ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ ಮಿಸ್ಸಿಂಗ್: ಪೊಲೀಸರ ತಲಾಶ್

ಬೆಂಗಳೂರು, ಆಗಸ್ಟ್ 27: ಓಲಾ ಕ್ಯಾಬ್ ನಲ್ಲಿ ತೆರಳುತ್ತಿದ್ದ ವೇಳೆ ಕ್ಯಾಬ್ ಚಾಲಕ ಯುವತಿಗೆ ಮೊಬೈಲ್‌ ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಆಕೆಗೆ ಮುಜುಗರ ಉಂಟು ಮಾಡಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಯುವತಿ ಬೆಳಗ್ಗೆ 6.28ಕ್ಕೆ ಯಲಹಂಕ ನ್ಯೂ ಟೌನ್ ನಿಂದ ಜೆಪಿನಗರದಲ್ಲಿರುವ ಕಚೇರಿಗೆ ತೆರಳಲು ಓಲಾ ಬುಕ್ ಮಾಡಿದ್ದಳು.

ಕ್ಯಾಬ್ ಸಿಗ್ನಲ್ ದಾಟಿದ ಬಳಿಕ ರಿಯರ್ ಮಿರರ್ ಅಲ್ಲಿ ಯುವತಿ ಮುಖ ಕಾಣುವಂತೆ ಹೊಂದಿಕೆ ಮಾಡಿ ಪದೇ ಪದೇ ನೋಡುತ್ತಿದ್ದ, ಸ್ವಲ್ಪ ದೂರ ಹೋದ ನಂತರ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋವನ್ನು ನೋಡುತ್ತಾ ಕ್ಯಾಬ್ ಚಾಲನೆ ಮಾಡುತ್ತಿದ್ದ, ಅಷ್ಟೇ ಅಲ್ಲದೆ ಯುವತಿಗೆ ಆ ವಿಡಿಯೋವನ್ನು ತೋರಿಸಿ ಮುಜುಗರವಾಗುವಂತೆ ನಡೆದುಕೊಂಡಿದ್ದಾನೆ, ಅಷ್ಟೇ ಅಲ್ಲದೆ ಆಕೆ ನಲ್ಲಿಸಲು ಹೇಳಿದ ಸ್ಥಳದಲ್ಲೂ ನಿಲ್ಲಿಸದೆ ಕರೆದೊಯ್ದಿದ್ದ ಎಂದು ಹೇಳಿ ಆಕೆ ದೂರು ದಾಖಲಿಸಿದ್ದಾರೆ.

Ola driver allegedly shown obscene video to lady passenger

ಕ್ಯಾಬ್ ಬುಕ್ ಮಾಡಿದಾಗ ಕೆಎ-53, ಸಿ-9192 ನಂಬರ್ ನ ಕ್ಯಾಬ್ ಎಂದು ಅಪ್ಲಿಕೇಷನ್ ನಲ್ಲಿ ತೋರಿಸುತ್ತಿತ್ತು. ಚಾಲಕನ ಹೆಸರು ದೇವಸಮೋಲಿಯಾ ಎಂದು ತೋರಿಸುತ್ತಿತ್ತು, ಆದರೆ ಕಾರಿನಲ್ಲಿ ಬಂದವ ಬೇರೆಯಾಗಿದ್ದ, ನಾನು ಆತನ ಬಳಿ ಎಲ್ಲಿಯವನು ಎಂದು ವಿಚಾರಿಸಿದಾಗ ಮಧ್ಯ ಪ್ರದೇಶ ಎಂದು ತಿಳಿಸಿದ್ದ. ಯುವತಿ ನೀಡಿದ್ದ ಹೇಳಿಕೆ ಮೇರೆಗೆ ದೂರು ದಾಖಲಿಸಲಾಗಿದೆ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇತ್ತೀಚೆಗೆ ಓಲಾ, ಊಬರ್ ನಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು ಹೆಣ್ಣುಮಕ್ಕಳು ಕ್ಯಾಬ್ ಗಳನ್ನು ಬುಕ್ ಮಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+