ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನತಾದರ್ಶನ ಇಲ್ಲ

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಸೆ. 16.ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜ್ವರದಿಂದ ಬಳಲುತ್ತಿದ್ದು, ಇಂದು ವಿಶ್ರಾಂತಿ ಪಡೆಯುತ್ತಿದ್ದಾರೆ. ಅಂದಹಾಗೆ ನಾಳೆ ಸೋಮವಾರ (ಸೆ.17) ಅವರು ಕಲಬುರಗಿಗೆ ಭೇಟಿ ನೀಡಿ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ಆದರೆ ಕೆಲವು ಪತ್ರಿಕೆಗಳಲ್ಲಿ ಮುಖ್ಯಮಂತ್ರಿಗಳು ಜನತಾದರ್ಶನ ನಡೆಸುವರು ಎಂದು ವರದಿಯಾಗಿದ್ದು, ಶನಿವಾರದಂದು ಮಾತ್ರ ಜನತಾದರ್ಶನ ನಡೆಸಲಾಗುತ್ತದೆ. ಆದ್ದರಿಂದ ಕಲಬುರಗಿಯಲ್ಲಿ ಜನತಾದರ್ಶನ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಹಿರಿಯಣ್ಣನಂತೆ ವಿಕಲಚೇತನರ ಅಹವಾಲು ಆಲಿಸಿದ ಕುಮಾರಣ್ಣಹಿರಿಯಣ್ಣನಂತೆ ವಿಕಲಚೇತನರ ಅಹವಾಲು ಆಲಿಸಿದ ಕುಮಾರಣ್ಣ

ಶನಿವಾರ (ಸೆ.16) ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಂತ್ರಿಗಳು ಜನತಾದರ್ಶನ ನಡೆಸಿದ್ದರು. ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೇ ಮಧ್ಯಾಹ್ನ ನಿಗದಿತ ಸಮಯಕ್ಕಿಂತ ಒಂದು ತಾಸಿಗೂ ತಡವಾಗಿ ಜನತಾದರ್ಶನ ಕಾರ್ಯಕ್ರಮ ಆರಂಭವಾಯಿತು.

No Janata Darshan in Kalaburagi

ಸುಮಾರು 300 ಜನರು ಜನತಾದರ್ಶನದಲ್ಲಿ ಪಾಲ್ಗೊಂಡು ಅಹವಾಲು ಸ್ವೀಕರಿಸಿದರು. ಬೆಳಗ್ಗೆಯಿಂದಲೇ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ವಿಕಲಚೇತನರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ರಾಜಧಾನಿಯಿಂದ ಹೊರಗಡೆ ನಡೆದ ಮೊದಲ ಜನತಾದರ್ಶನ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಯಿತು.

ರಮೇಶ್ ಕೆನ್ನೆ ಸವರಿದ ಸಿಎಂ, ಅಕ್ಕ ಪಕ್ಕ ಕುಳಿತ ಸತೀಶ್-ಲಕ್ಷ್ಮಿ ಹೆಬ್ಬಾಳ್ಕರ್ರಮೇಶ್ ಕೆನ್ನೆ ಸವರಿದ ಸಿಎಂ, ಅಕ್ಕ ಪಕ್ಕ ಕುಳಿತ ಸತೀಶ್-ಲಕ್ಷ್ಮಿ ಹೆಬ್ಬಾಳ್ಕರ್

ಮಾಜಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ಮತ್ತು ಇತರರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.

English summary
Chief Minister HD Kumaraswamy suffers from fever and is resting today. Accordingly, it is clear that there is no janata darshan in Kalaburagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X