B - Khata and E - Khata: ಇ -ಖಾತಾ ಆಸ್ತಿದಾರರಿಗೆ ಗುಡ್‌ನ್ಯೂಸ್: ಬಿ - ಖಾತಾ ಆಸ್ತಿಗೆ ಬ್ಯಾಡ್ ನ್ಯೂಸ್!

B - Khata and E - Khata: ಕರ್ನಾಟಕ ಸರ್ಕಾರವು ಇ - ಖಾತಾಗೆ ಸಂಬಂಧಿಸಿದಂತೆ ಗುಡ್‌ನ್ಯೂಸ್ ಕೊಟ್ಟಿದೆ. ಆದರೆ ಬಿ ಖಾತಾಗೆ ಸಂಬಂಧಿಸಿದಂತೆ ಬ್ಯಾಡ್‌ನ್ಯೂಸ್ ಮುಂದುವರಿದಿದೆ. ಹೌದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಆಸ್ತಿಗಳ ಸಂರಕ್ಷಣೆಯ ಮತ್ತು ಮಾರಾಟದ ಸಂದರ್ಭದಲ್ಲಿ ಯಾವುದೇ ಅವ್ಯವಹಾರಗಳು ನಡೆಯಬಾರದು ಎನ್ನುವ ಕಾರಣಕ್ಕೆ ಎಲ್ಲಾ ಆಸ್ತಿಗಳಿಗೂ ಇ ಖಾತಾ ಕಡ್ಡಾಯ ಮಾಡಲಾಗಿದೆ. ಆದರೆ, ಇ - ಖಾತಾ ಎಲ್ಲರಿಗೂ ಸಿಗುತ್ತಿಲ್ಲ. ಹೀಗಾಗಿ ಬೆಂಗಳೂರಿನ ಆಸ್ತಿದಾರರಿಗೆ ಇ - ಖಾತಾಗೆ ಸಂಬಂಧಿಸಿದಂತೆ ಗುಡ್‌ನ್ಯೂಸ್ ಕೊಡಲಾಗಿದೆ. ಆದರೆ ಬಿ - ಖಾತಾ ಆಸ್ತಿದಾರರಿಗೆ ಶಾಕ್ ಮುಂದುವರಿದಿದೆ.

ಬೆಂಗಳೂರಿನಲ್ಲಿ ಅಂದಾಜು 25 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು ಇಲ್ಲಿಯ ವರೆಗೆ ಅಂದಾಜು 5ರಿಂದ 7 ಲಕ್ಷ ಆಸ್ತಿಗಳಿಗೆ ಮಾತ್ರ ಇ ಖಾತಾ ಸಿಕ್ಕಿದೆ. ಇದೀಗ ಬೆಂಗಳೂರಿನಲ್ಲಿ ಮಾತ್ರ ಇ ಖಾತಾಗೆ ಸಂಬಂಧಿಸಿದಂತೆ ಗುಡ್‌ನ್ಯೂಸ್ ಕೊಡಲಾಗಿದೆ. ಆದರೆ ಬಿ ಖಾತಾಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಯಾವುದೇ ಹೊಸ ಅಧಿಸೂಚನೆ ಅಥವಾ ಪ್ರಕಟಣೆಯನ್ನು ಹೊರಡಿಸಿಲ್ಲ. ಬಿ - ಖಾತಾದಿಂದ ಎ - ಖಾತಾ ಮಾಡಿಸಿಕೊಳ್ಳಲು ನಿಯಮ ರೂಪಿಸುವುದು ಹಾಗೂ ಶುಲ್ಕ ನಿಗದಿ ಮಾಡುವುದಾಗಿ ಹೇಳಿತ್ತು. ಆದರೆ ಇಲ್ಲಿಯ ವರೆಗೆ ಬಿ ಖಾತಾಗೆ ಸಂಬಂಧಿಸಿದಂತೆ ಯಾವುದೇ ಸೂಚನೆಯನ್ನು ನೀಡಿಲ್ಲ.

