ಲಗೇಜ್ ಜೊತೆ ಪಟಾಕಿ ತಂದ್ರೆ ಬಸ್ ಹೊರಗೆ ಬಿಸಾಕಿ!

ಬೆಂಗಳೂರು, ನ. 1 : ನವೆಂಬರ್ 1 ಕನ್ನಡ ರಾಜ್ಯೋತ್ಸವದಿಂದ ಹಿಡಿದು ನವೆಂಬರ್ 4ರವರೆಗೆ ದೀಪಾವಳಿ ಮುಗಿಯುವವರೆಗೆ ಸಾಲುಸಾಲು ರಜಾಗಳು ಇರುವುದು ಕನ್ನಡಿಗರಿಗೆ ಭಾರೀ ಖುಷಿ ತಂದಿದ್ದು ಒಂದೆಡೆಯಾದರೆ, ಬಸ್ಸುಗಳಲ್ಲಿ ಪ್ರಯಾಣಿಸುವವರಿಗೆ ಥತ್ತೇರೇಕಿ ಯಾಕಪ್ಪ ಇಷ್ಟೊಂದು ರಜಾಗಳು ಸಾಲುಸಾಲಾಗಿ ಬಂದವು ಎನ್ನುವಂತಾಗಿದೆ.

ಶುಕ್ರವಾರ ಕನ್ನಡ ರಾಜ್ಯೋತ್ಸವವಾದರೆ, ಶನಿವಾರ, ಭಾನುವಾರ ಮತ್ತು ಸೋಮವಾರ ದೀಪಾವಳಿಯ ಸಂಭ್ರಮ. ನಾಲ್ಕು ದಿನ ಭರ್ಜರಿಯಾಗಿ ಮಸ್ತ್ ಮಜಾ ಮಾಡುವ ಅವಕಾಶ. ಇದೇ ಸರಿಯಾದ ಸಮಯವೆಂದು ಸಾವಿರಾರು ಜನರು ಸಾಮಾನು ಸರಂಜಾಮು ರೆಡಿ ಮಾಡಿಕೊಂಡು ಬಸ್ ನಿಲ್ದಾಣಕ್ಕೆ ಹೋದರೆ ಬಸ್ಸಿನ ಟಾಪ್ ಹತ್ತಿ ಕೂಡಬೇಕಷ್ಟೆ.

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಾತ್ರವಲ್ಲ ಯಾವುದೇ ಸೆಟಲೈಟ್ ಬಸ್ ನಿಲ್ದಾಣದಲ್ಲಿ ಜನಸಾಗರ. ಎಲ್ಲೆಲ್ಲೂ ಒಂದು ಕೈಯಲ್ಲಿ ಟ್ರಾಲಿ, ಏರ್ ಬ್ಯಾಗ್, ಸೂಟ್ ಕೇಸ್, ಹ್ಯಾಂಡ್ ಬ್ಯಾಗ್ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಮಕ್ಕಳು ಮರಿಗಳನ್ನು ಎಳೆದುಕೊಂಡು ಯಾವ ಬಸ್ ಹತ್ತಲಿ ಎಂದು ಅಲೆದಾಡುವವರೆ. ಹಲವಾರು ಜನರು ಬಸ್ ಸಹವಾಸವೇ ಬೇಡವೆಂದು ವಾಪಸ್ ಮರಳುತ್ತಿದ್ದಾರೆ.

Passengers allowed, firecrackers not allowed inside buses

ರಾಜ್ಯೋತ್ಸವ ಮತ್ತು ದೀಪಾವಳಿ ಪ್ರಯುಕ್ತ ರಾಜ್ಯ ಸಾರಿಗೆ ಸಂಸ್ಥೆಗ 125 ಹೆಚ್ಚುವರಿ ಬಸ್ಸುಗಳನ್ನು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಟ್ಟಿದ್ದರೂ ಸಾಲುತ್ತಿಲ್ಲ. ಹಗಲು ಹೊತ್ತಿನಲ್ಲಿ ಬುಕ್ಕಿಂಗ್ ಇಲ್ಲದ್ದರಿಂದ ಸಿಕ್ಕ ಬಸ್ ಹತ್ತಲು ಜನರು ನುಗ್ಗುತ್ತಿದ್ದಾರೆ. ಸೀಟು ಸಿಗುವುದಿರಲಿ, ಕನಿಷ್ಠಪಕ್ಷ ಬಸ್ ಒಳಗಡೆ ಹೋದರೂ ಸಾಕು ಎನ್ನುವಂತಾಗಿದೆ.

