Odisha Train Accident: ಬೆಂಗಳೂರು ಹೋಟೆಲ್ ಕಾರ್ಮಿಕ ಸಾವು
ಬೆಂಗಳೂರು, ಜೂನ್ 04: ಕಂಡು ಕೇಳರಿಯದ ಒಡಿಶಾ ಸರಣಿ ರೈಲು ಅಫಘಾತಕ್ಕೆ ದೇಶಾದ್ಯಂತ ಜನರ ಮಮ್ಮಲ ಮರುಗಿದ್ದಾರೆ. ಇಂಥದ್ದೊಂದು ಘಟನೆಯಿಂದ ನೂರಾರು ಮಂದಿ ಪ್ರಾಣಬಿಟ್ಟಿದ್ದಾರೆ. ಸಾವಿನ ಸಂಖ್ಯೆ 260ರ ಗಡಿ ದಾಟಿದ್ದು, ಇದರಲ್ಲಿ ಬೆಂಗಳೂರು ಮೂಲದ ವ್ಯಕ್ತಿಯು ಇದ್ದಾರೆ ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ಒಡಿಶಾದಲ್ಲಿ ನಡೆದ ರೈಲು ದುರಂತದಲ್ಲಿ (Odisha Train Accident) ಬೆಂಗಳೂರು ಹೋಟೆಲ್ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಯಶವಂತಪುರದಿಂದ ಕಲ್ಕತ್ತಕಡೆಗೆ ಹೊರಟಿದ್ದ ಹೌರಾ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕರ ಪೈಕಿ ಸುಮಾರು 30ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ. ಈ ಪೈಕಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ, ಹೋಟೆಲ್ ಕಾರ್ಮಿಕ ಮೃತಪಟ್ಟಿದ್ದಾರೆ.

ಮೃತಪಟ್ಟ ವ್ಯಕ್ತಿ/ಕಾರ್ಮಿಕನನ್ನು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ನಿವಾಸಿ ಸಾಗರ್ ಖೇರಿಯಾ (30) ಎಂದು ಗುರುತಿಸಲಾಗಿದೆ. ರೈಲು ದುರಂತದಲ್ಲಿ ಈ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತ ಖೇರಿಯಾ ಅವರು ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರು. ಇವರು ತಮ್ಮೂರಿಗೆ ಹಿಂದಿರುಗುತ್ತಿದ್ದರು. ಈ ಮಧ್ಯೆ ನಡೆದ ಅವಘಡದಲ್ಲಿ ಅವರು ಸಾವನ್ನಪ್ಪಿದ್ದಾರೆ. ಅವರು ಜಲ್ಪೈಗುರಿ ಇತರ ಜಿಲ್ಲೆಯ ನಗರಕಟಾ ಬ್ಲಾಕ್ನಿಂದ ಒಟ್ಟು 13 ಜನರು ತಮ್ಮ ಊರುಗಳತ್ತ ಪ್ರಯಾಣಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಆರು ಮಂದಿಗೆ ಗಾಯ
ಹೀಗೆ ಪಶ್ಚಿಮ ಬಂಗಾಳದತ್ತ ತೆರಳುತ್ತಿದ್ದವರ ಪೈಕಿ ಆರು ಮಂದಿಗೆ ಗಾಯವಾಗಿದೆ, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಅಪಘಾತ ಬಳಿಕ ಕೇಂದ್ರ ಸಚಿವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿಯವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಎಲ್ಲರಿಗೂ ಪರಿಹಾರ ವಿತರಿಸುವುದಾಗಿ, ಗಂಭೀರವಾಗಿ ಗಾಯಗೊಂಡವರಿಗೆ ಎರಡು ಲಕ್ಷ ರೂ. ಹಾಗೂ ತಲಾ 50,000 ರೂ. ಪರಿಹಾರ ಘೋಷಿಸಲಾಗಿದೆ.
ಸಾಗರ್ ಖೇರಿಯಾ ಅವರೊಂದಿಗೆ ಇದ್ದ ಧರ್ಮನಾಥ್ ಸಿಂಗ್ (19) ಮತ್ತು ಅಮನ್ ಒನ್ರಾವ್ (24) ಅನಾರೋಗ್ಯಕ್ಕೆ ತುತ್ತಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಬೆಂಗಳೂರಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಯಾಣದಲ್ಲಿ ರೈಲು ವ್ಯವಸ್ಥಾಪಕರು ಮತ್ತು ಇತರ ಇಬ್ಬರು ಅಂಗವಿಕಲರಿಗಾಗಿ ಎರಡನೇ ದರ್ಜೆಯ ಲಗೇಜ್ ರೇಕ್ (SLRD) ಕೋಚ್‌ಗೆ ಜೋಡಿಸಲಾದ ಗಾರ್ಡ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಆ ಪೈಕಿ ಗಾಯಗೊಂಡವರಿಗೆ ಬಾಲಸೋರ್ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಶುಕ್ರವಾರ ಬೆಂಗಳೂರಿನ ಯಶವಂತಪುರದಿಂದ ಹೌರಾ ಕಡೆಗೆ ಹೊರಟಿದ್ದ 23 ಬೋಗಿಗಳ ಸೂಪರ್‌ಫಾಸ್ಟ್ ರೈಲು ಗಂಟೆಗೆ 90-100 ಕಿಮೀ ಶರವೇಗದಲ್ಲಿ ಚಲಿಸುತ್ತಿತ್ತು. ಒಡಿಶಾದ ಬಹಂಗಾ ಬಜಾರ್ ರೈಲು ನಿಲ್ದಾಣದ ಬಳಿ ರಾತ್ರಿ 7 ಗಂಟೆ ಸುಮಾರಿಗೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶಾಲಿಮಾರ್-ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್‌ನ ಕೋಚ್‌ಗಳಿಗೆ ಹೌರಾ ಎಕ್ಸಪ್ರೆಸ್ ಡಿಕ್ಕಿ ಹೊಡೆದಿದೆ. ಇದರಿಂದ ಅವಘಡ ಸಂಭವಿಸಿದೆ.
ಇದರಲ್ಲಿ ಗುಂಡ್ಲು ಪೇಟೆ ಇಬ್ಬರು ಯುವಕರು ಸೇರಿದಂತೆ 130ಕ್ಕೂ ಅಧಿಕ ಮಂದಿ ಕನ್ನಡಿಗರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ರಕ್ಷಿಸಲಾಗಿದೆ.












Click it and Unblock the Notifications