ಓಲಾ ಆ್ಯಪ್ ನಲ್ಲಿ ಪೊಲೀಸರಿಗೆ ತುರ್ತು ಸಂದೇಶ ರವಾನೆಗೆ ಅವಕಾಶ
ಬೆಂಗಳೂರು, ಜೂನ್ 8: ಪ್ರಯಾಣಿಕರು ಪೊಲೀಸ್ ನಿಯಂತ್ರಣ ಕೊಠಡಿಗೆ ನೇರವಾಗಿ ಸಂದೇಶ ರವಾನಿಸುವ ವ್ಯವಸ್ಥೆಯನ್ನು ಓಲಾ ಅಪ್ಲಿಕೇಷನ್‌ನನ್ನು ಅಳವಡಿಸಲು ಓಲಾ ಸಂಸ್ಥೆ ಒಪ್ಪಿಗೆ ನೀಡಿದೆ.
ನಗರದಲ್ಲಿ ಮೂರು ದಿನಗಳ ಹಿಂದೆ ತಡರಾತ್ರಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಯುವತಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಕ್ಯಾಬ್‌ನಲ್ಲಿ ಚಲಿಸುವಾಗ ಇಂತಹ ಘಟನೆಗಳು ಸಂಭವಿಸಿದರೆ ತಮ್ಮ ಆಪ್ತರಿಗೆ ಮಾಹಿತಿ ನೀಡಲು ಓಲಾ ಅಪ್ಲಿಕೇಷನ್‌ನಲ್ಲಿ ತುರ್ತು ಸಂಖ್ಯೆಯ ಅವಕಾಶವನ್ನು ನೀಡಲಾಗಿದೆ.
ಅದರಲ್ಲಿ ಐದು ಸಂಖ್ಯೆಯನ್ನು ಪ್ರಯಾಣಿಕರೇ ನಮೂದಿಸಿ, ತುರ್ತು ಸಂದರ್ಭದಲ್ಲಿ ಟ್ಯಾಪ್ ಮಾಡಿ ಮಾಹಿತಿ ರವಾನಿಸಬಹುದು, ಆದರೆ ಅಲ್ಲಿ ಯಾರ ಸಂಖ್ಯೆ ನಮೂದಿಸಲಾಗಿರುತ್ತದೆಯೋ ಅವರಿಗೆ ಮಾತ್ರ ಕರೆ ಹೋಗುತ್ತದೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಬೇಕಾಗುತ್ತದೆ.

ಓಲಾ ಕಂಪನಿಯು ತಮ್ಮ ಕಾರುಗಳಲ್ಲಿರುವಮ ಸುರಕ್ಷತೆ ಕುರಿತು ದಿಢೀರ್ ಪರಿಶೀಲನೆ ನಡೆಸಬೇಕು. ಮಾರ್ಗ ಬದಲಾವಣೆ ಮಾಡಿರುವುದು, ಅರ್ಧಕ್ಕೆ ಟ್ರಿಪ್ ಮುಗಿಸಿಸಿರುವುದು ಸೇರಿದಂತೆ ಒಟ್ಟಾರೆ ಟ್ರಿಪ್ ನ ಪೈಕಿ ಶೇ.10ರಷ್ಟು ಟ್ರಿಪ್‌ಗಳನ್ನು ಲಾಟರಿ ರೀತಿಯಲ್ಲಿ ಆಯ್ಕೆ ಮಾಡಿ ಚಾಲಕರನ್ನು ವಿಚಾರಿಸಬೇಕು. ಇದರಿಂದ ಚಾಲಕರಿಗೆ ತಮ್ಮ ಮೇಲೆ ನಿಗಾ ಇರಿಸಲಾಗಿದೆ ಎಂಬ ಅರಿವು ಇರುತ್ತದೆ ಎಂಬ ಸಲಹೆಯನ್ನು ನೀಡಲಾಗಿದೆ.
ಬೆಂಗಳೂರು ಪೊಲೀಸ್ ಘಟಕದಿಂದ ಈಗಾಗಲೇ ಸುರಕ್ಷತಾ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಎಸ್‌ಒಎಸ್ ಮೇಲೆ ಟ್ಯಾಪ್ ಮಾಡಿದರೆ ಆ ಮಾಹಿತಿಯು ಪೊಲೀಸ್ ನಿಯಂತ್ರಣ ಕೊಠಡಿಗೆ ಬಳಿಕ ಅಲ್ಲಿಂದಪೊಲೀಸರಿಗೆ ಮಾಹಿತಿ ರವಾನೆಯಾಗಲಿದೆ.












Click it and Unblock the Notifications