ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಜಿ ರಸ್ತೆಯಲ್ಲಿ ಡಿ.28ರಿಂದ 3 ದಿನಗಳ ಕಾಲ ನಮ್ಮ ಮೆಟ್ರೋ ಸ್ಥಗಿತ

|
Google Oneindia Kannada News

Recommended Video

3 ದಿನಗಳ ಕಾಲ ನಮ್ಮ ಮೆಟ್ರೋ ಸ್ಥಗಿತ..! | Oneindia Kannada

ಬೆಂಗಳೂರು, ಡಿಸೆಂಬರ್ 22: ನಾಯಂಡಹಳ್ಳಿ-ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಮೆಟ್ರೋ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಡಿ.28ರಿಂದ ಮೂರು ದಿನಗಳ ಕಾಲ ಎಂಜಿ ರಸ್ತೆಯಲ್ಲಿ ನಮ್ಮ ಮೆಟ್ರೋ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಟ್ರಿನಿಟಿ ವೃತ್ತದ ವಯಾಡಕ್ಟ್‌ನ ಬೀಮ್ ದುರಸ್ತಿಗಾಗಿ ಡಿ.28 ರಿಂದ 30ರವರೆಗೆ ಮೂರು ದಿನಗಳ ಕಾಲ ಎಂಜಿರಸ್ತೆಯಿಂದ ನಿಲ್ದಾಣದವರೆಗೆ ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿದೆ.'ಬೀಮ್‌ನಲ್ಲಿರುವ ಬಿರುಕನ್ನು ಮುಚ್ಚಲು ಕಾಂಕ್ರೀಟ್ ತುಂಬಿಸಲಾಗುತ್ತದೆ. ಈ ಕಾಮಗಾರಿ ಡಿ.28ರ ಸಂಜೆಯಿಂದ ಆರಂಭವಾಗಲಿದ್ದು ಬೆಳಗಿನಜಾವದ ವರೆಗೆ ನಡೆಯಲಿದೆ.

ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ ಕೊಲ್ಕತ್ತ ಫ್ಲೈಓವರ್ ದುರಂತ ಮಾದರಿ ಬೆಂಗಳೂರಲ್ಲೂ ಆಗ್ತಿತ್ತು: ಸಾರಿಗೆ ತಜ್ಞ ಶ್ರೀಹರಿ

ಡಿ.28ರಂದು ರಾತ್ರಿ 8 ಗಂಟೆಗೆ ಸರಿಯಾಗಿ ಎಂಜಿ ರಸ್ತೆಯಲ್ಲಿ ರೈಲು ಸೇವೆ ಸ್ಥಗಿತಗೊಳ್ಳಳಿದೆ. ಮತ್ತೊಂದು ಕಡೆ ಇದೇ ಸಮಯದಲ್ಲಿ ಬೈಯಪ್ಪನಹಳ್ಳಿಯಿಂದ ಬರುವ ರೈಲು ಇಂದಿರಾನಗರದಲ್ಲಿ ಕೊನೆಗೊಳ್ಳಲಿದೆ.

ಕಾಂಕ್ರೀಟ್ ಒಣಗಲು ಎರಡು ದಿನ ಬೇಕು

ಕಾಂಕ್ರೀಟ್ ಒಣಗಲು ಎರಡು ದಿನ ಬೇಕು

ಡಿ.28ರಿಂದ ಸಂಜೆಯಿಂದ ಮುಂಜಾನೆಯವರೆಗೂ ಕಾಮಗಾರಿ ನಡೆಯಲಿದೆ. ಬಳಿಕ ಎರಡು ದಿನ ಕಾಂಕ್ರೀಟ್ ಒಣಗಲು ಬಿಡಬೇಕಾಗುತ್ತದೆ. ಇದಕ್ಕಾಗಿ ಒಟ್ಟು ಮೂರು ದಿನಗಳ ಕಾಲ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.

ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ? ಹನಿಕೊಂಬ್ ಆತಂಕದ ಬಳಿಕ ನಮ್ಮ ಮೆಟ್ರೋ ಸೇವೆ ಹೇಗಿದೆ?