ಭಾರೀ ನೂಕುನುಗ್ಗಲಿನಿಂದಾಗಿ ಪ್ರಯಾಣಿಕರು ಕೂಡ ಪರದಾಡುವಂತಾಗಿದೆ. ನಾವಾದರೂ ಏನು ಮಾಡುವುದಕ್ಕಾಗುತ್ತದೆ ಎಂದು ಕೆಎಸ್ಸಾರ್ಟಿಸಿ ಬಸ್ ಸಿಬ್ಬಂದಿಗಳು ಕೈಚೆಲ್ಲಿ ಕುಳಿತಿದ್ದಾರೆ. ಸರಕಾರಿ ಬಸ್ ಬೇಡವೆಂದು ಖಾಸಗಿ ಬಸ್ ನತ್ತ ತಿರುಗಿದವರಿಗೆ ಮತ್ತೊಂದು ಭರ್ಜರಿ ಶಾಕ್. ಖಾಸಗಿ ಬಸ್ ಮಾಲಿಕರು ಪ್ರಯಾಣಿಕರಿಂದ ಬೇಕಾಬಿಟ್ಟಿ ಪ್ರಯಾಣ ಶುಲ್ಕವನ್ನು ಕಿತ್ತುಕೊಳ್ಳುತ್ತಿದ್ದಾರೆ.

ಪಟಾಕಿಗೆ ನೋ ಎಂಟ್ರಿ : ಇದು ಸಾಲದೆಂಬಂತೆ, ದೀಪಾವಳಿಗೆಂದು ಊರಿಗೆ ಪಟಾಕಿ ತೆಗೆದುಕೊಂಡು ಹೋಗುತ್ತಿರುವವರನ್ನು ಬಸ್ ಹತ್ತಲು ಸಾರಿಗೆ ಸಿಬ್ಬಂದಿಗಳು ಬಿಡುತ್ತಿಲ್ಲ. ಬಸ್ ಹತ್ತಲೇಬೇಕಿದ್ದರೆ ಪಟಾಕಿಯನ್ನು ಇಲ್ಲೇ ಬಿಟ್ಟು ಹತ್ತಿ ಎಂದು ತಾಕೀತು ಮಾಡುತ್ತಿದ್ದಾರೆ. ಸಾವಿರಾರು ರುಪಾಯಿ ತೆತ್ತು ಪಟಾಕಿ ಕೊಂಡು ತಂದವರಿಗೆ ಇದು ಪೀಕಲಾಟಕ್ಕೆ ಹಿಡಿದುಕೊಂಡಿದೆ.

ಸಾರಿಗೆ ಸಿಬ್ಬಂದಿಗಳು ಹೇಳುವುದು ಕೂಡ ಒಂದು ರೀತಿ ಒಪ್ಪತಕ್ಕ ಮಾತು. ಏಕೆಂದರೆ, ಕೆಲ ದಿನಗಳ ಹಿಂದೆ ಆಂಧ್ರದಲ್ಲಿ ಬಸ್ ಅಪಘಾತ ಸಂಭವಿಸಿ 44 ಜನರು ಅಸುನೀಗಿದ್ದು ಇನ್ನೂ ಕಣ್ಣಮುಂದೆ ಧಿಗ್ಗನೆ ಉರಿಯುತ್ತಿದೆ. ಪಟಾಕಿಗಳು ಸ್ಫೋಟಕ ವಸ್ತುಗಳಾಗಿದ್ದರಿಂದ ಅವರನ್ನು ಬಸ್ ಒಳಗೆ ತರದಂತೆ ನಿಷೇಧಿಸುತ್ತಿರುವುದು ಶ್ಲಾಘನೀಯ ವಿಷಯ. ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ಮತ್ತು ಪ್ರಯಾಣಿಕರಿಗೆ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಶುಭಾಶಯಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+