'ಮೈ ಸಿಟಿ, ಮೈ ಹೀರೋಸ್' ಅವಾರ್ಡ್: ನೀವೇ ನಾಮನಿರ್ದೇಶನ ಮಾಡಿ...
ಬೆಂಗಳೂರು, ಜನವರಿ 7: ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ಬೆಂಗಳೂರು ನಗರದ ಅಭಿವೃದ್ದಿಗೆ ಹಲವರು ದುಡಿದಿದ್ದಾರೆ. ದುಡಿಯುತ್ತಿದ್ದಾರೆ. ಆದರೆ, ಯಾವುದೇ ಪ್ರಚಾರ ಬಯಸದೇ ತಮ್ಮದೇಯಾದ ಇತಿಮಿತಿಯಲ್ಲಿಯೂ ಬೆಂಗಳೂರು ಅಭಿವೃದ್ದಿಗಾಗಿ ಇನ್ನೂ ಅನೇಕರು ನಿಸ್ವಾರ್ಥದಿಂದ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಕಾರಣರಾದ ತೆರೆಮರೆ ನಾಯಕರನ್ನು ಸಾರ್ವಜನಿಕರೇ ಗುರುತಿಸಿ, ಅವರನ್ನು ಬೆಳಕಿಗೆ ತರಲು 'ನಮ್ಮ ಬೆಂಗಳೂರು ಪ್ರಶಸ್ತಿ ಟ್ರಸ್ಟ್' ಅವಕಾಶ ಮಾಡಿಕೊಟ್ಟಿದೆ. 2009 ರಿಂದ ಆರಂಭವಾಗಿರುವ ನಮ್ಮ ಬೆಂಗಳೂರು ಪ್ರಶಸ್ತಿ ಈ ವರ್ಷ 11ನೇ ಆವೃತ್ತಿಯ ಪ್ರಶಸ್ತಿ ನೀಡಲು ಸಿದ್ದತೆ ಮಾಡಿಕೊಂಡಿದೆ. ಇದಕ್ಕಾಗಿ ಬೆಂಗಳೂರಿಗರು ವೆಬ್ ಸೈಟ್ ನಲ್ಲಿ ತಮಗೆ ಸೂಕ್ತ ಅನಿಸಿದವರನ್ನು ನಾಮನಿರ್ದೇಶನ ಮಾಡಬಹುದಾಗಿದೆ.

ಯಾವ ಯಾವ ವಿಭಾಗದಲ್ಲಿ ಪ್ರಶಸ್ತಿ?
ಹನ್ನೊಂದನೆ ಆವೃತ್ತಿಯ ನಮ್ಮ ಬೆಂಗಳೂರು ಪ್ರಶಸ್ತಿಯೂ ಐದು ವಿಭಾಗಗಳಲ್ಲಿ ಪ್ರದಾನ ಮಾಡಲಾಗುತ್ತದೆ.
ವರ್ಷದ ನಾಗರಿಕ (Citizen Individual)
ವರ್ಷದ ಉದಯೋನ್ಮುಖ ತಾರೆ (Rising Star)
ವರ್ಷದ ಮಾಧ್ಯಮ ವ್ಯಕ್ತಿ (Media Individual)
ವರ್ಷದ ಸಾಮಾಜಿಕ ಉದ್ಯಮಿ (Social Enterpreneur)
ವರ್ಷದ ಸರ್ಕಾರಿ ಅಧಿಕಾರಿ (Government Official) ಎಂಬ ಐದು ವಿಭಾಗಗಳಲ್ಲಿ ಬೆಂಗಳೂರಿಗರು ತಮಗೆ ಸೂಕ್ತ ಅನಿಸಿದವರ ಹೆಸರನ್ನು www.nammabengaluruawards.org ನಲ್ಲಿ ಜನವರಿ 31 ರೊಳಗೆ ನಾಮನಿರ್ದೇಶನ ಮಾಡಬಹುದಾಗಿದೆ.

16 ಜನ ಜ್ಯೂರಿಗಳು
ಆಯ್ಕೆ ಸಮಿತಿ, ಪ್ರತಿ ವಿಭಾಗದಲ್ಲಿ ಅತಿ ಹೆಚ್ಚು ನಾಮನಿರ್ದೇಶನಗೊಂಡ ಐವರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತದೆ. ಆ ನಂತರ 'ವರ್ಷದ ನಮ್ಮ ಬೆಂಗಳೂರಿಗ ಪ್ರಶಸ್ತಿ' ಘೋಷಣೆ ಆಗಲಿದೆ. ಆಯ್ಕೆ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಾದ 16 ಜನ (ಜ್ಯೂರಿಗಳು) ಇದ್ದು, 2020 ರ ಮಾರ್ಚ್ 28 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ವೈಯಕ್ತಿಕ ಸಂದರ್ಶನ
ಜನವರಿ 31 ಕ್ಕೆ ನಾಮನಿರ್ದೇಶನ ಪೂರ್ಣಗೊಳ್ಳುತ್ತದೆ. ಫೆಬ್ರುವರಿಯಲ್ಲಿ ನಾಮನಿರ್ದೇಶನಗಳನ್ನು ವಿವರವಾಗಿ ಪರಿಶೀಲಿಸಿ, ಕೆಲವೊಂದು ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ಐದೂ ವಿಭಾಗದಿಂದ 25 ಜನರನ್ನು ಅಂತಿಮಗೊಳಿಸಿ, ಅವರನ್ನು ವೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಆ ನಂತರವೇ ಪ್ರಶಸ್ತಿಗೆ ಭಾಜನರಾದವರ ಹೆಸರುಗಳನ್ನು ಘೋಷಣೆ (ಮಾರ್ಚ್ 28) ಮಾಡಲಾಗುತ್ತದೆ.

ನಾಮನಿರ್ದೇಶನಕ್ಕೆ ಚಾಲನೆ
ನಮ್ಮ ಬೆಂಗಳೂರು ಅವಾರ್ಡ್ ಟ್ರಸ್ಟ್ 'ಮೈ ಸಿಟಿ ಮೈ ಹಿರೋಸ್' (ನಮ್ಮ ಬೆಂಗಳೂರು ಪ್ರಶಸ್ತಿ) ಗೆ ನಾಮನಿರ್ದೇಶನ ಮಾಡಲು ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಮಂಗವಾರ ಚಾಲನೆ ನೀಡಿತು. ಸೇಂಟ್ ಜೋಸೆಪ್ ಕಾಲೇಜು ವಿದ್ಯಾರ್ಥಿಗಳು ಪ್ರಶಸ್ತಿಗೆ ಹೆಸರುಗಳನ್ನು ನಾಮನಿರ್ದೇಶನ ಮಾಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ನಮ್ಮ ಬೆಂಗಳೂರು ಅವಾರ್ಡ ಟ್ರಸ್ಟ್‌ನ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಹಾಜರಿದ್ದರು. ಬೆಂಗಳೂರು ಅಭಿವೃದ್ದಿಗೆ ಯಾವುದೇ ತರದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡಿದವರನ್ನು ಪ್ರಶಸ್ತಿಗೆ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನಾಮನಿರ್ದೇಶನ ಮಾಡಬೇಕು ಎಂದು ಜ್ಯೂರಿಗಳು ಮನವಿ ಮಾಡಿದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications