ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿಯ ನಡುವೆ ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿಗಳ ಆಕ್ರೋಶ!

|
Google Oneindia Kannada News

ಬೆಂಗಳೂರು, ಮೇ 9: ''ನಾವು ಕೆಲಸ ಮಾಡೋದಿಲ್ಲ'' ಅಂತ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಯ ಮುಂದೆ ನರ್ಸ್, ಪಿಜಿ ಸ್ಟೂಡೆಂಟ್ಸ್, ವೈದ್ಯರು ಮತ್ತು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ನಡೆದಿದೆ.

Recommended Video

ರಾತ್ರಿ ವೇಳೆ ಮುಸ್ಲಿಂ ಸಮುದಾಯದವರ ಮನೆಗೆ ತೆರಳಿ ರೇಣುಕಾಚಾರ್ಯ ಮಾಡಿದ್ದೇನು? | Renukacharya | Oneindia Kannada

ಕೊರೊನಾ ವೈರಸ್ ಸೋಂಕಿತ ಮಹಿಳೆ ಹಾಗೂ ಆಕೆಯ ಸಂಬಂಧಿಕರು ವಾಣಿ ವಿಲಾಸ್ ಆಸ್ಪತ್ರೆಯ ಎಲ್ಲಾ ಕಡೆ ಓಡಾಡಿದ ಮೇಲೆ ಭಯಭೀತರಾಗಿರುವ ಆಸ್ಪತ್ರೆಯ ಸಿಬ್ಬಂದಿ ''ಕೆಲಸ ಮಾಡುವುದಿಲ್ಲ'' ಎಂದು ಪಟ್ಟು ಹಿಡಿದಿದ್ದಾರೆ.

ಅಬ್ಬಬ್ಬಾ.. ಕರ್ನಾಟಕಕ್ಕೆ ಬರಲು 'ಇಷ್ಟೊಂದು' ಜನ ನೋಂದಣಿ ಮಾಡಿಸಿದ್ದಾರಾ? ಅಬ್ಬಬ್ಬಾ.. ಕರ್ನಾಟಕಕ್ಕೆ ಬರಲು 'ಇಷ್ಟೊಂದು' ಜನ ನೋಂದಣಿ ಮಾಡಿಸಿದ್ದಾರಾ?

ವಾಣಿ ವಿಲಾಸ್ ಆಸ್ಪತ್ರೆಯನ್ನು 'ನಾನ್ ಕೋವಿಡ್' ಆಸ್ಪತ್ರೆಯಂದು ಪರಿಗಣಿಸಲಾಗಿದೆ. ಹೀಗಾಗಿ, ಅಲ್ಲಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಗಳನ್ನು ನೀಡಿಲ್ಲ.

ಸಿಬ್ಬಂದಿಗಳ ಆತಂಕಕ್ಕೆ ಕಾರಣವೇನು?

ಸಿಬ್ಬಂದಿಗಳ ಆತಂಕಕ್ಕೆ ಕಾರಣವೇನು?

'ನಾನ್ ಕೋವಿಡ್' ಆಸ್ಪತ್ರೆಯಂದು ಪರಿಗಣಿಸಲಾಗಿದ್ದರೂ, ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರನ್ನು ಪರೀಕ್ಷೆ ಮಾಡಲಾಗುತ್ತಿದೆ. ಸನ್ನಿವೇಶ ಹೀಗಿದ್ದರೂ, ''ಸೂಕ್ತ ಮುಂಜಾಗ್ರತ ಕ್ರಮಗಳ ಬಗ್ಗೆ ಗಮನ ಹರಿಸಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ'' ಎಂಬುದು ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ.

ಸುರಕ್ಷತೆ ಇಲ್ಲ, ವಿಮೆಯೂ ಇಲ್ಲ!

ಸುರಕ್ಷತೆ ಇಲ್ಲ, ವಿಮೆಯೂ ಇಲ್ಲ!

''ನಮ್ಮನ್ನ ಕೊರೊನಾ ವಾರಿಯರ್ಸ್ ವಿಮೆಗೂ ಸೇರಿಸಿಲ್ಲ. ಇದೀಗ ಕೊರೊನಾ ಸೋಂಕಿತರು ಇಲ್ಲಿ ಭೇಟಿ ಕೊಟ್ಟಿದ್ದಾರೆ. ಹೀಗಿದ್ದರೂ, ಸುರಕ್ಷತೆ ವಹಿಸದೆ ನಮ್ಮನ್ನ ಕೆಲಸ ಮಾಡಿ ಅಂತಿದ್ದಾರೆ'' ಎಂದು ಓರ್ವ ವೈದ್ಯಕೀಯ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

ಸಿಬ್ಬಂದಿಗಳ ಪ್ರಶ್ನೆ

ಸಿಬ್ಬಂದಿಗಳ ಪ್ರಶ್ನೆ

''ಕೇವಲ 30 ಮಂದಿಯನ್ನಷ್ಟು ಕ್ವಾರೆಂಟೈನ್ ಮಾಡಿ. ಉಳಿದವರು ಕೆಲಸ ಮಾಡಿ ಎಂದು ಹೇಳಿದ್ದಾರೆ. ಸೋಂಕಿತರು ಓಡಾಡಿದ್ದ ಎಲ್ಲಾ ಜಾಗದಲ್ಲೂ ನಾವೂ ಕೂಡ ಓಡಾಡಿದ್ದೀವಿ. ಖಾಸಗಿ ಆಸ್ಪತ್ರೆಯಲ್ಲಿ ಹೀಗಾಗಿದ್ದರೆ, ಕ್ಲೋಸ್ ಮಾಡ್ತಾರೆ. ನಮಗೂ ಸೋಂಕು ತಗುಲಿದರೆ ಏನು ಮಾಡೋದು.?'' ಎಂದು ವಾಣಿ ವಿಲಾಸ್ ಆಸ್ಪತ್ರೆಯ ಓರ್ವ ಸಿಬ್ಬಂದಿ ಪ್ರಶ್ನಿಸಿದ್ದಾರೆ.

ಸೋಂಕಿತ ಗರ್ಭಿಣಿ ಮಹಿಳೆ ಓಡಾಟ

ಸೋಂಕಿತ ಗರ್ಭಿಣಿ ಮಹಿಳೆ ಓಡಾಟ

ಕೊರೊನಾ ವೈರಸ್ ಸೋಂಕಿತ ಗರ್ಭಿಣಿ ಮಹಿಳೆಯೊಬ್ಬರು ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಓಡಾಡಿದ ಬಳಿಕ ಸಿಬ್ಬಂದಿ ಫುಲ್ ಟೆನ್ಷನ್ ಆಗಿದ್ದಾರೆ. ಆಡಳಿತ ವಿಭಾಗ ವಿಫಲವಾಗಿರುವ ಕಾರಣ ಆಸ್ಪತ್ರೆಯ ಸಿಬ್ಬಂದಿ ಸಿಡಿದೆದ್ದಿದ್ದಾರೆ.

English summary
Coronavirus: Vani Vilas doctors annoyed after Covid 19 infected patient visits hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X