ಬೆಂಗಳೂರಿನಲ್ಲಿ ರೌಡಿ ಶೀಟರ್ ಪಳನಿ ಬರ್ಬರ ಹತ್ಯೆ
ಬೆಂಗಳೂರು, ಜೂನ್ 23: ಬೆಂಗಳೂರಿನಲ್ಲಿ ಮತ್ತೆ ಮಚ್ಚು, ಲಾಂಗು ಝಳಪಿಸಿದೆ! ಇಂದು ಬೆಳಗ್ಗೆ ಬೆಂಗಳೂರಿನ ಬಾಗಲೂರು ಲೇಔಟ್ ನಲ್ಲಿ ರೌಡಿ ಶೀಟರ್ ಪಳನಿ ಬರ್ಬರ ಹತ್ಯೆಯಾಗಿದೆ.
ಬೆಳಗ್ಗೆ 7:05 ರ ಸಮಯದಲ್ಲಿ ರೌಡಿ ಶೀಟರ್ ಹತ್ಯೆಯಾಗಿದ್ದು, ಬೆಳಗ್ಗೆ ಮಾರಕಾಸ್ತ್ರಗಳೊಂದಿಗೆ ಬಂದ ನಾಲ್ವರ ತಂಡ ಇವರನ್ನು ಬರ್ಬರವಾಗಿ ಹತ್ಯೆಗೈದಿದೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಅವರ ಮೃತದೇಹವನ್ನು ಬೆಂಗಳೂರಿನ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯಲಿದೆ. ಸ್ಥಳಕ್ಕೆ ಆಗಮಿಸಿದ್ದ ಕೆ.ಜಿ.ಹಳ್ಳಿ ಪೊಲೀಸರು ಪ್ರಕರರಣ ದಾಖಲಿಸಿಕೊಂಡಿದ್ದಾರೆ.











Click it and Unblock the Notifications