Bengaluru Rain Alert: ಇಂದಿನಿಂದ ಜೂ. 2ರ ತನಕ ಭಾರೀ ಗಾಳಿ-ಗುಡುಗು ಸಹಿತ ಮಳೆ

ಬೆಂಗಳೂರು, ಮೇ 30: ಬೆಂಗಳೂರು ನಗರದಲ್ಲಿ ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಸೋಮವಾರ ಸಂಜೆಯಿಂದ ಮತ್ತೆ ಅಬ್ಬರಿಸಲು ಶುರುವಿಟ್ಟುಕೊಂಡಿದ್ದಾನೆ. ಇದೇ ರೀತಿ ಮಂಗಳವಾರ ಸಂಜೆ ನಂತರ ಜೋರು ಗಾಳಿ ಗುಡುಗು ಸಹಿತ ಕೆಲವೆಡೆ ಧಾರಾಕಾರವಾಗಿ ಮಳೆ ಸುರಿಯಲಿದೆ.

ಅಷ್ಟೇ ಅಲ್ಲದೇ ಮುಂದಿನ ಜೂನ್ 02ರವರೆಗೆ ನಗರದ ಬಹುತೇಕ ಕಡೆಗಳಲ್ಲಿ ವ್ಯಾಪಕ ಮಳೆ ಬರುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 40ಕಿಲೋ ಮೀಟರ್‌ ವೇಗದಲ್ಲಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru Rain Alert

ಇಂದು (ಮೇ 30) ಸಂಜೆ ಬಳಿಕ ನಗರದ ವಿವಿಧ ಬಡಾವಣೆಗಳಲ್ಲಿ ಅಬ್ಬರ ಮಳೆ ಕಂಡು ಬರಲಿದೆ. ಗುಡುಗು ಮಿಂಚು ಸಹಿತ ಕೆಲವೆಡೆ ಧಾರಾಕಾರವಾಗಿ ಮಳೆ ಬರಲಿದೆ. ಇನ್ನೂ ಹಲವೆಡೆ ಹಗುರ ಮಳೆ ಇಲ್ಲವೇ ಸಾಧಾರಣ ಮಳೆ ಬೀಳುವ ನಿರೀಕ್ಷೆ ಇದೆ. ಈಗಾಗಲೇ ಬಿದ್ದ ಮಳೆಯಿಂದ ಜನ ಜೀವನ, ಸಂಚಾರ ಅಸ್ತವೆಸ್ತವಾಗಿತ್ತು. ಮರಗಳು, ಮರದ ಕೊಂಬೆಗಳು ನೆಲಕ್ಕೆ ಮುರಿದು ಬಿದ್ದಿದ್ದವು. ಇನ್ನೂ ನೆನ್ನೆ ಸೋಮವಾರದ ಮಳೆಗೆ ಗಾರ್ಮೆಂಟ್ಸ್ ಕಂಪನಿ ಬೃಹತ್ ಕಟ್ಟಡ ಉರುಳಿದಿದೆ.

ಮುಂದಿನ ಜೂನ್ 2 ರವರೆಗೆ ಒಟ್ಟು ಮೂರು ದಿನಗಳಲ್ಲಿ ಸಂಜೆ ನಂತರವೇ ಮಳೆ ಬರಲಿದೆ. ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಅಧಿಕ ಬಿಸಿಲಿನ ತಾಪಾಮನ, ಸೆಕೆಯ ವಾತಾವರಣ ಕಂಡು ಬರಲಿದೆ. ನಂತರದ ಮಬ್ಬು ವಾತಾವರಣ ನಿರ್ಮಾಣದ ಮೂಲಕ ಸಾಧಾರಣದಿಂದ ಉತ್ತಮ ಕೆಲವೊಮ್ಮೆ ಭಾರೀ ಮಳೆ ಆಗಲಿದೆ.

ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31-33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಕಂಡು ಬರುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಳೆ ಮುನ್ಸೂಚನೆಯಲ್ಲಿ ಉಲ್ಲೇಖಿಸಿದೆ.

Bengaluru Rain Alert

ಕಾಂಪೌಂಡ್ ಗೋಡೆ ಕುಸಿತ: ವಾಹನಗಳು ಜಖಂ

ನೆನ್ನೆ ಸೋಮವಾರ ಸಂಜೆ ಸುರಿದ ಮಳೆಗೆ ಕೆಲವೆಡೆ ಭಾರಿ ಸಮಸ್ಯೆ ಸೃಷ್ಟಿಯಾಗಿದ್ದು, ಬಾಗಲಕುಂಟೆಯಲ್ಲಿ ಒಟ್ಟು 21 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಕೆಂಗೇರಿ ಮತ್ತು ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ತಲಾ 20.5 ಮಿ.ಮೀ., ನಾಯಂಡಹಳ್ಳಿ ಮತ್ತು ಹಂಪಿ ನಗರದಲ್ಲಿ ತಲಾ 16 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಈ ವೇಳೆ ಜೋರು ಗಾಳಿ ಬೀಸಿದ್ದರಿಂದ ಹಾಗೂ ಮಳೆಯ ಪ್ರಭಾವದಿಂದಾಗಿ ಮಾಗಡಿ ರಸ್ತೆಯಲ್ಲಿರುವ ಶಾಹಿ ಗಾರ್ಮೆಂಟ್ಸ್ ನ ಕಾಂಪೌಂಡ್ ಕುಸಿದು ಬಿದ್ದಿದೆ. ಪರಿಣಾಮ ಗೋಡ ಪಕ್ಕದಲ್ಲಿ ಪಾರ್ಕ್‌ ಮಾಡಲಾಗಿದ್ದ ಸುಮಾರು 10ಕ್ಕೂ ಹೆಚ್ಚು ದ್ವಿಚಕ್ರವಾಹನಗಳಿಗೆ ಘಾಸಿಯಾಗಿದೆ. ಕೆಲವೆಡೆ ಮರದ ಕೊಂಬೆಗಳು ಬಿದ್ದರೆ, ಇನ್ನು ಹಲವೆಡೆ ಕೆಲ ಕಾಲ ಮುಖ್ಯರಸ್ತೆಗಳು ಕೆರೆಯಂತಾಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+