ನ.7ರಂದು ಬೆಂಗಳೂರು-ಬಿಹಾರ ವಿಶೇಷ ರೈಲು ಸಂಚಾರ
ಬೆಂಗಳೂರು, ನವೆಂಬರ್ 05: ನೈಋತ್ಯ ರೈಲ್ವೆ ಬೆಂಗಳೂರು ಮತ್ತು ಬಿಹಾರ ನಡುವೆ ವಿಶೇಷ ರೈಲನ್ನು ಓಡಿಸಲಿದೆ. ವಿಶೇಷ ಪ್ರಯಾಣ ದರ ಹೊಂದಿರುವ ರೈಲು ನವೆಂಬರ್ 7ರಂದು ಯಶವಂತಪುರದಿಂದ ಹೊರಡಲಿದೆ.
06511 ಸಂಖ್ಯೆಯ ವಿಶೇಷ ರೈಲು ಒಂದು ಟ್ರಿಪ್ ಮಾತ್ರ ಸಂಚಾರ ನಡೆಸಲಿದೆ. ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು ಬಿಹಾರ ರಾಜ್ಯದ ಜೈನಗರ ರೈಲು ನಿಲ್ದಾಣವನ್ನು ತಲುಪಲಿದೆ.
ನವೆಂಬರ್ 7ರಂದು ಬೆಳಗ್ಗೆ 11 ಗಂಟೆಗೆ ಯಶವಂತಪುರದಿಂದ ಹೊರಡುವ ರೈಲು ನವೆಂಬರ್ 9ರಂದು ಬೆಳಗ್ಗೆ 11 ಗಂಟೆಗೆ ಜೈನಗರ ತಲುಪಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯಶವಂತಪುರದಿಂದ ಹೊರಡುವ ರೈಲು ಜೋಲಾರಪಟ್ಟಿ,ರೇಣಿಗುಂಟ, ವಿಜಯವಾಡ, ರಾಜಮಂಡ್ರಿ, ಭುವನೇಶ್ವರ್, ಕಟಕ್, ಚಿತ್ತರಂಜನ್, ಸಮಸ್ತಿಪುರ್ ಮತ್ತು ದರ್ಬಾಂಗ್ ಮಾರ್ಗವಾಗಿ ಸಂಚಾರ ನಡೆಸಲಿದೆ.
23 ಬೋಗಿಗಳ ವಿಶೇಷ ರೈಲಿನಲ್ಲಿ 2 ತ್ರಿ ಟಯರ್ ಎಸಿ ಕೋಚ್, 8 ದ್ವಿತೀಯ ದರ್ಜೆ ಸ್ಲೀಪರ್ ಕೋಚ್, 11 ಸಾಮಾನ್ಯ ಸೆಕೆಂಡ್ ಕ್ಲಾಸ್ ಬೋಗಿಗಳಿವೆ. ಈ ರೈಲು ಒಂದು ಟ್ರಿಪ್ ಮಾತ್ರ ಸಂಚಾರ ನಡೆಸಲಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಕೋವಿಡ್ ಲಾಕ್ ಡೌನ್ ಘೋಷಣೆ ಬಳಿಕ ರೈಲುಗಳ ಸಂಚಾರ ಇನ್ನೂ ಸಾಮಾನ್ಯ ಸ್ಥಿತಿಗೆ ಬಂದಿಲ್ಲ. ಅಗತ್ಯ ಇರುವ ಮಾರ್ಗಗಳಲ್ಲಿ ಭಾರತೀಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ದೀಪಾವಳಿ ಹಬ್ಬದ ಅಂಗವಾಗಿ ಹಲವು ರೈಲುಗಳು ಸಂಚಾರ ನಡೆಸುತ್ತಿವೆ.












Click it and Unblock the Notifications