ಸಾಂಸ್ಕೃತಿಕ ಲೋಕಕ್ಕೆ ರಂಗಮಂದಿರ ಅರ್ಪಣೆ
ಬೆಂಗಳೂರು: ನವೆಂಬರ್,3: ಜಗಮಗಿಸುವ ವೈವಿಧ್ಯಮಯ ದೀಪಾಲಾಂಕಾರದೊಂದಿಗೆ ವಿವಿಧ ಕಾರ್ಯಕ್ರಮಕ್ಕೆ ಪ್ರಭಾತ್ ಕಲಾಪೂರ್ಣಿಮಾ ರಂಗಮಂದಿರ ಇದೇ ನ.5ರಂದು ಲೋಕಾರ್ಪಣೆಗೊಳ್ಳಲಿದೆ.
ಈ ರಂಗಮಂದಿರ ಇರುವುದು ಬೆಂಗಳೂರಿನ ಎನ್.ಆರ್. ಕಾಲನಿಯಲ್ಲಿ ಅದ್ಭುತವಾಗಿ ರೂಪಿತವಾಗಿರುವ ವೇದಿಕೆ. ನಾಟಕ, ನೃತ್ಯ, ಸಂಗೀತ ಕಛೇರಿ, ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಹೇಳಿಮಾಡಿಸಿದಂತಿರುವ ಈ ಭವ್ಯ ಮಂದಿರ.
ಪ್ರಭಾತ್ ಕಲಾಪೂರ್ಣಿಮಾವನ್ನು ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಮತ್ತು ಮಾಜಿ ಮೇಯರ್ ಬಿ.ಎಸ್ ಸತ್ಯನಾರಾಯಣ ಅವರು ಸಂಜೆ ಲೋಕಾರ್ಪಣೆ ಗೊಳಿಸಲಿದ್ದಾರೆ.[ಸವಿಸವಿ ನೆನಪುಗಳೊಂದಿಗೆ ಸಿಂಗಾರ ಸಮ್ಮೇಳನಕ್ಕೆ ಮಂಗಳ]

ಸಾಂಸ್ಕೃತಿಕ ಕಲಾ ರಸಿಕರ ಮನಸೂರೆಗೊಳಿಸಲು ಪ್ರಭಾತ್ ಕಲಾವಿದರ ಕುಟುಂಬ ಈ ಹಿಂದೆ ನಗರದ ಕೋರಮಂಗಲದಲ್ಲಿ ಕೆಇಎ ಪ್ರಭಾತ್ ರಂಗಮಂದಿರ ಆರಂಭಿಸಿತ್ತು.
ಇದೀಗ ಎನ್.ಆರ್ ಕಾಲನಿಯಲ್ಲಿ ಪ್ರಭಾತ್ ಕಲಾಪೂರ್ಣಿಮಾ ಎಂಬ ಮತ್ತೊಂದು ಅತ್ಯಾಧುನಿಕ ಸುಸಜ್ಜಿತ ಕಲಾ ಮಂದಿರವನ್ನು ಆರಂಭಿಸಲಿದೆ.
ಕಲಾಮಂದಿರದ ಆರಂಭೋತ್ಸವದ ಹಿನ್ನೆಲೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.
ನವೆಂಬರ್ 5ರ ಸಂಜೆ 7 ಗಂಟೆಗೆ ಕಿರುತೆರೆಯ ಖ್ಯಾತ ನಟ, ನಿರ್ದೇಶಕ ಎಸ್.ಎನ್.ಸೇತುರಾಮ್ ಅವರ ತಂಡದಿಂದ 'ಅತೀತ' ಎಂಬ ನಾಟಕ ಪ್ರದರ್ಶನಗೊಳ್ಳಲಿದೆ..[ಹುಚ್ಚೆದ್ದು ಕುಣಿಯುವಂತೆ ಮಾಡಿದ ಜಾನಪದ ಕಲಾವೈಭವ]

ನವೆಂಬರ್ 6ರಂದು ಸಂಜೆ 6.30ಕ್ಕೆ ಖ್ಯಾತ ಕಥಕ್ ಜೋಡಿ ನಿರುಪಮಾ ರಾಜೇಂದ್ರ ಅವರಿಂದ 'ಕಥಾಕೀರ್ತನ' ಎಂಬ ನೃತ್ಯರೂಪಕ ನಡೆಯಲಿದೆ.
ನವೆಂಬರ್ 13ರಂದು ಖ್ಯಾತ ಹಿಂದೂಸ್ಥಾನಿ ಗಾಯಕ ಫಯಾಜ್‌ಖಾನ್ ಅವರಿಂದ ಗಾಯನ ಕಾರ್ಯಕ್ರಮ ಜರುಗಲಿದೆ.
ಮಾಹಿತಿಗಾಗಿ: 96322057799












Click it and Unblock the Notifications