ನಮ್ಮ ಮೆಟ್ರೋ ಸಿಬ್ಬಂದಿಗಳು ಇನ್ನು ಮುಷ್ಕರ ಹೂಡುವಂತಿಲ್ಲ
ಬೆಂಗಳೂರು, ನವೆಂಬರ್ 23 : ಕರ್ನಾಟಕ ಸರ್ಕಾರ ಬೆಂಗಳೂರಿನ 'ನಮ್ಮ ಮೆಟ್ರೋ'ವನ್ನು ಸಾರ್ವಜನಿಕ ಸೇವೆ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ನಮ್ಮ ಮೆಟ್ರೋ ಸಿಬ್ಬಂದಿಗಳು ಇನ್ನು ಮುಂದೆ ಯಾವುದೇ ನೋಟಿಸ್ ನೀಡದೆ ಮುಷ್ಕರ ಹೂಡುವಂತಿಲ್ಲ.
ಕಾರ್ಮಿಕ ಇಲಾಖೆ ನಮ್ಮ ಮೆಟ್ರೋ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಾರ್ವಜನಿಕ ಸೇವೆ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಆರು ವಾರಗಳ ಮೊದಲು ನೋಟಿಸ್ ನೀಡದೆ ನಮ್ಮ ಮೆಟ್ರೋ ಸಿಬ್ಬಂದಿ ಮುಷ್ಕರ ಮಾಡುವಂತಿಲ್ಲ.
ಇದುವರೆಗೂ ಬಿಎಂಆರ್‌ಸಿಎಲ್‌ಗೆ ಎರಡು ವಾರಗಳ ಮೊದಲು ನೋಟಿಸ್ ನೀಡಿ ಮೆಟ್ರೋ ಸಿಬ್ಬಂದಿ ಮುಷ್ಕರ ನಡೆಸಬಹುದಿತ್ತು. ನಮ್ಮ ಮೆಟ್ರೋ ಮತ್ತು ಸರ್ಕಾರದ ನಡುವಿನ ಬಿಕ್ಕಟ್ಟಿನ ಹೊಣೆ ಯಾರದ್ದು ಎನ್ನುವ ಬಹುದಿನಗಳ ಹೋರಾಟ ಇದರಿಂದಾಗಿ ಅಂತ್ಯಗೊಂಡಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಮ್ಮ ಮೆಟ್ರೋದಲ್ಲಿ 50:50ರಷ್ಟು ಸಹಭಾಗಿತ್ವ ಹೊಂದಿದ್ದವು. ಬಿಎಂಆರ್ ರೈಲ್ವೈ ಅಧೀನಕ್ಕೆ ಸೇರಿತ್ತು. ಆದರೆ, ಬಿಎಂಆರ್‌ಸಿಎಲ್ ಮೆಟ್ರೋ ರೈಲ್ವೆ ಇಲಾಖೆ ಅಧೀನಕ್ಕೆ ಬರುವುದಿಲ್ಲ ಎಂದು ಹೇಳಿತ್ತು.
2018ರಲ್ಲಿ ಮೆಟ್ರೋ ಸಿಬ್ಬಂದಿ ಮುಷ್ಕರ ನಡೆಸಿದ್ದರು. ಆಗ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ಬಿಎಂಆರ್‌ಸಿಎಲ್ ಮೆಟ್ರೋವನ್ನು ಅಗತ್ಯ ಸೇವಾ ನಿರ್ವಹಣಾ ಕಾಯ್ದೆ (ಎಸ್ಮಾ) ವ್ಯಾಪ್ತಿಗೆ ತರಬೇಕು ಎಂದು ಹೇಳಿತ್ತು. ಆದರೆ, ಈ ಕುರಿತು ಇನ್ನೂ ವಿಚಾರಣೆ ನಡೆಯುತ್ತಿದೆ.
ಬೆಂಗಳೂರು ಮೆಟ್ರೋ ರೈಲು ನೌಕರರ ಸಂಘ ಕಾರ್ಮಿಕ ಇಲಾಖೆ ಅಧುಸೂಚನೆ ಬಗ್ಗೆ ಪ್ರತಿಕ್ರಿಯೆ ನೀಡಿದೆ. ಕರ್ನಾಟಕ ಸರ್ಕಾರಕ್ಕೆ ಮುಷ್ಕರ ನಡೆಸದಂತೆ ತಡೆಯುವ ಅಧಿಕಾರವಿಲ್ಲ ಎಂದು ಹೇಳಿದೆ. ಸರ್ಕಾರದ ತೀರ್ಮಾನದ ಬಗ್ಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications