ವಿಶ್ವ ತಂಬಾಕು ರಹಿತ ದಿನ:ಶಂಕರ್ ಅವರಿಂದ ವ್ಯಂಗ್ಯಚಿತ್ರ ಪ್ರದರ್ಶನ
ಬೆಂಗಳೂರು, ಮೇ : ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ತಂಬಾಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವ್ಯಂಗ್ಯಚಿತ್ರಕಾರ ಶಂಕರ್ ವಿಶೇಷ ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.
ಸ್ಮೋಕ್ ಬಿಡೋಣ, ಜೋಕ್ಸ್‌ಬುಕ್ ಓದೋಣ ಎನ್ನುವ ವಿಷಯದಡಿ ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದು, ಮೇ 31ರಂದು ಬೆಳಗಿನ ಜಾವ 5 ಗಂಟೆಯಿಂದ 7 ಗಂಟೆಯವರೆಗೆ ಬನಶಂಕರಿ ಎರಡನೇ ಹಂತದಲ್ಲಿರುವ ಫೂಟ್ ಪಾತ್ ಗ್ಯಾಲರಿಯಲ್ಲಿ ನಡೆಯಲಿದೆ. ಕಾರ್ಟೂನಿಸ್ಟ್ ಶಂಕರ್ ಅವರು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿಚಾರಗಳು, ಸಾಮಾಜಿಕ ಸಮಸ್ಯೆಗಳ ಬಗ್ಗೆ ತಮ್ಮ ಕಾರ್ಟೂನ್ ಮೂಲಕ ಬೆಳಕು ಚೆಲ್ಲುತ್ತಿದ್ದಾರೆ.
ಏನು? : ವ್ಯಂಗ್ರಚಿತ್ರಕಾರ ಶಂಕರ್ ಅವರಿಂದ ವ್ಯಂಗ್ಯಚಿತ್ರ ಪ್ರದರ್ಶನ
ಎಲ್ಲ? : ಫೂಟ್ ಪಾತ್ ಗ್ಯಾಲರಿ, ಬನಶಂಕರಿ 2 ನೇ ಹಂತ, ಬಿಡಿಎ ಕಾಂಪ್ಲೆಕ್ಸ್ ಎದುರು
ಯಾವಾಗ? : ಮೇ 31, ಬೆಳಗಿನ ಜಾವ ಬೆಳಗ್ಗೆ 5ರಿಂದ 7 ಗಂಟೆ













Click it and Unblock the Notifications