Property Update Relief for E-Khata Owners Trouble for B-Khata Owners

ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಅಂದಾಜು 30ರಿಂದ 40 ಲಕ್ಷ ಬಿ ಖಾತಾ ಆಸ್ತಿಗಳಿದ್ದು. ಈ ಆಸ್ತಿಗಳಿಗೆ ಎ - ಖಾತಾ ಸಿಗದೆ ಇರುವುದರಿಂದ ಬಿ ಖಾತಾ ಆಸ್ತಿದಾರರು ಸಂಕಷ್ಟ ಅನುಭವಿಸುವಂತಾಗಿದೆ. ಬಿ ಖಾತಾ ಹೊಂದಿರುವ ಆಸ್ತಿದಾರರು ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಒಂದೊಮ್ಮೆ ಈಗಾಗಲೇ ಕಟ್ಟಡ ನಿರ್ಮಾಣ ಮಾಡಿದ್ದರೆ ವಿದ್ಯುತ್ ಸರಬರಾಜು ಹಾಗೂ ನೀರು ಪೂರೈಕೆ ಸೌಲಭ್ಯ ಸಿಗುತ್ತಿಲ್ಲ. ಅಲ್ಲದೇ ಕಟ್ಟಡ ನಿರ್ಮಾಣಕ್ಕೂ ಸಂಕಷ್ಟವಾಗುತ್ತಿದೆ. ಕಟ್ಟಡ ನಿರ್ಮಾಣ ಮಾಡುವುದಕ್ಕೆ ನೀಲನಕ್ಷೆ ಅಥವಾ ನಕ್ಷೆ ಮಂಜೂರಾತಿ ಸೌಲಭ್ಯ ಸಿಗುತ್ತಿಲ್ಲ.

ಇನ್ನು ಇ ಖಾತಾ ಮಾಡಿಸಿಕೊಳ್ಳಲು ಮೊಬೈಲ್ ಅಪ್ಲಿಕೇಷನ್ ಸೌಲಭ್ಯವನ್ನು ಬೆಂಗಳೂರಿನ ಗ್ರೇಟರ್ ಬೆಂಗಳೂರು ಆಡಳಿತ ಪರಿಚಯಿಸಿದೆಯಾದರೂ, ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಬೆಂಗಳೂರಿನಲ್ಲಿ ಇ - ಖಾತಾ ಅರ್ಜಿ ಸಲ್ಲಿಸಿಯೂ ಖಾತಾ ಸಿಗದೆ ಇರುವವರು ಅಥವಾ ಇ - ಖಾತಾ ಮಾಡಿಸಿಕೊಳ್ಳದೆ ಇರುವವರು, ಆನ್‌ಲೈನ್‌ನಲ್ಲಿ ಇ ಖಾತಾ ಪಡೆದುಕೊಳ್ಳಲು ಸಾಧ್ಯವಾಗದೆ ಇರುವವರು ಈ ಮೊಬೈಲ್ ಅಪ್ಲಿಕೇಷನ್‌ನ ಮೂಲಕ ಇ ಖಾತಾ ಪಡೆದುಕೊಳ್ಳಬಹುದಾಗಿದೆ. ಆದರೆ ಇದು ಸಹ ಕೇವಲ ಬೆಂಗಳೂರಿಗೆ ಸೀಮಿತವಾಗಿದೆ.

ರಿಯಲ್ ಎಸ್ಟೇಟ್‌ಗೆ ಪೆಟ್ಟು: ಇನ್ನು ಬಿ - ಖಾತಾ ಗೊಂದಲದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ರಿಯಲ್ ಎಸ್ಟೇಟ್‌ಗೆ ಪೆಟ್ಟು ಬಿದ್ದಿದೆ. ಬಿ - ಖಾತಾದಿಂದ ಎ - ಖಾತಾ ಮಾಡಿಸಿಕೊಳ್ಳುವುದಕ್ಕೆ ಎದುರಾಗಿರುವ ಕಾನೂನು ತೊಡಕು ಹಾಗೂ ಸರ್ಕಾರ ಯಾವುದೇ ನಿಯಮ ರೂಪಿಸದೆ ಇರುವುದರಿಂದ ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್‌ಗೆ ಭಾರೀ ಪೆಟ್ಟುಬಿದ್ದಿದೆ.

ಕಳೆದ ಒಂದು ವರ್ಷದಿಂದಲೂ ಇ - ಖಾತಾ ಪರಿಚಯಿಸಿದ ಮೇಲೆ ಬಿ ಖಾತಾ ಗೊಂದಲಗಳು ಹೆಚ್ಚಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+