ಬಿಎಂಟಿಸಿ ಬಸ್ ಮಾಹಿತಿ ಬೇಕಾ ಮೊಬೈಲ್ ನೋಡಿ!

ಬೆಂಗಳೂರು, ಆ.6 : ಬಿಎಂಟಿಸಿ ಬಸ್ ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂದು ಗೊಣಗುತ್ತಾ ಬಸ್ಸಿಗಾಗಿ ಕಾಯುವ ಜನರಿಗೆ ಸಿಹಿ ಸುದ್ದಿಯೊಂದಿದೆ. ಇನ್ನು ಮುಂದೆ ನಿಮ್ಮ ಮೊಬೈಲ್ ಮೂಲಕವೇ ಬಸ್ ಎಲ್ಲಿದೆ?, ಎಷ್ಟು ಹೊತ್ತಿಗೆ ಬರುತ್ತದೆ? ಎಂದು ನೀವು ಮಾಹಿತಿ ಪಡೆಯಬಹುದಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಸುಗಳ ವೇಳಾಪಟ್ಟಿ, ಪ್ರಯಾಣ ದರ ಮುಂತಾದ ಮಾಹಿತಿಗಳನ್ನು ನೀಡಲು ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಿದೆ. ಈ ವ್ಯವಸ್ಥೆ ಮೂಲಕ ನೀವು ಬಸ್‌ ಅವ್ಯವಸ್ಥೆ ಬಗ್ಗೆ ದೂರನ್ನು ಸಹ ಸಲ್ಲಿಸಬಹುದಾಗಿದೆ.

bmtc

ಪ್ರಯಾಣಿಕ ಸ್ನೇಹಿಯಾಗಲು ಬಿಎಂಟಿಸಿ ‘ಸುಲಭ ಪ್ರಯಾಣಕ್ಕೆ ಮಾಹಿತಿ ಯೋಜನೆ' (ಈಸಿ ಟ್ರಾವೆಲ್‌ ಇನ್ಫಾರ್ಮೆಷನ್‌ ಪ್ಲಾನ್‌) ರೂಪಿಸಿದೆ. ಇದರ ಅನ್ವಯ ಈ ಮೊಬೈಲ್ ಅಪ್ಲಿಕೇಶನ್ ತಯಾರಿಸಲಾಗಿದ್ದು, ಆ.15 ಅಥವ 16ರಂದು ಬಿಡುಗಡೆಯಾಗಲಿದೆ. ಈಗಾಗಲೇ ಅಪ್ಲಿಕೇಶನ್ ಸಿದ್ಧಗೊಂಡಿದ್ದು, ಮೊದಲ ಹಂತದಲ್ಲಿ ಪರೀಕ್ಷೆ ನಡೆಸಿದ ಅಧಿಕಾರಿಗಳು ಕೆಲವೊಂದು ಬದಲಾವಣೆ ಮಾಡಲು ಸೂಚನೆ ನೀಡಿದ್ದಾರೆ. [ಲಾಭದಲ್ಲಿ ಓಡುತ್ತಿದೆ ಬಿಎಂಟಿಸಿ]

ಅಪ್ಲಿಕೇಶನ್ ಸಿದ್ಧ : ಬಿಎಂಟಿಸಿ ಆಂಡ್ರಾಯಿಡ್, ಐಫೋನ್‌ ಸೇರಿದಂತೆ ಮೂರು ಬಗೆಯ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸುವ ಕುರಿತು ಗ್ಲೋಬಲ್ಸ್‌ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಐದು ವರ್ಷಗಳ ಕಾಲ ಸಂಸ್ಥೆ ಈ ಅಪ್ಲಿಕೇಶನ್ ಅನ್ನು ನಿರ್ವಹಣೆ ಮಾಡುತ್ತದೆ. ಇದಕ್ಕಾಗಿ ಸಂಸ್ಥೆಗೆ 60 ಲಕ್ಷ ಪಾವತಿ ಮಾಡಲಿದೆ. ಮೂರು ದಿನಗಳ ಹಿಂದೆ ಈ ಅಪ್ಲಿಕೇಶನ್‌ ಮಾದರಿ ಸಿದ್ಧವಾಗಿದೆ. [ವಾಯು ವಜ್ರ ಪ್ರಯಾಣದರ ಹೆಚ್ಚಳ]

ಏನು ಮಾಹಿತಿ ಪಡೆಯಬಹುದು : ಈ ಅಪ್ಲಿಕೇಶನ್ ನಲ್ಲಿ ಪ್ರಯಾಣಿಕರು ಹೊರಡುವ ಸ್ಥಳ, ತಲುಪಬೇಕಾದ ಸ್ಥಳವನ್ನು ಟೈಪ್‌ ಮಾಡಬೇಕು. ಆಗ ಪ್ರಯಾಣದ ಅವಧಿ, ನಡುವಿನ ಬಸ್‌ ನಿಲ್ದಾಣಗಳು, ಲಭ್ಯವಿರುವ ಬಸ್ಸುಗಳು, ಆ ಸ್ಥಳದ ಆಸುಪಾಸಿನಲ್ಲಿರುವ ಪ್ರಮುಖ ಸ್ಥಳಗಳು, ಎಟಿಎಂ, ಹೋಟೆಲ್‌, ಪ್ರಯಾಣದರ ಮುಂತಾದ ಮಾಹಿತಿ ಲಭ್ಯವಾಗುತ್ತಿದೆ. ಪ್ರಯಾಣಿಕರು ಸಿಬ್ಬಂದಿಯ ಅನುಚಿತ ವರ್ತನೆಯ ಬಗ್ಗೆ ಸಹ ಇದರ ಮೂಲಕ ದೂರು ಸಲ್ಲಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+