Breaking; ಆನೇಕಲ್‌ನಲ್ಲಿ ರೇವ್ ಪಾರ್ಟಿ, ಯುವತಿಯರ ಅರೆ ನಗ್ನ ನೃತ್ಯ

ಬೆಂಗಳೂರು, ಸೆಪ್ಟೆಂಬರ್ 19; ಪೊಲೀಸರು ಆನೇಕಲ್ ಹೊರವಲಯದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ್ದಾರೆ. ಯುವತಿಯರು ಪಾರ್ಟಿಯಲ್ಲಿ ಅರೆ ನಗ್ನವಾಗಿ ನರ್ತಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಆನೇಕಲ್ ಹೊರವಲಯದ ಖಾಸಗಿ ರೆಸಾರ್ಟ್ ಒಂದರ ನಿರ್ಜನ ಪ್ರದೇಶದಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದಾರೆ.

ಅರ್ಧಂಬಂರ್ಧ ಬಟ್ಟೆ ಹಾಕಿರುವ ಯುವಕ-ಯುವತಿಯರು ರೇವ್ ಪಾರ್ಟಿಯಲ್ಲಿ ನೃತ್ಯ ಮಾಡುತ್ತಿದ್ದರು. ಪಾರ್ಟಿಯಲ್ಲಿ ಡ್ರಗ್ಸ್ ಸಹ ಲಭ್ಯವಿತ್ತು ಎಂಬ ಮಾಹಿತಿ ಸಿಕ್ಕಿದೆ. ಗಾಂಜಾ,‌ ಮರಿಜುವಾನ ಸೇರಿದಂತೆ ವಿವಿಧ ಡ್ರಗ್ಸ್‌ಗಳು ಪಾರ್ಟಿಯಲ್ಲಿದ್ದವು.

 Police Raid On Rave Party At Anekal

ಖಚಿತ ಮಾಹಿತಿ ‌ಮೇರೆಗೆ ದಾಳಿ ಮಾಡಿದ ಆನೇಕಲ್ ಪೊಲೀಸರು ಮಧ್ಯ ರಾತ್ರಿ ಡ್ರಗ್ಸ್ ಪೆಡ್ಲರ್ ಹಿಡಿಯುವ ಆಪರೇಷನ್ ನಡೆಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ಯುವಕ-ಯುವತಿಯರು ಸ್ಥಳದಿಂದ ಪರಾರಿಯಾಗಿದ್ದಾರೆ.

ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಅರೆ ನಗ್ನ ಸ್ಥಿತಿಯಲ್ಲಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ರೇವ್ ಪಾರ್ಟಿಯ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದರು. ಹಲವರು ಡ್ರಗ್ಸ್ ಸೇವಿಸಿರುವುದು ಖಚಿತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗಾಂಜಾ ಸೇವಿಸಿ, ಅಬ್ಬರದ ಸಂಗೀತಕ್ಕೆ ಅರೆಬೆತ್ತಲೆಯಾಗಿ ನೃತ್ಯ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಆನೇಕಲ್ ಬಳಿಕ ತಮ್ಮನಾಯಕನಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ರೇವ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು.

ಆನೇಕಲ್ ಪೊಲೀಸರು ಪಾರ್ಟಿಯಲ್ಲಿದ್ದ 11 ಆರೋಪಿಗಳನ್ನು ಬಂಧಿಸಿದ್ದರು. ಪಾರ್ಟಿಯಲ್ಲಿ ಭಾಗಿಯಾಗಿದ್ದವರಲ್ಲಿ ಅನೇಕರು ಬೆಂಗಳೂರು ನಗರದವರಾಗಿದ್ದರೆ. 6 ಕಾರು, 15 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+