ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ 300 ಕಿ.ಮೀ ವೇಗ: ಬೈಕ್ ಸವಾರ ಅರೆಸ್ಟ್

ಬೆಂಗಳೂರು, ಜುಲೈ 21: ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಸುಮಾರು 300 ಕಿ.ಮೀ ವೇಗದಲ್ಲಿ ಬೈಕ್ ಚಾಲನೆ ಮಾಡಿದ ಯುವಕನನ್ನು ಬೆಂಗಳೂರು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Recommended Video

      Drone Prathap ಜೀವನಾಧಾರಿತ ಸಿನಿಮಾ ಎಲ್ಲಿಗೆ ಬಂತು ? | Oneindia Kannada

      ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‌ ರಸ್ತೆಯಲ್ಲಿ ಬೈಕ್ ಸವಾರನೊಬ್ಬ 299 ಕಿಮೀ ವೇಗದಲ್ಲಿ ಬೈಕ್ ಡ್ರೈವ್ ಮಾಡಿದ್ದಾನೆ. ಬೈಕ್ ಡ್ರೈವ್ ಮಾಡುವ ವೇಳೆ ಇದನ್ನು ವಿಡಿಯೋ ಚಿತ್ರಿಕರಿಸಿರುವ ಯುವಕ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದನು. ಇದು ಎಲ್ಲೆಡೆ ವೈರಲ್ ಆಗಿತ್ತು.

      299 ಕಿ.ಮೀ ವೇಗದ ಬಗ್ಗೆ ಬೈಕ್ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಸಾಮಾಜಿಕ ಕಳಕಳಿ ಹೊಂದಿರುವ ಜನರು ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅತಿ ವೇಗವಾಗಿ ಬೈಕ್ ಡ್ರೈವ್ ಮಾಡಿ, ಅದನ್ನು ಪ್ರಚಾರ ಮಾಡುತ್ತಿರುವುದನ್ನು ಖಂಡಿಸಿದ್ದರು. ಯುವಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.

      ಇದೀಗ, 299 ಕಿ.ಮೀ ವೇಗದಲ್ಲಿ ಬೈಕ್ ಡ್ರೈವ್ ಮಾಡಿ ಹೀರೋ ಎನಿಸಿಕೊಂಡಿದ್ದ ಯುವಕನನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಆತನ ಯಮಹಾ 1000 ಸಿಸಿ ಬೈಕ್ ಸಹ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

      Bengaluru police arrested a person who rode a bike at 300 kmph Speed on Electronic city flyover

      ತನ್ನ ಜೀವವನ್ನು ಅಪಾಯದಲ್ಲಿಟ್ಟು ಬೇರೆಯವರ ಜೀವವನ್ನು ಅಪಾಯಕ್ಕೆ ದೂಡುವ ಪ್ರಯತ್ನ ಮಾಡಿದ್ದ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಲಾಗಿದೆ. ಆತನ ಬೈಕ್ ಸೀಜ್ ಮಾಡಲಾಗಿದೆ ಮತ್ತು ಪ್ರಕರಣವನ್ನು ಸಂಚಾರಿ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+