ಒಂದು ಕೊಲೆ ಯತ್ನ: ಹಿಂದಿನ ಆರು ಪ್ರಕರಣಗಳು ರೀ ಓಪನ್
ಬೆಂಗಳೂರು, ಜನವರಿ 18: ಒಂದು ಕೊಲೆ ಯತ್ನದಿಂದ ಹಿಂದಿನ ಎಲ್ಲಾ ಆರು ಪ್ರಕರಣಗಳು ರೀ ಓಪನ್ ಆಗಿವೆ.
ಹಿಂದೂ ಮುಖಂಡನ ಹತ್ಯೆಗೆ ಸ್ಕೆಚ್ ಹಾಕಿದ್ದ ಆರು ಆರೋಪಿಗಳು ಈ ಹಿಂದೆ ಮಾಡಿದ್ದ ಆರು ಪ್ರಕರಣಗಳು ಬೆಳಕಿಗೆ ಬಂದಿವೆ. ಆರು ಆರೋಪಿಗಳು ಆರೋಪಕ್ಕೆ ಸಾಕ್ಷ್ಯವೇ ಇಲ್ಲದ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದರು.
ಈ ಆರು ಆರೋಪಿಗಳ ಪೈಕಿ ನಾಲ್ವರು ಆರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆ ಆರು ಪ್ರಕರಣದಲ್ಲಿ ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣವೂ ಒಂದು ಎಂಬುದು ತಿಳಿದುಬಂದಿದೆ.

ಈ ಎಲ್ಲಾ ಪ್ರಕರಣದಲ್ಲೂ ಪೊಲೀಸರಿಗೆ ಸರಿಯಾದ ಸಾಕ್ಷ್ಯ ಸಿಕ್ಕದೇ ಸಿ-ರಿಪೋರ್ಟ್ ಹಾಕಿದ್ದರು. ಕೊಲೆ ಯತ್ನ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳು ಬೆಂಗಳೂರಿನ ಮೊಹಮದ್ ಖಲಿ ಎಂಬವವರ ಕಾರು ಸುಟ್ಟು ಹಾಕಿದ್ದರು. ಅದರಲ್ಲೂ ಇರ್ಫಾನ್ ಖಲಿಯ ಕಾರನ್ನು ಸುಟ್ಟು ಹಾಕಿದ್ದ.












Click it and Unblock the Notifications