New Train Service: ಪ್ರಯಾಣಿಕರಿಗೆ ಗುಡ್ ನ್ಯೂಸ್! ಹುಬ್ಬಳ್ಳಿ ಮಾರ್ಗವಾಗಿ ರಾಜಧಾನಿ ಹೊಸ ರೈಲು, ವಿವರ
Karnataka New Rail: ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗಳಿಗೆ ಹೊಸ ರೈಲು ಸೇವೆ ಲಭ್ಯವಾಗುತ್ತಿದೆ. ಮಲೆನಾಡಿನಿಂದ ತಿರುಪತಿಗೆ ಒಂದು ರೈಲು ಸೇವೆ ಸಿಕ್ಕಿದೆ. ಮತ್ತೊಂದು ರೈಲು ಬೆಂಗಳೂರಿಗೆ ಬರಲಿದೆ. ಮಧ್ಯೆ ಕಲ್ಯಾಣ ಕರ್ನಾಟಕದಿಂದ ಉತ್ತರ ಕರ್ನಾಟಕ ಮಾರ್ಗವಾಗಿ ರಾಜಧಾನಿ ಬೆಂಗಳೂರಿಗೆ ಹೊಸ ರೈಲು ಸೇವೆ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಚಾಲನೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧೂನೂರಿನಿಂದ ಬೆಂಗಳೂರಿಗೆ ರೈಲು ಸೇವೆ ನೂತನ ವಿಸ್ತರಣೆಗೊಂಡ ರೈಲು ಸೇವೆಗೆ ಸಿಂಧನೂರಿನಲ್ಲಿ ಶನಿವಾರ ಹಸಿರು ನಿಶಾಣೆ ತೋರಿಸಲಾಯಿತು. ಈ ರೈಲು ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಬಂದು ಸೇರಲಿದೆ. ರೈಲ್ವೆ ಇಲಾಖೆ ಇಲಾಖೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಂದ ಬಳಿಕ ಕ್ರಾಂತಿಕಾರ ಬದಲಾವಣೆಗಳು ಆಗುತ್ತಿವೆ ಎಂದು ವಿ.ಸೋಮಣ್ಣ ಅವರು ತಿಳಿಸಿದರು.

ಈ ಹೊಸ ರೈಲಿನಿಂದ ಕಲ್ಯಾಣ ಕರ್ನಾಟಕದಿಂದ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕಕ್ಕೆ ಸಂಪರ್ಕ ಸಾಧಿಸಿದಂತಾಗಿದೆ. ಈ ಭಾಗದ ಅನೇಕ ಜಿಲ್ಲೆಗಳ ವಿದ್ಯಾರ್ಥಿಗಳು, ವ್ಯಾಪಾರಿಗಳು, ಉದ್ಯೋಗಿಗಳು ಸೇರಿದಂತೆ ಎಲ್ಲ ಸಾರ್ವಜನಿಕರುಗೆ ಅನುಕೂಲವಾಗಲಿದೆ.
ಸಿಂಧನೂರನ್ನು ಮಧ್ಯಾಹ್ನ 01 ಗಂಟೆಗೆ ಬಿಡಲಿದ್ದು, ಅಲ್ಲಿಂದ ಹುಬ್ಬಳ್ಳಿಗೆ ಮೂಲಕ ಬೆಳಗಿನ ಜಾವ 3.55ಕ್ಕೆ ರಾಜಧಾನಿ ಬೆಂಗಳೂರಿಗೆ ಬಂದು ಸೇರಲಿದೆ ಎಂದು ಇದೇ ವೇಳೆ ವಿ.ಸೋಮಣ್ಣ ಅವರು ಮಾಹಿತಿ ನೀಡಿದರು. ಹೊಸ ರೈಲು ಸೇವೆ ಆರಂಭಕ್ಕೆ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಲಿಂಗಸಗೂರಿನ ಶಾಸಕ ಮಾನಪ್ಪ ವಜ್ಜಲ್ ಮತ್ತಿತರರು ಸಾಕ್ಷಿಯಾದರು. ಈ ಭಾಗದಿಂದ ಬೆಂಗಳೂರು ರೈಲು ಸಂಪರ್ಕ ಸಾಧಿಸಿದಕ್ಕೆ ಹರ್ಷ ವ್ಯಕ್ತಪಡಿಸಿದರು.
ಚಿಕ್ಕಮಗಳೂರು-ತಿರುಪತಿ ರೈಲ್ವೆ ಸಂಪರ್ಕ
ಇತ್ತೀಚೆಗೆ ಮೆಲನಾಡಿನ ಚಿಕ್ಕಮಗಳೂರಿನಿಂದ ತಿರುಪತಿ ಸಾಪ್ತಾಹಿಕ ರೈಲ್ವೆ ಸೇವೆ ಆರಂಭಗೊಂಡಿದೆ. ಈ ಮೂಲಕ ಬಹುದಿನಗಳ ಮಲೆನಾಡಿನ ಜನರ ಬೇಡಿಕೆ ಈಡೆರಿದಂತೆ ಈ ರೈಲು ಅರಸಿಕೆರೆ, ಕಡೂರು, ತುಮಕೂರು, ಬೆಂಗಳೂರು, ವೈಟ್‌ಫಿಲ್ಡ್, ಬಂಗಾರಪೇಟೆ ಮೂಲಕ ಸುಮಾರು 20 ರೈಲು ನಿಲ್ದಾಣಗಳ ಮೂಲಕ ಹಾದು ಹೋಗಲಿದೆ.
ಬೆಂಗಳೂರು-ಶಿವಮೊಗ್ಗ ವಂದೇ ಭಾರತ್ ರೈಲು
ಸಂಸದ ಪಿಸಿ. ಮೋಹನ್ ಅವರು ಬೆಂಗಳೂರು-ಶಿವವೊಗ್ಗ ಮಧ್ಯ ಹೊಸ ವಂದೇ ಭಾರತ್ ರೈಲು ಸಂಪರ್ಕ ಶೀಘ್ರವೇ ಕಾರ್ಯಾಚರಣೆ ಮಾಡಲಿದೆ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ಮೂಲಕ ಕರ್ನಾಟಕಕ್ಕೆ 12 ವಂದೇ ಭಾರತ್ ರೈಲು ಸಿಕ್ಕಂತಾಗುತ್ತದೆ. ಸದ್ಯ ಈ ರೈಲು ಯಾವಾಗಿನಿಂದ ಕಾರ್ಯಾಚರಣೆ ಆರಂಭಿಸಲಿದೆ ಎಂಬ ಮಾಹಿತಿ ಸಿಗಬೇಕಿದೆ. ಒಟ್ಟಾರೆ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಬೆಳಗಾವಿ, ಹುಬ್ಬಳ್ಳಿ, ಸಿಂಧನೂರು, ಬೆಂಗಳೂರು ಸೇರಿದಂತೆ ವಿವಿಧ ರೈಲು ಸಂಪರ್ಕ ಮತ್ತಷ್ಟು ಬಲಗೊಂಡಿದೆ.












Click it and Unblock the Notifications