ಬೆಂಗಳೂರಿನಲ್ಲಿ ನಡೆದ ಹತ್ಯೆಗೆ ಸಕಲೇಶಪುರದ ನಂಟು?

ಬೆಂಗಳೂರು, ನವೆಂಬರ್ 20 : ನಾಯಂಡಹಳ್ಳಿ ವಾರ್ಡ್ ಮಾಜಿ ಕಾರ್ಪೊರೇಟರ್ ರಾಜೇಶ್ವರಿ ಅವರ ಪತಿ ಉಮೇಶ್ ಬೆಳಗೋಡ್ ಅವರನ್ನು ಗುರುವಾರ ರಾತ್ರಿ ಹತ್ಯೆ ಮಾಡಲಾಗಿದೆ. ಉಮೇಶ್ ಅವರನ್ನು ಸಕಲೇಶಪುರ ಮೂಲದವರು ಕೊಲೆ ಮಾಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ.

ಬಿಎಚ್‍ಇಎಲ್ ಉದ್ಯೋಗಿಯಾಗಿದ್ದ ಉಮೇಶ್ ಅವರು ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಉಂಟಾದ ವೈಷಮ್ಯ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರೆದಿದೆ. [ಬೆಂಗಳೂರು ಎಟಿಎಂ ದಾಳಿಗೆ 2 ವರ್ಷ]

murder

ಗುರುವಾರ ರಾತ್ರಿ ಹತ್ಯೆ ನಡೆದಿತ್ತು : ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಾಟಾ ಶೋ ರೂಂ ಬಳಿ ಗುರುವಾರ ಉಮೇಶ್ ಬೆಳಗೋಡ್ ಅವರ ಹತ್ಯೆ ನಡೆದಿತ್ತು. ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಮೂರು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ. [ಛೋಟಾ ಶಕಿಲ್ ಸಹಚರನ ಬಂಧನ]

ನವೆಂಬರ್ 19ರ ಗುರುವಾರ ಉಮೇಶ್ ಅವರ ಪತ್ನಿ ರಾಜೇಶ್ವರಿ ಅವರ ಹುಟ್ಟುಹಬ್ಬ. ರಾತ್ರಿ ಮನೆಗೆ ತೆರಳುತ್ತಿದ್ದಾಗ ಉಮೇಶ್ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಚ್ಚು ಬೀಸಿದ್ದರು. ತಕ್ಷಣ ಕಾರಿನಿಂದ ಇಳಿದು ಪರಾರಿಯಾಗಲು ಯತ್ನಿಸಿದ ಅವರನ್ನು ಅಟ್ಟಾಡಿಸಿಕೊಂಡು ಹೋದ ಹಂತಕರು ನಡುರಸ್ತೆಯಲ್ಲಿ ಕೊಚ್ಚಿ ಪರಾರಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+