ಕೆ. ಆರ್. ಪುರ-ವೈಟ್‌ಫೀಲ್ಡ್‌; 12 ನಿಮಿಷದಲ್ಲಿ ಸಾಗಿದ ಮೆಟ್ರೋ ರೈಲು

ಕೆ. ಆರ್. ಪುರ-ವೈಟ್‌ಫೀಲ್ಡ್‌ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲಿನ ವೇಗದ ಪರೀಕ್ಷೆ ಆರಂಭವಾಗಿದೆ. 13 ಕಿ. ಮೀ. ದೂರವನ್ನು ರೈಲು 12 ನಿಮಿಷದಲ್ಲಿ ತಲುಪಿದೆ.

ಬೆಂಗಳೂರು, ಫೆಬ್ರವರಿ 06; ಬಿಎಂಆರ್‌ಸಿಎಲ್ ಬೆಂಗಳೂರು ನಗರದ ಬಹುನಿರೀಕ್ಷಿತ ಕೆ. ಆರ್. ಪುರ-ವೈಟ್‌ಫೀಲ್ಡ್‌ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲಿನ ವೇಗದ ಪರೀಕ್ಷೆಯನ್ನು ಭಾನುವಾರ ಆರಂಭಿಸಿದೆ. ಈ ಮಾರ್ಗ ಮಾರ್ಚ್ ಅಂತ್ಯಕ್ಕೆ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ.

ಕೆ. ಆರ್. ಪುರ-ವೈಟ್‌ಫೀಲ್ಡ್‌ ಮಾರ್ಗದಲ್ಲಿ ಇದೇ ಮೊದಲ ಬಾರಿಗೆ ವೇಗದ ಪರೀಕ್ಷೆ ಮಾಡಲಾಗಿದೆ. ಗಂಟೆಗೆ 80 ಕಿ. ಮೀ. ವೇಗದಲ್ಲಿ ರೈಲನ್ನು ಓಡಿಸಿ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ.

ನಮ್ಮ ಮೆಟ್ರೋ ನೇರಳೆ ಮಾರ್ಗದ ವಿಸ್ತರಿತ ಮಾರ್ಗ ಇದಾಗಿದ್ದು, 13 ಕಿ. ಮೀ. ಉದ್ದವಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ಮಾಡಿ ಒಪ್ಪಿಗೆ ನೀಡಿದ ಬಳಿಕ ಈ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ.

Namma Metro High Speed Trial Run At Whitefield KR Puram Route

ಒಟ್ಟು 13 ಕಿ. ಮೀ. ಮಾರ್ಗವನ್ನು ರೈಲು 12 ನಿಮಿಷದಲ್ಲಿ ಕ್ರಮಿಸಿದೆ. ಯಾವುದೇ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಲಾಗಿಲ್ಲ. ಗರಿಷ್ಠ ವೇಗದ ಮಿತಿಯಲ್ಲಿ ರೈಲನ್ನು ಓಡಿಸಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

ಬಿಎಂಆರ್‌ಸಿಎಲ್ ಅಧಿಕಾರಿಗಳು, ಸಿಗ್ನಲ್‌, ಹಳಿಯ ತಂತ್ರಜ್ಞರು ಈ ರೈಲಿನಲ್ಲಿ ಪ್ರಯಾಣಿಸಿದರು. ಮಾರ್ಗದ 10 ನಿಲ್ದಾಣಗಳ ಪೈಕಿ ಯಾವುದೇ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸದೇ ಪ್ರಾಯೋಗಿಕ ವೇಗದ ಸಂಚಾರ ನಡೆಸಲಾಗಿದೆ.

ಈ ಮಾರ್ಗವೂ ಒಂದು; 2023ರಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭಿಸುವ ಮಾರ್ಗದಲ್ಲಿ ಇದು ಸಹ ಒಂದು. ಮೊದಲ ಹಂತದಲ್ಲಿ ವೈಟ್‌ಫೀಲ್ಡ್-ಕೆ. ಆರ್. ಪುರ ತನಕ ರೈಲು ಸಂಚಾರ ನಡೆಸಲಿದೆ. 2ನೇ ಹಂತದಲ್ಲಿ ಕೆ. ಆರ್. ಪುರ-ಬೈಯಪ್ಪನಹಳ್ಳಿ ತನಕ ರೈಲು ಓಡಲಿದೆ.

