Peenya Flyover: ಜನವರಿ 16ರಿಂದ 4 ದಿನಗಳ ಕಾಲ ವಾಹನ ಸಂಚಾರ ಬಂದ್-ಯಾಕೆ ಗೊತ್ತಾ? ಪರ್ಯಾಯ ಮಾರ್ಗಗಳ ಕುರಿತಾಗಿಯೂ ತಿಳಿಯಿರಿ
ಬೆಂಗಳೂರು, ಜನವರಿ, 09: ಜನವರಿ 16 ರಂದು ರಾತ್ರಿ 11ರಿಂದ ಜನವರಿ 19ರ ಬೆಳಗ್ಗೆ 11ರವರೆಗೆ ಬೆಂಗಳೂರಿನ ಈ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತದೆ. ಹಾಗಾದರೆ ಈ ನಿರ್ಬಂಧ ಯಾಕೆ ಹಾಗೂ ಯಾವ ಮಾರ್ಗದಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಗರದಿಂದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಮೇಲ್ಸೇತುವೆ 4 ದಿನಗಳ ಕಾಲ ಬಂದ್ ಆಗಲಿದೆ. ಜನವರಿ 16ರ ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11ವರೆಗೆ ಪೀಣ್ಯ ಫ್ಲೈಓವರ್ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಲೋಡ್ ಟೆಸ್ಟಿಂಗ್ ಹಿನ್ನೆಲೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ನಿರ್ಧಾರ ತೆಗೆದುಕೊಂಡಿದೆ. ಒಟ್ಟು 4 ದಿನ ಫ್ಲೈಓವರ್ ಬಂದ್ ಆಗುವುದರಿಂದ ಸರ್ವಿಸ್ ರಸ್ತೆ ಬಳಸುವಂತೆ ಟ್ರಾಫಿಕ್ ಪೊಲೀಸರು ವಾಹನ ಸವಾರರಿಗೆ ಮನವಿ ಮಾಡಿದ್ದಾರೆ.

ಪರ್ಯಾಯ ಮಾರ್ಗಗಗಳ ಮಾಹಿತಿ: ನೆಲಮಂಗಲದಿಂದ ಬೆಂಗಳೂರು ನಗರಕ್ಕೆ ತೆರಳುವ ವಾಹನಗಳಿಗೆ 8ನೇ ಮೈಲಿವರೆಗೆ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವಂತೆ ಸೂಚಿಸಿಲಾಗಿದೆ. ಅಲ್ಲಿಂದ ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್‌ಆರ್‌ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಪಾರ್ಲೆ-ಜಿ ಟೋಲ್ ಕಡೆಗೆ ಹೋಗುವ ವಾಹನಗಳು ಪಕ್ಕದ NH4 ಸರ್ವಿಸ್ ರಸ್ತೆಯಲ್ಲಿ ಸಂಚಾರ ಮಾಡಬಹುದಾಗುದೆ. ಎಸ್‌ಆರ್‌ಎಸ್ ಜಂಕ್ಷನ್‌ನಿಂದ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್ ಮತ್ತು 8ನೇ ಮೈಲಿಯಿಂದ ನೆಲಮಂಗಲ ತಲುಪಬಹುದಾಗಿದ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಫೆಬ್ರವರಿವರೆಗೂ ರೈಲು ಸಂಚಾರ ರದ್ದು
ಹಳಿ ಕಾಮಗಾರಿ ಸೇರಿದಂತೆ ಇನ್ನಿತರೆ ಕಾಮಗಾರಿಗಳು ಇರುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ರೈಲುಗಳನ್ನು ರದ್ದು ಮಾಡಲಾಗುತ್ತದೆ. ಅದೇ ರೀತಿ ಇದೀಗ ಮಥುರಾ ಜಂಕ್ಷನ್‌ನಲ್ಲಿ ಇಂಟರ್‌ಲಾಕ್ ಕಾಮಗಾರಿಯಿಂದಾಗಿ, ಆಗ್ರಾ ವಿಭಾಗದ ನಿಲ್ದಾಣ, ಮುಂಬೈನಿಂದ ಕೆಲವು ಪಶ್ಚಿಮ ರೈಲ್ವೆ ರೈಲುಗಳನ್ನು ಜನವರಿಯಿಂದ ಫೆಬ್ರವರಿಯ ಈ ದಿನಾಂಕದವರೆಗೂ ರದ್ದುಗೊಳಿಸಲಾಗುತ್ತದೆ ಎಂದು ಪಶ್ಚಿಮ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
* ರೈಲು ಸಂಖ್ಯೆ 22209 ಮುಂಬೈ ಸೆಂಟ್ರಲ್-ನವದೆಹಲಿ ಡುರೊಂಟೊ ಎಕ್ಸ್‌ಪ್ರೆಸ್ ಜನವರಿ 8ರಿಂದ ಫೆಬ್ರವರಿ 2ರವರೆಗೆ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 22210 ನವದೆಹಲಿ - ಮುಂಬೈ ಸೆಂಟ್ರಲ್ ಡುರೊಂಟೊ ಎಕ್ಸ್‌ಪ್ರೆಸ್ ಜನವರಿ 9ರಿಂದ ಫೆಬ್ರವರಿ 3ರವರೆಗೆ ರದ್ದಾಗಲಿದೆ ಎಂದು ಪಶ್ಚಿಮ ರೈಲ್ವೆಯ ಮುಖ್ಯ ವಕ್ತಾರ ಸುಮಿತ್ ಠಾಕೂರ್ ತಿಳಿಸಿದ್ದಾರೆ.
* 22917 ಬಾಂದ್ರಾ ಟರ್ಮಿನಸ್-ಹರಿದ್ವಾರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 10ರಿಂದ 31ರವರೆಗೆ ಮತ್ತು ರೈಲು ಸಂಖ್ಯೆ 22918 ಹರಿದ್ವಾರ -ಬಾಂದ್ರಾ ಟರ್ಮಿನಸ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 11ರಿಂದ ಫೆಬ್ರವರಿ 1ರವರೆಗೆ ರದ್ದಾಗಲಿದೆ ಎಂದು ಅವರು ಹೇಳಿದರು.
* 12247 ಬಾಂದ್ರಾ ಟರ್ಮಿನಸ್- ನಿಜಾಮುದ್ದೀನ್ ಯುವ ಎಕ್ಸ್‌ಪ್ರೆಸ್. ಜನವರಿ 12 ರಿಂದ ಫೆಬ್ರುವರಿ 2 ರಿಂದ ರದ್ದಾಗಿರುತ್ತದೆ. ರೈಲು ಸಂಖ್ಯೆ 12248 ಹೆಚ್. ನಿಜಾಮುದ್ದೀನ್ ಬಾಂದ್ರಾ ಟರ್ಮಿನಸ್ ಯುವ ಎಕ್ಸ್‌ಪ್ರೆಸ್ ಜನವರಿ 13 ರಿಂದ ಫೆಬ್ರವರಿ 3ರವರೆಗೆ ರದ್ದಾಗಿರುತ್ತದೆ.
* 22917 ಬಾಂದ್ರಾ ಟರ್ಮಿನಸ್-ಹರಿದ್ವಾರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 10ರಿಂದ 31ರವರೆಗೆ ಮತ್ತು ರೈಲು ಸಂಖ್ಯೆ 22918 ಹರಿದ್ವಾರ - ಬಾಂದ್ರಾ ಟರ್ಮಿನಸ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 11ರಿಂದ ಫೆಬ್ರವರಿ 1ರವರೆಗೆ ರದ್ದಾಗಲಿದೆ ಎಂದು ಅವರು ಹೇಳಿದರು.
* 12247 ಬಾಂದ್ರಾ ಟರ್ಮಿನಸ್- ನಿಜಾಮುದ್ದೀನ್ ಯುವ ಎಕ್ಸ್‌ಪ್ರೆಸ್ ಜನವರಿ 12ರಿಂದ ಫೆಬ್ರುವರಿ 2ರವರೆಗೆ ರದ್ದಾಗುತ್ತದೆ. ರೈಲು ಸಂಖ್ಯೆ 12248 ಹೆಚ್.ನಿಜಾಮುದ್ದೀನ್ ಬಾಂದ್ರಾ ಟರ್ಮಿನಸ್ ಯುವ ಎಕ್ಸ್‌ಪ್ರೆಸ್ ಜನವರಿ 13ರಿಂದ ಫೆಬ್ರವರಿ 3ರವರೆಗೆ ರದ್ದಾಗಲಿದೆ.
* ರೈಲು ಸಂಖ್ಯೆ 22921 ಬಾಂದ್ರಾ ಟರ್ಮಿನಸ್- ಗೋರಖ್‌ಪುರ ಜನವರಿ 21ರಿಂದ ಫೆಬ್ರವರಿ 4ರವರೆಗೆ ರದ್ದಾಗಲಿದೆ. ರೈಲು ಸಂಖ್ಯೆ 22922 ಗೋರಖ್‌ಪುರ - ಬಾಂದ್ರಾ ಟರ್ಮಿನಸ್ ಜನವರಿ 23ರಿಂದ ಫೆಬ್ರವರಿ 6ರವರೆಗೆ ರದ್ದುಗೊಳಿಸಲಿದೆ.
* ರೈಲು ನಂ. 22975 ಬಾಂದ್ರಾ ಟರ್ಮಿನಸ್- ರಾಮನಗರ ಸೂಪರ್‌ಫಾಸ್ಟ್ ಅನ್ನು ಜನವರಿ 25 ಮತ್ತು ಫೆಬ್ರವರಿ 1ರಂದು ರದ್ದಾಗಲಿದೆ. ರೈಲು ನಂ.22976 ರಾಮನಗರ - ಬಾಂದ್ರಾ ಟರ್ಮಿನಸ್ ಸೂಪರ್‌ಫಾಸ್ಟ್ ಅನ್ನು ಜನವರಿ 26 ಮತ್ತು ಫೆಬ್ರವರಿ 2ರಂದು ರದ್ದಾಗಲಿದೆ.
* ರೈಲು ನಂ.22444 ಬಾಂದ್ರಾ ಟರ್ಮಿನಸ್- ಕಾನ್ಪುರ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 26 ಮತ್ತು ಫೆಬ್ರವರಿ 2ರಂದು ರದ್ದಾಗಲಿದೆ. ರೈಲು ನಂ.22443 ಕಾನ್ಪುರ- ಬಾಂದ್ರಾ ಟರ್ಮಿನಸ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 24 ಮತ್ತು 31ರಂದು ರದ್ದಾಗಲಿದೆ. ರೈಲು ಸಂಖ್ಯೆ 20921 ಬಾಂದ್ರಾ ಟರ್ಮಿನಸ್ -ಲಕ್ನೋ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 20ರಿಂದ ಫೆಬ್ರವರಿ 3 ರವರೆಗೆ ರದ್ದಾಗಲಿದೆ.
* ರೈಲು ಸಂಖ್ಯೆ 20922 ಲಕ್ನೋ - ಬಾಂದ್ರಾ ಟರ್ಮಿನಸ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಜನವರಿ 21ರಿಂದ ಫೆಬ್ರವರಿ 4ರವರೆಗೆ ರದ್ದಾಗಲಿದೆ. ರೈಲು ಸಂಖ್ಯೆ 05054 ಬಾಂದ್ರಾ ಟರ್ಮಿನಸ್- ಗೋರಖ್‌ಪುರ ಜನವರಿ 13ರಿಂದ ಫೆಬ್ರವರಿ 3ರವರೆಗೆ ಮತ್ತು ರೈಲು ನಂ.05053 ಗೋರಖ್‌ಪುರ - ಬಾಂದ್ರಾ ಟರ್ಮಿನಸ್ ಜನವರಿ 12ರಿಂದ ಫೆಬ್ರವರಿ 2ರವರೆಗೆ ರದ್ದಾಗಲಿದೆ.












Click it and Unblock the Notifications