ದಕ್ಷಿಣದಲ್ಲಿ ನಂದನ್ ನಿಲೇಕಣಿ ಪ್ರಚಾರ ಜೋರು
ಬೆಂಗಳೂರು, ಮಾ. 26 : ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಬುಧವಾರ ಬೆಳಗ್ಗೆ ಕತ್ರಿಗುಪ್ಪೆ, ಗಿರಿನಗರ, ಗಾಂಧಿ ಬಜಾರ್ ಗಳಲ್ಲಿ ಅವರು ಪ್ರಚಾರ ನಡೆಸಿದ್ದಾರೆ. ಬುಧವಾರ ಮಧ್ಯಾಹ್ನ ಗವಿ ಗಂಗಾಧರೇಶ್ವರ ದೇವಾಲಯದಿಂದ ಪದ್ಮನಾಭನಗರದ ತನಕ ರೋಡ್ ಶೋ ನಡೆಸಲಿದ್ದಾರೆ.
ಬುಧವಾರ ಬೆಳಗ್ಗೆ ಕತ್ರಿಗುಪ್ಪೆ ಮತ್ತು ಗಿರಿನಗರದ ಉದ್ಯಾನಗಳಲ್ಲಿ ನಂದನ್ ನಿಲೇಕಣಿ ವಾಕಿಂಗ್ ಗೆ ಬಂದಿದ್ದ ಜನರೊಂದಿಗೆ ಮಾತನಾಡುತ್ತ, ಪ್ರಚಾರ ನಡೆಸಿದರು. ಬಸವನಗುಡಿಯ ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುತ್ತಲೇ ಜನರೊಂದಿಗೆ ಸಂವಾದ ನಡೆಸಿದರು. ಮಧ್ಯಾಹ್ನ ನಂದನ್ ನಿಲೇಕಣಿ ರೋಡ್ ಶೋ ನಡೆಸಲಿದ್ದಾರೆ. [ಮೋದಿ ಮಾತನ್ನು ಕನ್ನಡಲ್ಲಿ ಕೇಳಿ]
ಸದ್ಯದ ಸುದ್ದಿ : ಅನಿವಾರ್ಯ ಕಾರಣದಿಂದಾಗಿ ನಂದನ್ ನಿಲೇಕಣಿ ಅವರು ನಡೆಸಬೇಕಾಗಿದ್ದ ರೋಡ್ ಶೋ ರದ್ದುಗೊಂಡಿದೆ ಎಂದು ನಂದನ್ ನಿಲೇಕಣಿ ಪ್ರತಿಕಾ ಪ್ರಕಟಣೆಯಯಲ್ಲಿ ತಿಳಿಸಿದ್ದಾರೆ.

ಕತ್ರಿಗುಪ್ಪೆ, ಗಿರಿನಗದಲ್ಲಿ ನಿಲೇಕಣಿ ಪ್ರಚಾರ
ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಬುಧವಾರ ಬೆಳಗ್ಗೆ ಅವರು, ಕತ್ರಿಗುಪ್ಪೆ, ಗಿರಿನಗರಲ್ಲಿ ಪ್ರಚಾರ ನಡೆಸಿದರು.

ವಾಯು ವಿಹಾರಿಗಳ ಜೊತೆ ಮಾತುಕತೆ
ಗಿರಿನಗರದ ವಿವೇಕಾನಂದ ಉದ್ಯಾನದಲ್ಲಿಯೂ ನಿಲೇಕಣಿ ಅವರು ವಾಯುವಿಹಾರಿಗಳೊಂದಿಗೆ ಮಾತು ನಡೆಸುತ್ತಲೇ ಪ್ರಚಾರ ಮಾಡಿದರು.

ವಿದ್ಯಾರ್ಥಿ ಭವನದಲ್ಲಿ ಪ್ರಚಾರ
ಬಸವನಗುಡಿಯ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ ನಂದನ್ ನಿಲೇಕಣಿ ಅಲ್ಲನ ಜನರೊಂದಿಗೆ ಮಾತುಕತೆ ನಡೆಸಿದರು. ನಂತರ ಅಲ್ಲಿ ದೋಸೆ ತಿಂದು ಪ್ರಚಾರ ಮುಂದುವರೆಸಿದರು.

ಮಧ್ಯಾಹ್ನ ರೋಡ್ ಶೋ
ನಂದನ್ ನಿಲೇಕಣಿ ಮಧ್ಯಾಹ್ನ 3.00 ಗಂಟೆಗೆ ಗವಿಗಂಗಾಧರೇಶ್ವರ ದೇವಾಲಯದಿಂದ ಪದ್ಮನಾಭನಗರದ ತನಕ ರೋಡ್ ಶೋ ನಡೆಸಲಿದ್ದು, ಸಚಿವ ಕೃಷ್ಣ ಭೈರೇಗೌಡ ಸೇರಿದಂತೆ ಹಲವು ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ರೋಡ್ ಶೋ ಮಾರ್ಗ ನಕ್ಷೆ
ಗವಿಗಂಗಾಧರೇಶ್ವರ ದೇವಾಲಯದಿಂದ ಆರಂಭವಾಗಿ ದಾಸಪ್ಪ ಕಲ್ಯಾಣ ಮಂಟಪ, ಈಶಾನ್ಯ ಗಣಪತಿ ದೇವಸ್ಥಾನ, ಮದುರಮ್ಮ ದೇವಸ್ಥಾನ, ಪೈಪ್ ಲೈನ್, ಕಾಳಿದಾಸ ದೇವಸ್ಥಾನ, 16ನೇ ಮುಖ್ಯ ರಸ್ತೆ, ಶ್ರೀನಗರ ಬಸ್ ನಿಲ್ದಾಣ, ಬ್ಯಾಂಕ್ ಕಾಲೋನಿ, ಶ್ರೀನಿವಾಸನಗರ ಆರ್ಚ್, 4ನೇ ಮೇನ್ ರಸ್ತೆ, ವಿವೇಕಾನಂದ ಬಸ್ ನಿಲ್ದಾಣ, ಕತ್ರಿಗುಪ್ಪೆ ಮುಖ್ಯ ರಸ್ತೆ, ಕತ್ರಿಗುಪ್ಪೆ, ಪದ್ಮನಾಭನಗರ ವಾಟರ್ ಟ್ಯಾಂಕ್, ಇಟ್ಟಮಡು ಮುಖ್ಯ ರಸ್ತೆ, ವಿಬಿ ಬೇಕರಿ ರಸ್ತೆ, ರಾಘವೇಂದ್ರ ಸ್ವಾಮಿ ದೇವಸ್ಥಾನ. [ಚಿತ್ರಗಳಲ್ಲಿ ನೋಡಿ ನಿಲೇಕಣಿ ಪ್ರಚಾರ]
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications