಜರುಪಡಿಸಲು ಆದೇಶಿಸಲಾಗಿದೆ.

PSI Recruitment: Congress Allegations about Karnataka Govt Involvement in Exam scam

ಯಾವೆಲ್ಲ ದಾಖಲೆಗಳನ್ನು ಹಾಜರುಪಡಿಸಬೇಕು?:

1. ದಿನಾಂಕ 2021ರ ಅಕ್ಟೋಬರ್ 3ರಂದು ನಡೆದ ಪಿಎಸ್ಐ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರದ ಅಸಲಿ ಪ್ರತಿ

2. ಎರಡನೇ ಪತ್ರಿಕೆಯ ಪರೀಕ್ಷೆಯ ದಿನ ನೀವು ತೆಗೆದುಕೊಂಡಿರುವ ಓಎಂಆರ್ ಶೀಟ್ ಕಾರ್ಬನ್ ಪ್ರತಿಯ ಅಸಲು ಪ್ರತಿಯನ್ನು ಹಾಜರುಪಡಿಸಬೇಕು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+