ಪ್ರಸನ್ನ ಕಾರ್ತಿಕ್ ಅವರ 'Narendra Modi for 2019' ಪುಸ್ತಕ ಲೋಕಾರ್ಪಣೆ
ಬೆಂಗಳೂರು, ಜನವರಿ 28: ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಈಗಾಗಲೇ ಅನೇಕ ಪುಸ್ತಗಳು ಬಂದಿವೆ. ಆ ಸಾಲಿಗೆ ಹೊಸ ಸೇರ್ಪಡೆ ವೈಷ್ಣವಿ ಸಾಹಿತ್ಯ ಪ್ರಕಾಶನ ಪ್ರಕಟಿಸಿರುವ, ಪ್ರಸನ್ನ್ ಕಾರ್ತಿಕ್ ಅವರು ಬರೆದಿರುವ ಪುಸ್ತಕ 'Narendra Modi for 2019'.

ಈ ಪುಸ್ತಕವನ್ನು ಡಾ. ಪ್ರಭಾ ಶ್ರೀಧರ್ ಅವರು ಜ.26ರಂದು ಬೆಂಗಳೂರಿನ ರಾಜಾಜೀನಗರದಲ್ಲಿ ಲೋಕಾರ್ಪಣೆ ಮಾಡಿ, ಮಾತನಾಡಿದರು. "ಪ್ರಸನ್ನ ಕಾರ್ತಿಕ್ ಮೋದಿಯವರು ತಂದಿರುವ ಜನಪ್ರಿಯ ಯೋಜನೆಗಳನ್ನು ಪುಸ್ತಕದಲ್ಲಿ ಉಲ್ಲೇಖಿಸುವುದರ ಜೊತೆಗೆ ವಾರಣಾಸಿಗೆ ಹೋಗಿ ಅಲ್ಲಿನ ಜನರೊಂದಿಗೆ ಮಾತನಾಡಿ, ಅಲ್ಲಿ ಮೋದಿಯವರು ಮಾಡಿರುವ ಪ್ರಗತಿ ಕಾರ್ಯಗಳ ಬಗ್ಗೆಯೂ ದಾಖಲಿಸಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಪುಸ್ತಕದ ಬಗ್ಗೆ ಮಾತಾಡಿದ ಲೇಖಕ ಪ್ರಸನ್ನ್ ಕಾರ್ತಿಕ್, "ಮತ್ತೊಮ್ಮೆ ಮೋದಿಯವರು ಯಾಕೆ ಪ್ರಧಾನಿ ಆಗಬೇಕು? ಅವರಿಗೆ ನಾವು ಏಕೆ ಮತ ನೀಡಬೇಕು?" ಎಂಬುದನ್ನು ಈ ಪುಸ್ತಕದಲ್ಲಿ ವಿಸ್ತಾರವಾಗಿ ಬರೆದಿದ್ದೀನಿ" ಎಂದರು. ಈ ಪುಸ್ತಕಗಳ ಜೊತೆಗೆ "ಶೃಂಗೇರಿ ಗುರು ಪರಂಪರೆ ಸ್ತೋತ್ರ" ಮತ್ತು ಬಿ. ಎಸ್. ನಾಗರಾಜ್ ಅವರು ಸಂಗ್ರಹಿಸಿರುವ "ಹೇಮಾದ್ರಂಬ ಸ್ತೋತ್ರ ಮಾಲ" ಪುಸ್ತಕಗಳು ಕೂಡ ಲೋಕಾರ್ಪಣೆಗೊಂಡವು.

ಸಾಕ್ಷ್ಯಚಿತ್ರ ಲೋಕಾರ್ಪಣೆ
ಈ ಪುಸ್ತಕದ ಜೊತೆಗೆ ಪ್ರಸನ್ನಾ ಕಾರ್ತಿಕ್ ಅವರೇ ನಿರ್ದೇಶಿಸಿರುವ, "ಶಾರದ ಪೀಠದ ಗುರುಪರಂಪರೆ" ಸಾಕ್ಷ್ಯಚಿತ್ರವನ್ನು ಅರುಣಾ ಭೀಡೆ ಅವರು ಲೋಕಾರ್ಪಣೆ ಮಾಡಿದರು. ಸಾಕ್ಷ್ಯಚಿತ್ರದ ಬಗ್ಗೆ ಮಾತಾಡಿದ, ಕ್ಯಾಪ್ಟನ್ ಎಸ್ ರಾಮಕೃಷ್ಣನ್, "ಈ ಸಾಕ್ಷ್ಯಚಿತ್ರದಲ್ಲಿ ಶಂಕರಚಾರ್ಯರು ಸ್ಥಾಪಿಸಿದ ಶೃಂಗೇರಿ ಶಾರದ ಪೀಠದ ಎಲ್ಲಾ ಜಗದ್ಗುರುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇದು ನಿಜಕ್ಕೂ ಪ್ರಶಂಸನೀಯ ಕೆಲಸ" ಎಂದರು. ಈ ಸಾಕ್ಷ್ಯಚಿತ್ರಕ್ಕೆ ಗಾಯಕಿ ಇಂಚರಾ ವಿ ಪಥಾಕ್ ಅವರು ಎಲ್ಲ ಜಗದ್ಗುರುಗಳ ಶ್ಲೋಕಗಳನ್ನು ಹಾಡಿದ್ದಾರೆ. ಈಗಾಗಲೇ ಅನೇಕ ಕಾರ್ಯಕ್ರಮಗಳಲ್ಲಿ ಹಾಡಿರುವ ಇವರು, ಮೊದಲ ಬಾರಿಗೆ ಸಾಕ್ಷ್ಯಚಿತ್ರವೊಂದಕ್ಕೆ ಹಾಡಿದ್ಡಾರೆ. "ಮೊದಲ ಬಾರಿಗೆ ಸಾಕ್ಷ್ಯಚಿತ್ರಕ್ಕೆ ಹಾಡಿರುವುದು ಖುಪಿ ಆಗಿದೆ. ಮೊದಲ ಅವಕಾಶದಲ್ಲೇ ೧೨೦೦ವರ್ಷ ಇತಿಹಾಸವುಳ್ಪ್ಳ ಭವ್ಯಗುರು ಪರಂಪರೆಯೊಂದರ ಸಾಕ್ಷ್ಯಚಿತ್ರದಲ್ಲಿ ಭಾಗಿಯಾಗಿದ್ದು ನನ್ನ ಅದೃಷ್ಟ" ಎಂದರು. ಸ್ವಯಂಬು ರೆಕಾರ್ಡ್ಸ್ ಎಂಬ ಸಂಸ್ಥೆ ಈ ಸಾಕ್ಷ್ಯಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ನೀಡಿದೆ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ











Click it and Unblock the Notifications