ಹೊಸ ಪ್ರಕರಣ ಇಳಿಕೆ; ಬೆಂಗಳೂರಲ್ಲಿ ಬೆಡ್‌ಗೆ ತಗ್ಗಿದ ಬೇಡಿಕೆ
ಬೆಂಗಳೂರು, ಮೇ 21; ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಇದರಿಂದಾಗಿ ಆಕ್ಸಿಜನ್ ಬೆಡ್‌ಗಳಿಗೆ ಇದ್ದ ಬೇಡಿಕೆಯೂ ಇಳಿಕೆಯಾಗಿದೆ. ಗುರುವಾರದ ವರದಿಯಂತೆ ಬೆಂಗಳೂರಿನ ಸಕ್ರಿಯ ಪ್ರಕರಣಗಳ ಸಂಖ್ಯೆ 306625.
ನಗರದಲ್ಲಿ ಆಕ್ಸಿಜನ್ ಬೆಡ್‌ಗಳಿಗೆ ಇರುವ ಬೇಡಿಕೆ ತಗ್ಗಿದೆ. ಆದರೆ ಹೆಚ್‌ಡಿಯುಎಸ್ ಬೆಡ್‌ಗಳಿಗೆ ಬೇಡಿಕೆ ಇದೆ. ಮೇ 20ರಂದು ಬೆಂಗಳೂರಿನಲ್ಲಿ 9409 ಹೊಸ ಪ್ರಕರಣಗಳು ದಾಖಲಾಗಿದೆ. ಈ ವಾರ ನಗರದಲ್ಲಿ ಹೊಸ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ.
'ಸರ್ಚ್ ಮೈ ಬೆಡ್' ವೆಬ್ ಸೈಟ್‌ನಲ್ಲಿ ಪ್ರತಿ 4 ಗಂಟೆಗೊಮ್ಮೆ ನಗರದ 200 ಖಾಸಗಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಬೆಡ್‌ಗಳ ಮಾಹಿತಿ ಅಪ್‌ಡೇಟ್ ಆಗುತ್ತದೆ. ಬುಧವಾರ ರಾತ್ರಿ ಬೆಡ್‌ಗಳ ಬೇಡಿಕೆ ಕುಸಿದಿದ್ದು, 118 ಬೆಡ್ ಖಾಲಿ ಇದೆ ಎಂದು ತೋರಿಸುತ್ತಿತ್ತು.
ಕೋವಿಡ್ ಕೇರ್ ಸೆಂಟರ್‌ಗಳಲ್ಲಿನ ಬೆಡ್ ಸೇರಿ ಸರ್ಕಾರಿ ಕೋಟಾದಲ್ಲಿರುವ 3,846 ಬೆಡ್‌ಗಳು ಲಭ್ಯವಿದೆ ಎಂದು ಬಿಬಿಎಂಪಿಯ ಬೆಡ್ ನಿರ್ವಹಣೆ ವೆಬ್ ಸೈಟ್ ತೋರಿಸುತ್ತಿತ್ತು. ಜನರಿಗೆ ಬೆಡ್ ಒದಗಿಸಲು 24*7 ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ.

ಎಲ್ಲಿ ಎಷ್ಟು ಬೆಡ್ ಲಭ್ಯ
ಕಿಮ್ಸ್‌ನಲ್ಲಿ 30 ಆಕ್ಸಿಜನ್, 22 ಸಾಮಾನ್ಯ ಬೆಡ್ ಖಾಲಿ ಇದ್ದವು. ಸಪ್ತಗಿರಿ ಆಸ್ಪತ್ರೆಯಲ್ಲಿ 25 ಆಕ್ಸಿಜನ್ ಬೆಡ್, 2 ಸಾಮಾನ್ಯ, ವೆಂಟಿಲೇಟರ್ ಬೆಡ್ ಖಾಲಿ ಇದ್ದವು ಎಂದು ಪೋರ್ಟಲ್‌ನಲ್ಲಿ ದಾಖಲಾಗಿತ್ತು.

ಯಾವ, ಯಾವ ಆಸ್ಪತ್ರೆ
ಕಾರಂತ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 8 ಆಕ್ಸಿಜನ್, ಟ್ರಿನಿಟಿ ಹಾರ್ಟ್ ಫೌಂಡೇಷನ್‌ನಲ್ಲಿ 2 ಆಕ್ಸಿಜನ್, ಪ್ರಮೋದ್ ಆಸ್ಪತ್ರೆಯಲ್ಲಿ 2 ಸಾಮಾನ್ಯ, 2 ಆಕ್ಸಿಜನ್ ಬೆಡ್ ಖಾಲಿ ಇತ್ತು. ಈ ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದ ಖಾಸಗಿ ಆಸ್ಪತ್ರೆ ಬೆಡ್‌ಗಳು ಸಂಪೂರ್ಣ ಭರ್ತಿಯಾಗಿದ್ದವು.

ಹೆಚ್‌ಡಿಯುಎಸ್ ಬೆಡ್
ನಗರದಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್ ಸೌಲಭ್ಯ ಒದಗಿಸಲು ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘಟನೆಯೊಂದರ ಸದಸ್ಯರು ಮಾತನಾಡಿದ್ದು, "ಐಸಿಯು ಮತ್ತು ವೆಂಟಿಲೇಟರ್ ಬೆಡ್ ಬೇಡಿಕೆ ತಗ್ಗಿದೆ. ಆದರೆ ಹೆಚ್‌ಡಿಯು ಬೆಡ್‌ಗಳಿಗೆ ಬೇಡಿಕೆ ಇದೆ" ಎಂದು ಹೇಳಿದ್ದಾರೆ.

ಎಲ್ಲಾ ಆಸ್ಪತ್ರೆಯಲ್ಲೂ ಇಲ್ಲ
ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಅಸೋಸಿಯೇಷನ್ ಅಧ್ಯಕ್ಷ ಡಾ. ಹೆಚ್. ಎಂ. ಪ್ರಸನ್ನ ಮಾತನಾಡಿದ್ದು, "ಬೆಡ್‌ಗಳಿಗಾಗಿ ನಗರದಲ್ಲಿ ಬೇಡಿಕೆ ಶೇ 10ರಷ್ಟು ಕಡಿಮೆ ಆಗಿರಬಹುದು. ಆದರೆ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿಯೂ ಬೆಡ್‌ಗಳು ಲಭ್ಯವಿಲ್ಲ" ಎಂದು ಹೇಳಿದ್ದಾರೆ.
-
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು












Click it and Unblock the Notifications