ಹೊಸ ವರ್ಷಕ್ಕೆ ಹೊಸ ಸವಾಲು

ಹೊಸ ವರ್ಷಕ್ಕೆ ಹೊಸ ಸವಾಲು

ಡಿ.31ರ ರಾತ್ರಿ ಎಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆ ನಡೆಯಲಿದೆ. ಈ ವೇಳೆ ಮೆಟ್ರೋದಲ್ಲಿ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಡಿ.31ರ ಮುಂಜಾನೆಯಿಂದಲೇ ಮೆಟ್ರೋ ಸೇವೆ ಆರಂಭವಾಗಲಿದೆ. ದುರಸ್ತಿ ಕಾರ್ಯ ಅಪೂರ್ಣವಾದರೂ ಎಂಜಿ ರಸ್ತೆಯವರೆಗೆ ಸೇವೆ ಇರುವುದರಿಂದ ಹೆಚ್ಚು ಸಮಸ್ಯೆಯಾಗುವುದಿಲ್ಲ.

ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ: ಬಿಎಂಆರ್‌ಸಿಎಲ್ ಮನವಿ ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ: ಬಿಎಂಆರ್‌ಸಿಎಲ್ ಮನವಿ

ಬೀಮ್ ಪರೀಕ್ಷೆಗಳು ಮುಂದುವರಿಕೆ

ಬೀಮ್ ಪರೀಕ್ಷೆಗಳು ಮುಂದುವರಿಕೆ

ಬೀಮ್‌ನಲ್ಲಿ ಪರೀಕ್ಷೆಗಳನ್ನು ಇನ್ನೂ ನಡೆಸಲಾಗುತ್ತಿದೆ. ಐಐಎಸ್‌ಸಿ ತಜ್ಞರೂ ಅಧಿಕಾರಿಗಳೊಂದಿಗೆ ಪರೀಕ್ಷೆ ನಡೆಸುತ್ತಿದ್ದಾರೆ. ಕೊನೆ ದಿನ ಬೀಮ್ ಗೆ ಕಾಂಕ್ರೀಟ್ ತುಂಬಿಸಿ ಬಿರುಕನ್ನು ಮುಚ್ಚಲಾಗುತ್ತದೆ. ಟ್ರಿನಿಟಿ ನಿಲ್ದಾಣದ ಬೀಮ್ ನಲ್ಲಿ ಹಲವು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದ್ದಾರೆ.

ಎರಡು ದಿನ ಮೆಟ್ರೋ ಸ್ಥಗಿತ: ನಿಲ್ದಾಣಗಳಿಗೆ ಉಚಿತ ಬಿಎಂಟಿಸಿ ಬಸ್ ಸೇವೆ ಎರಡು ದಿನ ಮೆಟ್ರೋ ಸ್ಥಗಿತ: ನಿಲ್ದಾಣಗಳಿಗೆ ಉಚಿತ ಬಿಎಂಟಿಸಿ ಬಸ್ ಸೇವೆ

ಬಿಎಂಟಿಸಿ ಉಚಿತ ಸೇವೆ

ಬಿಎಂಟಿಸಿ ಉಚಿತ ಸೇವೆ

ಮೆಟ್ರೋ ಪ್ರಯಾಣಿಕರಿಗೆ ಪರ್ಯಾಯವಾಗಿ ಬಿಎಂಟಿಸಿಯಿಂದ ಉಚಿತ ಸೇವೆ ದೊರೆಯಲಿದೆ. ಕಬ್ಬನ್‌ ಪಾರ್ಕ್‌ನಿಂದ ಬೈಯ್ಯಪ್ಪನಹಳ್ಳಿವರೆಗೆ ರಾತ್ರಿ 8 ರಿಂದ 11ರ ವರೆಗೆ ಡಿ.28ರಿಂದ 30ರವರೆಗೆ ಬಿಎಂಟಿಸಿ ಸೇಏವೆ ಲಭ್ಯವಾಗಲಿದೆ. ಬಿಎಂಟಿಸಿ ಸಾಮಾನ್ಯ ಬಸ್‌ ಪ್ರತಿ ಕಿ.ಮೀ ಕಾರ್ಯಾಚರಿಸಲು 56.29 ರೂ ಖರ್ಚಾಗುತ್ತದೆ.

English summary
BMRCL will suspend services between MG road and Indiranagar stations on the purple Line from 8pm on December 28 to 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X