'ಕ್ರಿಸ್ಮಸ್, ಹೊಸ ವರ್ಷ, ಸಂಕ್ರಾಂತಿ ಹೆಚ್ಚುವರಿ ರೈಲು ಬೇಕು'

ಬೆಂಗಳೂರು, ಡಿಸೆಂಬರ್ 19: ಕ್ರಿಸ್ಮಸ್, ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿ ಹಬ್ಬಗಳು ಬರುತ್ತಿದ್ದು, ಹೆಚ್ಚಿನ ರೈಲುಗಾಡಿಗಳನ್ನು ಬಿಡುವಂತೆ ನೈರುತ್ಯ ರೈಲ್ವೇ ವಲಯ ಪ್ರಯಾಣಿಕರ ಸಂಘವು ಮನವಿ ಮಾಡಿದೆ.

ನೈರುತ್ಯ ವಲಯದ ಜನರಲ್ ಮ್ಯಾನೇಜರ್ ಅವರಿಗೆ ಸಂಘವು ಪತ್ರ ಬರೆದಿದೆ. ಹಬ್ಬಕ್ಕೆಂದು ಹುಬ್ಬಳ್ಳಿ ಹಾಗೂ ಮೈಸೂರಿಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚಾಗಿದ್ದು, ಹಾಲಿ ಸಂಚರಿಸುತ್ತಿರುವ ರೈಲು ಗಾಡಿಗಳಲ್ಲಿ ರಿಸರ್ವೇಷನ್ ಸಿಗುವುದು ಕಷ್ಟವಾಗಿದೆ.

Passengers demand extra train during Festive Season

ಕೂಡಲೇ ವಿಶೇಷ ರೈಲುಗಾಡಿಗಳನ್ನು ಓಡಿಸಲು ಹಾಗೂ ಹರಿಹರ-ಯಶವಂತಪುರ-ಹರಿಹರ ಇಂಟರ್ಸಿಟಿ ಎಕ್ಸ್ ಪ್ರೆಸ್ ರೈಲು ಗಾಡಿಯನ್ನು ಪ್ರಸ್ತುತ ಯಶವಂತಪುರದಿಂದ ಬೆಂಗಳೂರು ಮೂಲಕ ಕೆಂಗೇರಿ ಅಥವಾ ರಾಮನಗರದವರೆಗೆ ವಿಸ್ತರಿಸುವಂತೆ ಕೋರಲಾಗಿದೆ.

ಶಿರಡಿಗೆ ವಿಶೇಷ ರೈಲು: ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಸಿಗುವ ಸಾಲು ಸಾಲು ರಜೆಗೆ ಸರಿ ಹೊಂದುವಂತೆ ಭಾರತೀಯ ರೈಲ್ವೆಯ ದಕ್ಷಿಣ ಕೇಂದ್ರ ವಿಭಾಗದಿಂದ ಶಿರಡಿಗೆ ಡಿಸೆಂಬರ್ 24ರಂದು ವಿಶೇಷ ರೈಲನ್ನು ಬಿಡಲಾಗುತ್ತಿದೆ.

ಟ್ರೈನ್ ನಂ (07713) ವಿಜಯವಾಡ-ನಾಗರ್ ಸೊಲ್ ವಿಶೇಷ ರೈಲು ವಿಜಯವಾಡದಿಂದ ಡಿಸೆಂಬರ್ 24ರಂದು ಹೊರಟು ನಾಂದೇಡ್, ಮರುದಿನ ನಾಗರಸೋಲ್ ತಲುಪಲಿದೆ.

ರಿಟರ್ನ್ ಜರ್ನಿಯಲ್ಲಿ 07714 ಸಂಖ್ಯೆಯ ರೈಲು ನಾಗರಸೋಲ್ ನಿಂದ ಡಿಸೆಂಬರ್ 25ರಂದು ಹೊರಟು ಔರಂಗಬಾದ್, ನಾಂದೇಡ್ ಮಾರ್ಗವಾಗಿ ವಿಜಯವಾದವನ್ನು ಮಾರನೇ ದಿನ ತಲುಪಲಿದೆ.

ರಾಮೇಶ್ವರಂ ಓಖಾ ಎಕ್ಸ್ ಪ್ರೆಸ್ ತಾಂತ್ರಿಕ ತೊಂದರೆಯಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಪಿಆರ್ ಒ ರಾಜೇಶ್ ಶಿಂಧೆ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+