Namma Metro: ನಾಳೆ ಭಾನುವಾರ 'ನಮ್ಮ ಮೆಟ್ರೋ' ಸೇವಾ ಸಮಯದಲ್ಲಿ ಬದಲಾವಣೆ

ಬೆಂಗಳೂರು, ಜೂನ್ 15: ಬೆಂಗಳೂರು ನಮ್ಮ ಮೆಟ್ರೋ ಸೇವೆಯು ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗುತ್ತಿದೆ. ಇದೀಗ ಭಾನುವಾರ ಸಮಯ ಬದಲಾವಣೆ ವಿಚಾರವಾಗಿ ಮತ್ತೆ ಸುದ್ದಿಯಾಗಿದೆ. ನಾಳೆ ಜೂನ್ 16 ರಂದು ಭಾನುವಾರ ನಮ್ಮ ಮೆಟ್ರೋ ಸಂಚಾರ ಸಮಯದಲ್ಲಿ ಬದಲಾವಣೆ ಆಗಿದೆ.

ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ನಾಳೆ ಭಾನುವಾರ ಬೆಳಗ್ಗೆ 07 ಗಂಟೆಗೆ ಬದಲಾಗಿ ಒಂದು ಗಂಟೆ ಬೇಗನೆ ಅಂದರೆ 06 ಗಂಟೆಗೆ ನಾಲ್ಕು ದಿಕ್ಕಿನಲ್ಲೂ ಮೆಟ್ರೋ ಸಂಚಾರ ಸೇವೆ ಆರಂಭಿಸಲಿವೆ ಎಂದು ತಿಳಿಸಿದ್ದಾರೆ.

Namma metro timing change

ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ (UPSC Preliminary Exam 2024) ಇರುವ ಕಾರಣ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಭಾನುವಾರದ ರೈಲು ಸಂಚಾರ ಸೇವೆ ಬೇಗ ಆರಂಭವಾಗಲಿದೆ.

UPSC ಪರೀಕ್ಷೆ ಬರೆಯುವ ಅಭ್ಯರ್ಥಿಗಳು, ಬೇರೆ ಬೇರೆ ಊರುಗಳಿಂದ ಬೆಂಗಳೂರಿಗೆ ಬರುವವರು ಸೇರಿದಂತೆ ಎಲ್ಲ ಪ್ರಯಾಣಿಕರಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ. ಎಲ್ಲ ನಾಲ್ಕು ಟರ್ಮಿನಲ್ ಗಳಾದ ಚಲಘಟ್ಟ, ವೈಟ್‌ಫಿಲ್ಡ್, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆಯ ಕಡೆಯಿಂದ ಬೆಳಗ್ಗೆ 6ಗಂಟೆಗೆ ಮೆಟ್ರೋ ಸೇವೆ ಸಿಗಲಿದೆ.

ಪ್ರಯಾಣಿಕರ ಆಗ್ರಹವೇನು?

ಸಾಮಾನ್ಯ ದಿನಗಳಲ್ಲಿ ನಮ್ಮ ಮೆಟ್ರೋ ರೈಲುಗಳು ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ಬೆಂಗಳೂರಿನ ಲಕ್ಷಾಂತರ ಜನರಿಗೆ ಪ್ರತಿನಿತ್ಯ ಸೇವೆ ನೀಡುತ್ತಿವೆ. ಆದರೆ ಹಿಂದಿನಿಂದಲೂ ಭಾನುವಾರವು ಬೆಳಗ್ಗೆ 7 ಗಂಟೆಗೆ ಬದಲಾಗಿ 6 ಗಂಟೆಗೆ ಸೇವೆ ಆರಂಭಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಲೇ ಇವೆ.

ಹೀಗೆ ಭಾನುವಾರವೇ ಬೆಳಗ್ಗೆ ಬೇಗ ರೈಲು ಸೇವೆ ಆರಂಭಿಸಿದರೆ ಊರಿನಿಂದ ಬರುವವರಿಗೆ, ಭಾನುವಾರವೂ ಕಚೇರಿ, ಇನ್ನಿತರ ಕಾರ್ಯಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಕುರಿತು ನಮ್ಮ ಮೆಟ್ರೋ ಅಧಿಕಾರಿಗಳು ಪರಿಶೀಲಿಸುವುದಾಗಿ ಈ ಹಿಂದೊಮ್ಮೆ ಭರವಸೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+