ಭಾನುವಾರ ಬೆಳಗ್ಗೆ 11.30 ರಿಂದ 3.30ರ ತನಕ ವೈಟ್‌ಫೀಲ್ಡ್‌ ಕೆ. ಆರ್. ಪುರ ನಡುವೆ ಮೂರು ಬಾರಿ ವೇಗದ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಮುಂದಿನ ಶನಿವಾರದ ತನಕ ಪ್ರತಿದಿನ ಈ ಮಾದರಿ ಪರೀಕ್ಷೆ ನಡೆಯಲಿದೆ.

ಬಿಎಂಆರ್‌ಸಿಎಲ್ ಈ ಮಾರ್ಗದ ಪರಿಶೀಲನೆ ನಡೆಸುವಂತೆ ಈಗಾಗಲೇ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಆಹ್ವಾನ ನೀಡಿದೆ. ಅವರ ಪರಿಶೀಲನೆ, ಒಪ್ಪಿಗೆ ಬಳಿಕ ನಮ್ಮ ಮೆಟ್ರೋ ಹಳದಿ ಮಾರ್ಗದ ವಿಸ್ತರಿತ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ದಿನಾಂಕ ನಿಗದಿಯಾಗಲಿದೆ.

ವಾಣಿಜ್ಯ ಸಂಚಾರ ಆರಂಭವಾದ ಬಳಿಕ ಪ್ರತಿ 10 ನಿಮಿಷಕ್ಕೆ ಸಂಚಾರ ನಡೆಸುವಂತೆ 10 ರೈಲುಗಳನ್ನು ಈ ಮಾರ್ಗದಲ್ಲಿ ಓಡಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ನಿಲ್ದಾಣಗಳು; ನೇರಳೆ ಮಾರ್ಗದ ವಿಸ್ತರಿತ ಮಾರ್ಗದಲ್ಲಿ ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಸಾಯಿ ಆಸ್ಪತ್ರೆ, ನಲ್ಲೂರು ಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ ಪಾಳ್ಯ, ಮಹದೇವಪುರ, ಕೆ. ಆರ್. ಪುರ, ಬೆನ್ನಿಗಾನಹಳ್ಳಿ ನಿಲ್ದಾಣಗಳಿವೆ.

namma metro

ಬೆನ್ನಿಗಾನಹಳ್ಳಿ ನಿಲ್ದಾಣದ ಬಳಿ ಮೆಟ್ರೋ ಕಾಮಗಾರಿ ಕೊಂಚ ವಿಳಂಬವಾಗುತ್ತಿದೆ. ಅಲ್ಲಿ ರೈಲ್ವೆ ಹಳಿಯೂ ಹಾದು ಹೋಗಿರುವ ಕಾರಣ ನೈಋತ್ಯ ರೈಲ್ವೆಯ ಜೊತೆ ಮಾತನಾಡಿ, ಸ್ಟೀಲ್ ಗರ್ಡರ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಆದ್ದರಿಂದ ಕೆ. ಆರ್. ಪುರ ತನಕ ರೈಲು ಸಂಚಾರ ನಡೆಸಲಿದೆ.

ಬೆಂಗಳೂರು ನಗರದಲ್ಲಿ ಸದ್ಯ 56 ಕಿ. ಮೀ. ಮಾರ್ಗದಲ್ಲಿ ಮೆಟ್ರೋ ರೈಲು ಓಡುತ್ತಿದೆ. 2023ರಲ್ಲಿ 38.09 ಕಿ. ಮೀ. ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಒಟ್ಟು 94.09 ಕಿ. ಮೀ. ಮಾರ್ಗದಲ್ಲಿ ಮೆಟ್ರೋ ರೈಲು ಓಡಲಿದೆ.

ಈ ವರ್ಷ ನಮ್ಮ ಮೆಟ್ರೋ ನಗರದ ಎರಡು ಐಟಿ ಹಬ್‌ಗಳಾದ ವೈಟ್‌ಫೀಲ್ಡ್‌ ಮತ್ತು ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುತ್ತದೆ. ಈ ಮೂಲಕ ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುವ ಸಾವಿರಾರು ಉದ್ಯೋಗಿಗಳಿಗೆ ಅನುಕೂಲವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+