Nalin Kumar Kateel: ಕಟೀಲ್‌ಗೆ ಟಿಕೆಟ್ ಕೊಡಲು ಒತ್ತಾಯ: ಆನ್‌ಲೈನ್‌ನಲ್ಲಿ ಅಭಿಯಾನ
ಬೆಂಗಳೂರು, ಮಾರ್ಚ್ 06: ಕರ್ನಾಟಕ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು 2009 ರಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದಾರೆ. ಆದರೆ ಅವರಿಗೆ ಈ ಭಾರಿ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೆ 'ನಳಿನ್ ಕುಮಾರ್ ಕಟೀಲ್' ಮತ್ತೊಮ್ಮೆ ಸಂಸದರಾಗಲಿ ಎಂಬ ಕೂಗು ಕೇಳಿ ಬಂದಿದೆ.
ಹೌದು, ಆನ್‌ಲೈನ್ ನಲ್ಲಿ (X) ನಳಿನ್ ಕುಮಾರ್ ಕಟೀಲ್ ಫಾರ್ ದಕ್ಷಿಣ ಕನ್ನಡ' ಎಂಬ ಹ್ಯಾಷ್‌ಟ್ಯಾಗ್ ಭಾರಿ ಸದ್ದು ಮಾಡುತ್ತಿದೆ. ಕರ್ನಾಟಕದ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರು ಆಗಿರುವ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ದಕ್ಷಿಣ ಕನ್ನಡದ ಟಿಕೆಟ್ ನೀಡಬೇಕು ಎಂದು ಅವರ ಬೆಂಬಲಿಗರ ಆಗ್ರಹ ಜೋರಾಗಿದೆ.

ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ಅದೇ ಜಿಲ್ಲೆಯ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಈ ಸಂಬಂಧ ಹಿಂದೂಗಳು ಸಿಡಿದೆದ್ದಿದ್ದರು. ಸ್ವತಃ ರಾಜ್ಯಾಧ್ಯಕ್ಷರು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಾಗ ಕಾರ್ಯಕರ್ತರು ವಿರೋಧಿಸಿದ್ದರು. ಕಾರನ್ನೇ ಬುಡಮೇಲು ಮಾಡುವಷ್ಟು ಆಕ್ರೋಶ ಹೊರ ಹಾಕಿದ್ದರು. ಇದಾದ ಬಳಿಕ ಬಂದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿತು.
Nalin Anna supremacy. #NalinKumarForDakshinaKannada is trending across India. Nalin Anna Hawa it is that Pandey, Raut, Shukla, Paul are wanting him as MP. Such a Nobel Soul MP he is. #NewMPforDK#NoToNalin pic.twitter.com/rXzXcCQ0TX
— Ganesh (@me_ganesh14) March 6, 2024
ಕಟೀಲ್‌ಗೆ ಟಿಕೆಟ್ ತಪ್ಪಲಿದೆಯೇ?
ಇದೆಲ್ಲ ಕಾರಣಗಳಿಂದ ಈ ಬಾರಿ ಬಿಜೆಪಿ ವರಿಷ್ಠರು ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡುವುದು ಬೇಡ ಎಂದು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ. ಇದರ ವಿರುದ್ಧ ನಳಿನ್ ಕುಮಾರ್ ಕಟೀಲ್ ಬೆಂಬಲಿಗರು #NalinKumarForDakshinaKannada ಹ್ಯಾಷ್‌ಟ್ಯಾಗ್‌ನಡಿ ಟ್ವಿಟ್ಟರ್ (x) ನಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸಾಧನೆ, ಅಭಿವೃದ್ಧಿ ಮತ್ತು ವ್ಯಕ್ತಿತ್ವದ ಕುರಿತು ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಮತ್ತೊಮ್ಮ ದಕ್ಷಿಣ ಕನ್ನಡದ ಸಂಸರಾಗಬೇಕು ಎಂದು ಒತ್ತಾಯಿಸಿದ್ದಾರೆ.

ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದು, ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು ಅವರಗೆ ಬಿಜೆಪಿ ಮತ್ತೊಮ್ಮೆ ಟಿಕೆಟ್ ನೀಡುವುದು ನಿಶ್ಚಿತವಾಗಿದೆ. ಅವರು ಈ ಬಾರಿಯು ಸಂಸದರಾಗಿ ಆಯ್ಕೆಯಾಗಲಿದ್ದಾರೆ ಎಂಬುದು ಅವರ ಅಭಿಮಾನಿಗಳು ನಿರೀಕ್ಷೆ ಹೊಂದಿದ್ದಾರೆ.
ಕಟೀಲ್ ಅಭಿಮಾನಿಗಳ ಪೋಸ್ಟ್‌ನಲ್ಲಿ ಏನಿದೆ?
ಅಭಿಯಾನದ ಭಾಗವಾಗಿ ಹಾಕುತ್ತಿರುವ ಪೋಸ್ಟ್‌ನಲ್ಲಿ ಸಂಸದರ ಅಭಿಮಾನಿಗಳು, 'ಉರಿಯೋರು ಭೂದಿಯಾಗುತ್ತಾರೆ, ಕುದಿಯೋರು ಆವಿಯಾಗ್ತಾರೆ. ಈ ಬಾರಿಯೂ ನಮ್ಮಣ್ಣ ನಳಿನ್ ಕುಮಾರ್ ಅವರೇ ಗೆಲ್ತಾರೆ,'ಚಾಲ್ತಿಲಿ ಇಲ್ಲದ ನಾಣ್ಯ ಶಬ್ಧ ಜಾಸ್ತಿ. ಯಾರು ಎಷ್ಟೇ ಬೊಬ್ಬೆ ಹಾಕಿದ್ರೂ ನಮ್ಮಣ್ಣ ನಳಿನ್ ಅವರೇ 2024ರಲ್ಲಿ ಮತ್ತೆ ಎಂಪಿ ಆಗುತ್ತಾರೆ ಬರೆದಿಟ್ಟುಕೊಳ್ಳಿ' ಎಂದೆಲ್ಲ ಪೋಸ್ಟ್‌ಗಳು ಹರಿದಾಡುತ್ತಿವೆ.
ಬಿಜೆಪಿ ನಾಯಕರಿಗೆ ಪೋಸ್ಟ್ ಟ್ಯಾಗ್
'ನಮಗೆ ಯಾವ ಫ್ರೀ ಸ್ಕೀಮೂ ಸಿಗಲಿಲ್ಲ. ಆದರೆ ಈ ಲೋಕಸಭಾ ಚುಣಾವಣೆಯಲ್ಲಿ ನಮ್ಮ ನಾಯಕನ ಗೆಲುವು ಸಂಭ್ರಮಿಸಲು ನಾವೇ ಫ್ರೀ ಪಟಾಕಿ ಹಂಚುತ್ತೇವೆ. ಕರಿ ʻMoney' ಮಾಲೀಕ ನೀವಲ್ಲಾ, ಸಂಘಟನೆಯ ಸಿದ್ಧಾಂತ ಬಿಟ್ಟಿಲ್ಲ.. ನಿಮ್ಮನ್ನು ಗೆಲ್ಲಿಸದಿದ್ದರೆ ದೇವ್ರು ಖಂಡಿತ ಮೆಚ್ಚಲ್ಲ ಅಣ್ಣ' ಎಂದೆಲ್ಲ ಅವರ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡ ಹಾಗೂ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಟ್ಯಾಗ್ ಮಾಡಿದ್ದಾರೆ. ನಳಿನ್ ಕುಮಾರ್ ಅವರನ್ನೇ ಮತ್ತೆ ಎಂಪಿ ಅಭ್ಯರ್ಥಿಯಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಈ ಮೂಲಕ ಕೇಂದ್ರದ ನಾಯಕರ ಗಮನ ಸೆಳೆಯಲು ಮುಂದಾಗಿದ್ದಾರೆ.
-
Bihar: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ನಾಸೀರ್ ಅಹ್ಮದ್ ವಜಾ; ಪಕ್ಷದಲ್ಲಿ ಶಿಸ್ತಿಲ್ಲದಿದ್ದರೆ ಕ್ರಮ ಎಂದ ಡಿಕೆ ಶಿವಕುಮಾರ್ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Upendra: ನಟ ಉಪೇಂದ್ರ ಅವರ "ಪ್ರಜಾಕೀಯ" ಪಕ್ಷದ ವೆಬ್ಸೈಟ್ ಲೋಕಾರ್ಪಣೆ, ಟಿಕೆಟ್ ಆಕಾಂಕ್ಷಿಗಳಿಗೆ ಹೊಸ ರೂಲ್ಸ್ -
ಕೆಲವೇ ಗಂಟೆಗಳಲ್ಲಿ ಇರಾನ್ ಬಂದರುಗಳಿಗೆ ಅಮೆರಿಕದಿಂದ ಕಡಲ ದಿಗ್ಬಂಧನ? ಯುದ್ಧದ ಭೀತಿಯಲ್ಲಿ ಕೊಲ್ಲಿ ರಾಷ್ಟ್ರಗಳು -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ












Click it and Unblock the Notifications