‘ಡಿಕೆ’ ಬ್ರದರ್ಸ್ ಕಟ್ಟಿಹಾಕಲು ದೇವೇಗೌಡರ ಅಳಿಯ ಲೋಕಸಭೆ ಚುನಾವಣೆ ಅಖಾಡಕ್ಕೆ ಎಂಟ್ರಿ?
ಲೋಕಸಭೆ ಚುನಾವಣೆ 2024 ಹತ್ತಿರ ಬರುತ್ತಿದ್ದಂತೆ ಸೀನ್ ಬೇರೆ ರೀತಿ ಟರ್ನ್ ಆಗುತ್ತಿದ್ದು, ಸಿಕ್ಕಾಪಟ್ಟೆ ಕುತೂಹಲ ಸೃಷ್ಟಿಯಾಗಿದೆ. ಅದ್ರಲ್ಲೂ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ತಮ್ಮ ಬಲ ಪ್ರದರ್ಶನ ಮಾಡಲು ಜೆಡಿಎಸ್ ನಾಯಕರು ಸಜ್ಜಾಗಿದ್ದಾರೆ. ಈ ಸಮಯದಲ್ಲೇ 'ಡಿಕೆ' ಬ್ರದರ್ಸ್ ಕಟ್ಟಿಹಾಕಲು ದೇವೇಗೌಡರ ಅಳಿಯನನ್ನೇ ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿಸಲು, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ರಣತಂತ್ರ ರೂಪಿಸಿದೆಯಂತೆ!
ಹೌದು ಈಗಿರುವ ಮಾಹಿತಿ ಪ್ರಕಾರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದಲೇ ಮಾಜಿ ಪ್ರಧಾನಿ ದೇವೇಗೌಡರ ಅಳಿಯ, ಮತ್ತು ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಅವರು ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಜೆಡಿಎಸ್ ವರಿಷ್ಠ & ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ಬಂದ ಬಳಿಕ ಈ ಬಗ್ಗೆ ದೊಡ್ಡದಾಗಿ ಸುದ್ದಿ ಹಬ್ಬಿದೆ. ಅದ್ರಲ್ಲೂ ಬಿಜೆಪಿ ಕೇಂದ್ರ ನಾಯಕರೇ ಈ ಸಲಹೆ ನೀಡಿ, ಕುಮಾರಸ್ವಾಮಿ ಅವರ ಮನವೊಲಿಸಿದ್ದಾರೆ ಅಂತಾ ಹೇಳಲಾಗುತ್ತಿದೆ. ಈ ನಡುವೆ, ಖುದ್ದು ಅಮಿತ್ ಶಾ ಅವರೇ ಈ ರಣತಂತ್ರ ತಿಳಿಸಿದ್ದಾರೆ ಎಂಬ ಮಾತು ಕೂಡ ಓಡಾಡುತ್ತಿದೆ.

'ಡಿಕೆ' ಬ್ರದರ್ಸ್‌ಗೆ ಭೀಕರ ಸೋಲು?
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 'ಡಿಕೆ' ಬ್ರದರ್ಸ್ ದೊಡ್ಡ ಹಿಡಿತ ಹೊಂದಿದ್ದಾರೆ. ಈ ಪೈಕಿ ಕನಕಪುರ ಸೇರಿ ರಾಮನಗರ ಜಿಲ್ಲೆಯಲ್ಲಿ ದೊಡ್ಡ ಹೆಸರು ಕೂಡ ಇದೆ. ಹೀಗಿದ್ದರೂ, ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ. ಡಿಸಿಎಂ ಡಿಕೆ ಶಿವಕುಮಾರ್ ಅವರ ತಮ್ಮ ಮತ್ತು ಹಾಲಿ ಸಂಸದ ಡಿ.ಕೆ. ಸುರೇಶ್ 4ನೇ ಬಾರಿಗೂ ಕಣಕ್ಕೆ ಇಳಿಯುತ್ತಾರೆ ಎನ್ನಲಾಗಿದೆ. ಇಂತಹ ಸ್ಥಿತಿಯಲ್ಲಿ ಇದೀಗ ದೇವೇಗೌಡರ ಅಳಿಯ & ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಅವರನ್ನೇ ಬೆಂಗಳೂರು ಗ್ರಾಮಾಂತರದ ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಪ್ಲ್ಯಾನ್ ಮಾಡಿದೆ, ಎಂಬ ಸುದ್ದಿ ಹಬ್ಬಿದೆ. ಈ ಮೂಲಕ ಡಿ.ಕೆ. ಸುರೇಶ್ ಅವರನ್ನು ಸೋಲಿಸಲು ರಣತಂತ್ರ ಹೆಣೆಯಲಾಗಿದೆಯಂತೆ.
ಡಿಕೆ ಸುರೇಶ್ ಕ್ಷೇತ್ರ ಬದಲಾವಣೆ?
ಇದು ಒಂದು ಕಡೆಯಾದರೆ ಇನ್ನೊಂದು ಕಡೆ ಕರ್ನಾಟಕ ಹಾಲಿ ಉಪಮುಖ್ಯಮಂತ್ರಿ ಅವರ ತಮ್ಮ, ಅಂದ್ರೆ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಕ್ಷೇತ್ರ ಬದಲಾವಣೆ ಮಾಡ್ತಾರಾ? ಅಂತಾನೂ ಚರ್ಚೆ ಶುರುವಾಗಿದೆ. ಈಗ ಓಡಾಡುತ್ತಿರುವ ಸುದ್ದಿಗಳ ಪ್ರಕಾರ, ಡಿ.ಕೆ. ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಬಿಟ್ಟು ಬೆಂಗಳೂರು ಉತ್ತರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ 2024ರ ಲೋಕಸಭೆ ಚುನಾವಣೆ ಸಖತ್ ಕುತೂಹಲ ಕೆರಳಿಸಿದೆ.
ಒಟ್ನಲ್ಲಿ ಹೀಗೆ 2024ರ ಲೋಕಸಭೆ ಚುನಾವಣೆ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ. ಹೀಗಾಗಿ ಸೋಲು & ಗೆಲುವಿನ ಲೆಕ್ಕಾಚಾರ ಕೂಡ ಬಲು ಜೋರಾಗಿದೆ. ಅದ್ರಲ್ಲೂ ಈಗ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ದೇಶಾದ್ಯಂತ ಭಾರಿ ಕುತೂಹಲ ಕೆರಳಿಸುತ್ತಿದೆ. ಈ ಹಿನ್ನೆಲೆ ಯಾರು ಗೆಲ್ಲುತ್ತಾರೆ? ಯಾರು ಇಲ್ಲಿ ಸೋಲುತ್ತಾರೆ? ಯಾರಿಗೆ ಅಧಿಕಾರ ಸಿಗುತ್ತೆ? ಅನ್ನೋದನ್ನ ಕಾದು ನೋಡಬೇಕಾಗಿದೆ.












Click it and Unblock the Notifications