ಮೈಸೂರು ರಸ್ತೆ-ನೈಸ್ ರಸ್ತೆಗೆ ಸಂಪರ್ಕ: ಹೊಸ ರಸ್ತೆ ನಿರ್ಮಾಣ ಆರಂಭ

ಬೆಂಗಳೂರು, ನವೆಂಬರ್ 07: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ಪ್ರಮುಖ ರಸ್ತೆ ಯೋಜನೆಯೊಂದರ ಕಾಮಗಾರಿ ಆರಂಭಿಸಲಿದೆ. ಈ ರಸ್ತೆ ಮೈಸೂರು ರಸ್ತೆ ಮತ್ತು ನೈಸ್‌ ರಸ್ತೆಯನ್ನು ಸಂಪರ್ಕಿಸುತ್ತದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣ ಬಳಿಯಿಂದ ನೇರವಾಗಿ ನೈಸ್‌ ರಸ್ತೆಗೆ ವಾಹನಗಳು ಸಂಚಾರ ನಡೆಸಬಹುದಾಗಿದ್ದು, ಸಂಚಾರ ದಟ್ಟಣೆ ಕಡಿಮೆಯಾಗಲಿದೆ.

ಹೊರ ವರ್ತುಲ ರಸ್ತೆಯನ್ನು ಕೆಲವು ದಿನಗಳ ಹಿಂದೆ ಪರಿಶೀಲನೆ ನಡೆಸಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈ ರಸ್ತೆಯ ಮೇಲಿನ ಒತ್ತಡ ಕಡಿಮೆ ಮಾಡಲು ನೇರವಾಗಿ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಾಣ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

NICE Road To Mysuru Road Link NICE To Take Up New Road Work

ಇದರಿಂದಾಗಿ ಬಿಬಿಎಂಪಿ ದೀಪಾಂಜಲಿ ನಗರ ಬಳಿ ರಸ್ತೆಯ ವಿನ್ಯಾಸವನ್ನು ಬದಲಾವಣೆ ಮಾಡಿ ಮೆಟ್ರೋ ನಿಲ್ದಾಣದ ಬಳಿಯಿಂದ ನೈಸ್ ರಸ್ತೆಯ ಕ್ಲೋವರ್ ಲೀಫ್ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಮಾಡಲು ಮುಂದಾಗಿದೆ, ಕಾಮಗಾರಿ ಆರಂಭಕ್ಕೂ ಮೊದಲು ಹೊಸ ರಸ್ತೆ ವಿನ್ಯಾಸ ಪೂರ್ಣಗೊಳಿಸಲಿದೆ.

ಏನಿದು ಯೋಜನೆ?; ಮೈಸೂರು ಹೊರ ವರ್ತುಲ ರಸ್ತೆಯ ಮೇಲಿನ ಒತ್ತಡ ಕಡಿಮೆ ಮಾಡಲು ನಗರದಿಂದ ನೇರವಾಗಿ ನೈಸ್ ರಸ್ತೆಯ ಕ್ಲೋವರ್ ಲೀಫ್ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸಲು ಹೊಸ ರಸ್ತೆ ನಿರ್ಮಾಣ ಮಾಡುವುದು ಯೋಜನೆಯಾಗಿದೆ. ಪುನರ್ ವಿನ್ಯಾಸ ಕಾರ್ಯ ಒಂದು ವಾರದಲ್ಲಿ ಪೂರ್ಣಗೊಳ್ಳಲಿದ್ದು, ಭೂ ಸ್ವಾಧೀನದ ಕಾರಣ ಯೋಜನೆ ಯಾವಾಗ ಪೂರ್ಣವಾಗಲಿದೆ? ಎಂಬ ಮಾಹಿತಿ ಸಿಕ್ಕಿಲ್ಲ.

ಬಿಬಿಎಂಪಿ ಮುಖ್ಯ ಇಂಜಿನಿಯರ್ (ಯೋಜನೆ) ಎಂ. ಲೋಕೇಶ್ ಹೇಳುವಂತೆ, "ಪಾಲಿಕೆ ಮೈಸೂರು ರಸ್ತೆಯ ಬಿಇಎಲ್‌ ಜಂಕ್ಷನ್‌ನಿಂದ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಾಣ ಮಾಡಲಿದೆ. ಭೂ ಸ್ವಾಧೀನದ ಬಳಿಕ ಕಾಮಗಾರಿಯನ್ನು ನೈಸ್ ಸಂಸ್ಥೆಗೆ ಹಸ್ತಾಂತರ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.

ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಮಾತನಾಡಿ, "ನೈಸ್ ರಸ್ತೆಯಿಂದ ಮೈಸೂರು ರಸ್ತೆಗೆ ನೇರ ಸಂಪರ್ಕ ಕಲ್ಪಿಸುವುದು ಮಹತ್ವದ ಯೋಜನೆಯಾಗಿದೆ. ಯೋಜನೆಗಾಗಿ ನಮ್ಮ ಬಳಿ ಈಗಾಗಲೇ ಶೇ 60ರಷ್ಟು ಸ್ವಾಧೀನ ಪಡಿಸಿಕೊಂಡ ಭೂಮಿ ಇದೆ. ನಾವು ಕೆಐಎಡಿಬಿ ಉಳಿದ ಶೇ 40ರಷ್ಟು ಭೂಮಿ ಹಸ್ತಾಂತರ ಮಾಡಲಿ ಎಂದು ಕಾಯುತ್ತೀದ್ದೇವೆ" ಎಂದು ತಿಳಿಸಿದ್ದಾರೆ.

ಉಳಿದ ಭೂಮಿಯ ಸ್ವಾಧೀನ ಕಾರ್ಯ ಪೂರ್ಣಗೊಂಡ ಬಳಿಕ ನೈಸ್ ಸಂಸ್ಥೆ ಹೊಸ ರಸ್ತೆಯ ಕಾಮಗಾರಿ ಕೈಗೊಳ್ಳಲಿದೆ. ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ 10 ವರ್ಷಗಳ ಹಿಂದೆಯೇ ಪರಿಹಾರವನ್ನು ನೀಡಲಾಗಿದೆ ಎಂಧು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೈಸ್ ರಸ್ತೆಯು ತುಮಕೂರು ರಸ್ತೆಯ ಮಾದಾವರದಿಂದ ಸಾಗುತ್ತದೆ. ಸದ್ಯ ಮೈಸೂರು ಹೊರ ವರ್ತುಲ ರಸ್ತೆಯಿಂದ ನೈಸ್ ರಸ್ತೆಗೆ ನೇರವಾದ ಸಂಪರ್ಕವಿಲ್ಲ. ವಾಹನ ಸವಾರರು ಹೊಸಕೆರೆ ಹಳ್ಳಿ ಪಿಇಎಸ್ ಕಾಲೇಜು ಬಳಿ ಬಂದು ನೈಸ್‌ ರಸ್ತೆ ಮೂಲಕ ಮುಂದೆ ಸಾಗಬೇಕಿದೆ.

ಈ ರಸ್ತೆ ಕಾಮಗಾರಿ ಆರಂಭವಾದರೆ ಮೈಸೂರು ರಸ್ತೆಯಲ್ಲಿ ಉಂಟಾಗುವ ಸಂಚಾರ ದಟ್ಟಣೆ ಕುರಿತು ಈಗಾಗಲೇ ಬಿಬಿಎಂಪಿ ಅಧಿಕಾರಿಗಳು, ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದು ಹಲವು ವರ್ಷಗಳ ಹಿಂದಿನ ಯೋಜನೆಯಾಗಿದೆ. ಆದರೆ ವಿವಿಧ ಕಾರಣದಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ನೈಸ್ ಸಂಸ್ಥೆಯೂ ಸಹ ನ್ಯಾಯಾಲಯದಲ್ಲಿ ಹಲವು ಪ್ರಕರಣ ಎದುರಿಸುತ್ತಿದ್ದ ಕಾರಣ ಯೋಜನೆ ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಈಗ ಕೋರ್ಟ್‌ ಸಹ ಕಾಮಗಾರಿಗೆ ಒಪ್ಪಿಗೆ ನೀಡಿದೆ.

ಬಿಇಎಲ್‌ ಜಂಕ್ಷನ್‌ನಲ್ಲಿ ಬೆಳಗ್ಗೆ ಹೊತ್ತಿನಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ನೈಸ್ ರಸ್ತೆಯೂ ಇಲ್ಲಿಗೆ ಬಂದು ಸೇರಿದರೆ ಭವಿಷ್ಯದಲ್ಲಿ ಇನ್ನಷ್ಟು ಸಂಚಾರ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಬಿಬಿಎಂಪಿ, ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಮೈಸೂರು ರಸ್ತೆ-ನೈಸ್ ರಸ್ತೆ ಲಿಂಕ್ ಆಗಲಿದೆ. ಆಗ ಸಂಚಾರ ದಟ್ಟಣೆಯೂ ಅಧಿಕವಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ವಾಹನ ದಟ್ಟಣೆ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗಿದೆ ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+