ಜೆಜೆ ನಗರ ಪೊಲೀಸ್ ಪೇದೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಬೆಂಗಳೂರು, ಜನವರಿ 17: ಪೊಲೀಸ್ ಪೇದೆ ಮೇಲೆ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಗರದ ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜೆಜೆ ನಗರ ಠಾಣೆಯ ಪೇದೆ ರಾಜೇಂದ್ರ ಅವರ ಮೇಲೆ ಕೆಲವು ದುಷ್ಕರ್ಮಿಗಳು ಮಂಗಳವಾರ ತಡರಾತ್ರಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿದ್ದು, ತೀರ್ವವಾಗಿ ಗಾಯಗೊಂಡಿರುವ ಪೇದೆ ರಾಜೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೆಜೆ ನಗರ ಸಮೀಪದ ಪಾದರಾಯನಪಾಳ್ಯದ 11ನೇ ಕ್ರಾಸ್‌ನಲ್ಲಿ ಗಟಾಲೆ ನಡೆಯುತ್ತಿದೆ ಎಂದು ಠಾಣೆಗೆ ದೂರವಾಣಿ ಕರೆ ಬಂದ ಕಾರಣ, ಪೇದೆ ರಾಜೇಂದ್ರ ಅವರು ಸ್ಥಳಕ್ಕೆ ತೆರಳಿದ್ದಾರೆ, ಅಲ್ಲಿ ಕೆಲವು ದುಷ್ಕರ್ಮಿಗಳು ಗಲಾಟೆಯಲ್ಲಿ ತೊಡಗಿದ್ದನ್ನು ಕಂಡು ಅವರನ್ನು ವಶಕ್ಕೆ ಪಡೆಯಲು ಹೋದಾಗ ಗಾಂಜಾ ಮತ್ತಿನಲ್ಲಿದ್ದ ದುರ್ಷಕರ್ಮಿಗಳು ರಾಜೇಂದ್ರ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

Police constable attacked by goons

ಮುಂಗೈ, ತಲೆ, ಎದೆಗೆ ತೀರ್ವ ಪೆಟ್ಟಾಗಿರುವ ರಾಜೇಂದ್ರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಕೋರರ ಪತ್ತೆಗೆ ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+