ಜಯನಗರದಲ್ಲಿ 'ಪ್ರಾಜೆಕ್ಟ್ ಈವ್' ಕಲಾಕೃತಿ ಪ್ರದರ್ಶನ

ಬೆಂಗಳೂರು, ಫೆಬ್ರವರಿ 28: ಕಲಾಪ್ರಪಂಚದಲ್ಲಿ ತಮ್ಮದೇ ಆದ ಸಾಧನೆ ಮಾಡಿ, ಆ ಮೂಲಕ ಖ್ಯಾತಿ ಗಳಿಸಿರುವ ಮಧು ನಟರಾಜ್, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು ಮತ್ತು ಇತರ ಖ್ಯಾತನಾಮ ಕಲಾವಿದೆಯರೊಂದಿಗೆ ಚಹಾ ಪಾನದೊಂದಿಗೆ ಅರ್ಥಪೂರ್ಣ ಸಂವಾದದಲ್ಲಿ ಪಾಲ್ಗೊಳ್ಳಲು ಇಲ್ಲಿದೆ ಅವಕಾಶ.

ಹೆಸರಾಂತ ಲೇಖಕಿ, ಪ್ರಕಾಶಕಿ ಸಂಧ್ಯಾ ಮೆಂಡೋನ್ಸಾ ಅವರು ಈ ವಿಶಿಷ್ಟ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಗುರುವಾರ(ಮಾರ್ಚ್ 01)ದ ಸಂಜೆಯನ್ನು ಅರ್ಥಪೂರ್ಣವಾಗಿ ಕಳೆಯಲು ಇದಕ್ಕಿಂತ ಉತ್ತಮವಾದ ಮಾರ್ಗ ಇನ್ನೊಂದಿಲ್ಲ!

ದಿನಾಂಕ: 2018ರ ಮಾರ್ಚ್ 1ರಿಂದ 4ರವರೆಗೆ.

ಉದ್ಘಾಟನೆ: ಮಾರ್ಚ್ 1ರ ಸಂಜೆ 4ಗಂಟೆಗೆ

ಸ್ಥಳ: ಪ್ರಾಜೆಕ್ಟ್ ಈವ್, ಜಯನಗರ 4ನೇ ಬ್ಲಾಕ್, ಬೆಂಗಳೂರು

Project Eve presents “Dialogues on Creating Journey, an Art Exhibition by eminent women artists

ಪ್ರಾಜೆಕ್ಟ್ ಈವ್ ಮಳಿಗೆ: ರಿಲಯನ್ಸ್ ರೀಟೇಲ್‌ನ ಅಂಗವಾದ ಪ್ರಾಜೆಕ್ಟ್ ಈವ್ ಮಳಿಗೆಯೊಳಕ್ಕೆ ಬರುವ ಸ್ತ್ರೀಯರಿಗೆ ಅಂತಿಮವಾಗಿ ಹಿತಕರವಾದ ಅನುಭವವಾಗಬೇಕು ಎನ್ನುವುದು ಸಂಸ್ಥೆಯ ಆಶಯವಾಗಿದೆ.

ಬೆಂಗಳೂರಿನ ಜಯನಗರ ಬಡಾವಣೆಯ 4ನೇ ಬ್ಲಾಕ್‌ನಲ್ಲಿರುವ ಪ್ರಾಜೆಕ್ಟ್ ಈವ್ ಮಳಿಗೆಯು ನಾಲ್ಕು ಅಂತಸ್ತುಗಳಲ್ಲಿ, 9,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮುಖ್ಯವಾಗಿ, 25 ರಿಂದ 40 ವರ್ಷದೊಳಗಿರುವ ಮಹಿಳೆಯರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕೆಂಬ ದೃಷ್ಟಿಯಿಂದ ಇದನ್ನು ರೂಪಿಸಲಾಗಿದೆ.

ಮಹಿಳೆಯರು ತಮ್ಮನ್ನು ತಾವು ಸಂಭ್ರಮಿಸಿಕೊಳ್ಳಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಹೀಗಾಗಿ, ಈ ಇಡೀ ಮಳಿಗೆಯಲ್ಲಿ ಅದಕ್ಕೆ ತಕ್ಕ ಗಮನ ಕೊಡಲಾಗಿದೆ.

ಫ್ರೆಂಚ್ ಪಾಕಶಾಲೆ ಇರುವ ಹೋಟೆಲ್, ಫ್ಯಾಷನ್ ವಸ್ತುಗಳು, ಜೀವನಶೈಲಿಯ ಸಾಮಾನು-ಸರಂಜಾಮುಗಳು ಎಲ್ಲವೂ ಇಲ್ಲುಂಟು!

ಮಹಿಳೆಯರ ಅಭಿರುಚಿಗಳನ್ನು ಪರಿಗಣಿಸಿ, ಅದಕ್ಕೆ ತಕ್ಕಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಖರೀದಿಸಿದ ವಸ್ತುಗಳು ಹೇಗಿವೆಯೆಂದು ನೋಡಲು ವಿಶಾಲವಾದ ಎರಡು ಟ್ರಯಲ್ ರೂಮ್‌ಗಳು, ಚಾರ್ಜಿಂಗ್ ಡಾಕೆಟ್‌ಗಳು ಮತ್ತು ಎಕ್ಸ್‌ಪ್ರೆಸ್ ಚೆಕ್‌ ಔಟ್‌ನ ಸೌಲಭ್ಯಗಳೂ ಇಲ್ಲಿ ಲಭ್ಯ!

ಇವುಗಳ ಜೊತೆಗೆ ಲೋಕಾಭಿರಾಮವಾದ ಮಾತುಕತೆಗಳನ್ನು ನಡೆಸಲು ಸೈಡ್ ಟೇಬಲ್‌ಗಳು, ಆರಾಮವಾಗಿ ಕೂರಲು ನೆರವಾಗುವಂಥ ಆಸನಗಳು, ಬೆಳಗ್ಗೆ ಮತ್ತು ಸಂಜೆಯ ಹೊತ್ತಿಗೆ ಸರಿಯಾಗಿ ಬೆಳಕು ಸೂಸುವಂಥ ಬಗೆಬಗೆಯ ವಿದ್ಯುದ್ದೀಪಗಳು ಕೂಡ ಇಲ್ಲಿವೆ.

ಪ್ರಾಜೆಕ್ಟ್ ಈವ್‌ನ ಸ್ವಂತ ಬ್ರ್ಯಾಂಡ್‌ಗಳ ಜೊತೆಗೆ ಈ ಮಳಿಗೆಯಲ್ಲಿ ಭಾರತೀಯ ಮತ್ತು ಪಾಶ್ಚಾತ್ಯ ಜಗತ್ತಿನ ಕಣ್ಣು ಕೋರೈಸುವ ಉಡುಪುಗಳು ಇಲ್ಲಿ ಸದಾ ಸಿಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+