ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮುನಿರತ್ನ ನಾಯ್ಡು ಪ್ರತಿಕ್ರಿಯೆ
ಬೆಂಗಳೂರು, ಅ. 13: ಆರ್.ಆರ್. ನಗರ ಉಪ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದ ಬೆನ್ನಲ್ಲಿಯೆ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ್ದ ಅವರು ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಪಕ್ಷದ ಎದುರು ನನ್ನ ಬೇಡಿಕೆ ಏನೂ ಇಲ್ಲ. ಹಲವು ಸಲ ಬಿಜೆಪಿ ಕಚೇರಿಗೆ ಬಂದಿದ್ದೇನೆ, ಯಾವಾಗಲೂ ಬರುವ ರೀತಿಯಲ್ಲಿ ಇವತ್ತೂ ಬಂದು ನಾಯಕರನ್ನು ಭೇಟಿ ಮಾಡಿದ್ದೇನೆ ಎಂದಿದ್ದಾರೆ.
Recommended Video
ಉಪ ಚುನಾವಣೆಯಲ್ಲಿ ನನಗೆ ಬಿಜೆಪಿ ಟಿಕೆಟ್ ಕೊಡುವ ವಿಚಾರವನ್ನು ನಾಯಕರು ತೀರ್ಮಾನ ಮಾಡುತ್ತಾರೆ. ಏನೇ ಆದರೂ ಕೂಡಾ ಪಕ್ಷ ಹಾಗೂ ನಾಯಕರ ತೀರ್ಮಾನ ಅಂತಿಮ. ನಮ್ಮ ನಾಯಕರನ್ನು ಭೇಟಿ ಮಾಡಿದ್ದೇನೆ, ಯಾವುದೇ ರಾಜಕೀಯ ಚರ್ಚೆಯನ್ನು ಮಾಡಿಲ್ಲ ಎಂದು ಹೇಳಿದ್ದಾರೆ.

ರಾಜಕೀಯ ಪಕ್ಷ ಅಂದ ಮೇಲೆ ಇದೆಲ್ಲಾ ಸಹಜ. ಡಿಸ್ಟರ್ಬ್ ಆಗುವ ವಿಚಾರವೇ ಇಲ್ಲ. ಕ್ಷೇತ್ರ ಗೊತ್ತಿಲ್ಲದೇ ಇದ್ದರೆ ಗೊಂದಲಕ್ಕೆ ಈಡಾಗಬೇಕು. ನನಗೆ ಕ್ಷೇತ್ರ ಹಾಗೂ ಕ್ಷೇತ್ರದ ಸಮಸ್ಯೆ ಗೊತ್ತಿದೆ. ನಾನು ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಬಿಜೆಪಿ ರಾಷ್ಟ್ರೀಯ ಪಕ್ಷ. ಹಿಂದೆ ಕೂಡಾ ಟಿಕೆಟ್ ಘೋಷಣೆ ವೇಳೆ ವಿಳಂಬ ಆಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.












Click it and Unblock the Notifications