ನ್ಯಾಟ್ ಜಿಯೋ ಚಾನಲ್ ಕನ್ನಡಕ್ಕೆ ಡಬ್ ಮಾಡುವಂತೆ ಟ್ವಿಟ್ಟರ್ ಅಭಿಯಾನ
ಬೆಂಗಳೂರು, ಜನವರಿ 31: ವಿಜ್ಞಾನ, ತಂತ್ರಜ್ಞಾನ ಹಾಗೂ ಪ್ರಾಣಿ- ಪಕ್ಷಿಗಳ ಕುರಿತಾಗಿ ಕಾರ್ಯಕ್ರಮ ಪ್ರಸಾರ ಮಾಡುವ ಇಂಗ್ಲಿಷ್ ಚಾನಲ್ ಗಳಾದ ನ್ಯಾಟ್ ಜಿಯೋ ಇಂಡಿಯಾ ಮತ್ತು ನ್ಯಾಟ್ ಜಿಯೋವನ್ನು ಕನ್ನಡಕ್ಕೆ ಡಬ್ ಮಾಡಬೇಕು ಎಂದು ಆಗ್ರಹಿಸಿ ಟ್ವಿಟ್ಟರ್ ಅಭಿಯಾನ ಶುರುವಾಗಿದೆ. ಮಕ್ಕಳ ಜ್ಞಾನಾಭಿವೃದ್ಧಿಗೆ ಇದರಿಂದ ಸಹಕಾರಿ ಆಗುತ್ತದೆ ಎಂಬ ವಾದ ಮುಂದಿಡಲಾಗಿದೆ.
ಈ ರೀತಿ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಡಬ್ ಮಾಡಲು ಒತ್ತಾಯಿಸುವಂಥವರು ಒಂದು ವೇದಿಕೆ ಮೂಲಕ ಆ ಕೆಲಸ ಮಾಡಿದರೆ ಹೆಚ್ಚು ಪರಿಣಾಮಕಾರಿ ಆಗುತ್ತದೆ ಎಂಬ ಕಾರಣಕ್ಕೆ @MediaDec @garyknell ಎಂಬ ಟ್ವಿಟ್ಟರ್ ಖಾತೆಯ ವಿಳಾಸವನ್ನು ಸಹ ನೀಡಲಾಗಿದೆ.

ಯಾವುದೇ ಬಗೆಯಲ್ಲಾದರೂ ಸರಿ, ಡಬ್ಬಿಂಗ್ ಕಾರ್ಯಕ್ರಮಗಳು ಕನ್ನಡದಲ್ಲಿ ಪ್ರಸಾರ ಆಗಲೇಬಾರದು ಎಂಬ ವರ್ಗ ದೊಡ್ಡದಿದೆ. ಅದೇ ವೇಳೆ ಯಾವುದೇ ಭಾಷೆಯಲ್ಲಿರುವ ಉತ್ತಮ ಕಾರ್ಯಕ್ರಮ ಕನ್ನಡಿಗರಿಗೆ ತಲುಪಬೇಕು ಅಂದರೆ ಡಬ್ಬಿಂಗ್ ಮಾಡಲೇಬೇಕು ಎಂದು ಆಗ್ರಹಿಸುವ ವರ್ಗವೂ ಇದೆ. ಒಟ್ಟಾರೆ ಇದು ಚರ್ಚಾಸ್ಪದವಾದ ವಿಚಾರ. ಈ ಬಗೆಗಿನ ನಿರ್ಧಾರ ವೈಯಕ್ತಿಕವಾದದ್ದು.












Click it and Unblock the Notifications