Bengaluru: ತೆರವು ಕಾರ್ಯಾಚರಣೆ ವೇಳೆ ದರ್ಗಾ ಕುಸಿತ, ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ
ಬೆಂಗಳೂರಿನ ಅವೆನ್ಯೂ ರಸ್ತೆ ಬಳಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು, ಮಾರ್ಚ್. 01 : ರಾಜಧಾನಿ ಬೆಂಗಳೂರಿನಲ್ಲಿ ದರ್ಗಾ ಅಧಿಕಾರಿಗಳು ತೆರವು ಕಾರ್ಯಾಚರಣೆ ವೇಳೆ ದರ್ಗಾದ ಒಂದು ಭಾಗವು ಕುಸಿದುಬಿದ್ದು ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಅವೆನ್ಯೂ ರಸ್ತೆ ಬಳಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಕೆಟ್ ವೃತ್ತದ ಬಳಿ ದರ್ಗಾ ಆಡಳಿತ ಮಂಡಳಿ ಅಧಿಕಾರಿಗಳು ದರ್ಗಾ ತೆರವು ಕಾರ್ಯಾಚರಣೆಗೆ ಗುತ್ತಿಗೆ ನೀಡಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಓರ್ವ ಕಾರ್ಮಿಕ ಮೃತಪಟ್ಟಿದ್ದಾರೆ.

"ಅವೆನ್ಯೂ ರಸ್ತೆ, ಮಾರ್ಕೆಟ್ ವೃತ್ತದ ಬಳಿ ದರ್ಗಾ ತೆರವು ಕಾರ್ಯಾಚರಣೆ ಕೆಲಸ ನಡೆಯುತ್ತಿತ್ತು. ಇಬ್ಬರು ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದರು. ಮಂಗಳವಾರ ಇದ್ದಕ್ಕಿದ್ದಂತೆ ದರ್ಗಾದ ಒಂದು ಮಹಡಿ ಕುಸಿದು ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಅಜರ್ ಉಲ್ ಹಕ್ ಎಂಬುವವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ" ಎಂದು ಪಶ್ಚಿಮ ಬೆಂಗಳೂರು ಡಿಸಿಪಿ ಲಕ್ಷ್ಮಣ್ ಬಿ.ನಿಂಬರಗಿ ತಿಳಿಸಿದ್ದಾರೆ.

ದುರ್ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡಿದ್ದು ಅವರನ್ನು ಸಮೀಪದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಶ್ಚಿಮ ಬೆಂಗಳೂರು ಡಿಸಿಪಿ ಲಕ್ಷ್ಮಣ್ ಬಿ.ನಿಂಬರಗಿ ಮಾಹಿತಿ ನೀಡಿದ್ದಾರೆ.
ಅವೆನ್ಯೂ ರಸ್ತೆಯಲ್ಲಿರುವ ಹಜರತ್ ಸೈಯದ್ ಮಹಮೂದ್ ಶಾ ಖಾದಿರಿ ದರ್ಗಾದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಕೋಲ್ಕತ್ತಾ ಮೂಲದ 21 ವರ್ಷದ ಅಜರ್ ಉಲ್ ಹಕ್ ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಮೊಹಮ್ಮದ್ ಸಕಿಮುದ್ದೀನ್ ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ದರ್ಗಾ ಸಮಿತಿಯು ಹಳೆಯ ಕಟ್ಟಡವನ್ನು ತೆಗೆದುಹಾಕಲು ನಿರ್ಧರಿಸಿತ್ತು. ಕಟ್ಟಡ ತೆರುವು ಮಾಡಲು ಖಾಸಗಿ ಗುತ್ತಿಗೆದಾರರಿಗೆ ತೆರವು ಗುತ್ತಿಗೆಯನ್ನು ನೀಡಿತು. ಕಳೆದ ಕೆಲ ದಿನಗಳಿಂದ ಕಟ್ಟಡ ಕೆಡವುವ ಕೆಲಸ ನಡೆಯುತ್ತಿತ್ತು.












Click it and Unblock the Notifications