Namma Metro: ಹಸಿರು ಮಾರ್ಗದ ಪ್ರಯಾಣಿಕರ ಗಮನಕ್ಕೆ! ಆ.7ರಂದು ಮೆಟ್ರೋ ಸಂಚಾರದಲ್ಲಿ ಬದಲಾವಣೆ

ಬೆಂಗಳೂರು: ಮಾದಾವರ-ರೇಷ್ಮೆ ಸಂಸ್ಥೆವರೆಗಿನ ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲುಗಳ ಸಂಚಾರದಲ್ಲಿ ಆಗಸ್ಟ್ 7ರ ಶುಕ್ರವಾರದಂದು ಮಹತ್ವದ ಬದಲಾವಣೆ ಆಗಿದೆ. ದೈನಂದಿನ ಪ್ರಯಾಣಿಕರು ಸಹಕರಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಮನವಿ ಮಾಡಿದ್ದಾರೆ.

ನಿತ್ಯ ಲಕ್ಷಾಂತರ ಜನರು ಸಂಚಾರ ಮಾಡುವ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಸಿಆರ್‌ಆರ್‌ಸಿ (CRRC) ಸಂಸ್ಥೆಯ ನೂತನ ರೈಲುಗಳನ್ನು ಮೆಟ್ರೋ ನಿಗಮದ ಕಾರ್ಯಾಚರಣೆಗೆ ಸೇರ್ಪಡೆಗೊಳಿಸಲಾಗುತ್ತದೆ. ಅದಕ್ಕು ಮೊದಲ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ (CMRS) ಮುಖ್ಯ ತಪಾಸಣೆಗೆ ಪೂರ್ವಭಾವಿಯಾಗಿ, ಬಿಎಂಆರ್‌ಸಿಎಲ್ ಹಾಗೂ ಸಿಎಂಆರ್‌ಎಸ್ ಅಧಿಕಾರಿಗಳ ತಂಡದೊಂದಿಗೆ ತಪಾಸಣೆ ನಡೆಸಲಾಗುತ್ತದೆ.

Namma Metro Green Line

ಶುಕ್ರವಾರ (07.08.2026) ಅಧಿಕಾರಿಗಳು ರಾತ್ರಿ ಜಂಟಿ ಪ್ರಾಯೋಗಿಕ ಸಂಚಾರ /ತಪಾಸಣೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಸಿರು ಮಾರ್ಗದ ಮೆಟ್ರೋ ರೈಲು ಸೇವೆಗಳಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.

ಬದಲಾವಣೆ ಆಗಿದ್ದೇನು?

* ಯಶವಂತಪುರದಿಂದ ಮಾದಾವರದವರೆಗಿನ (ಅಪ್ ಲೈನ್) ರೈಲು ಸೇವೆಗಳು ರಾತ್ರಿ 10:30ರಿಂದ 11:00 ಗಂಟೆಯವರೆಗೆ, ಪ್ರಯಾಣಿಕ ಸೇವೆ ಮುಕ್ತಾಯಗೊಳ್ಳುವವರೆಗೆ, ನಿಯಮಿತ 10 ನಿಮಿಷಗಳ ಬದಲಾಗಿ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.

* ಅದೇ ರೀತಿ ಮಾದಾವರದಿಂದ ರೇಷ್ಮೆ ಸಂಸ್ಥೆಯವರೆಗಿನ (ಡೌನ್ ಲೈನ್) ರೈಲು ಸೇವೆಗಳು ನಿಯಮಿತ ವೇಳಾಪಟ್ಟಿಯಂತೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ. ಇನ್ನು ಯಶವಂತಪುರದಿಂದ ತುಮಕೂರು ರಸ್ತೆ ಮಾರ್ಗವಾಗಿ ಮೆಟ್ರೋದಲ್ಲಿ ಓಡಾಡುವವರಿಗೆ ಕೊಂಚ ತೊಂದರೆ ಆಗಬಹುದು ಎನ್ನಲಾಗಿದೆ.

ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ ಅದಕ್ಕನುಗುಣವಾಗಿ ಪ್ರಯಾಣ ಯೋಜಿಸಿಕೊಳ್ಳುವಂತೆ ತಿಳಿಸಲಾಗಿದೆ. ಒಂದು ದಿನದ ಈ ತಾತ್ಕಾಲಿಕ ಅಡಚಣೆಗೆ ಸಹಕರಿಸುವಂತೆ ಬಿಎಂ ಆರ್ ಸಿ ಎಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದೆ.

ಪ್ರಯಾಣಿಕರ ನೂಕು ನುಗ್ಗಲು, ಹೊಸ ರೈಲು ಸೇರ್ಪಡೆ ಅಗತ್ಯ

ರಾಜಧಾನಿ ಬೆಂಗಳೂರಿನ ಮೆಟ್ರೋ ಜಾಲವು 96 ಕಿಲೋ ಮೀಟರ್ ವಿಸ್ತರಿಸಿದೆ. ಸದ್ಯ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸುಮಾರು 55 ರೈಲುಗಳ ನಿತ್ಯ ಸಂಚಾರ ನಡೆಸುತ್ತಿದೆ. ಈ ರೈಲು ಸಂಖ್ಯೆ ನಿತ್ಯ ಓಡಾಡುವ ಸುಮಾರು 7-10 ಲಕ್ಷದ ಪ್ರಯಾಣಿಕರಿಗೆ ಅನುಕೂಲಕರವಾಗಿತ್ತು. ಆದರೆ ಆರ್‍‌.ವಿ.ರಸ್ತೆ-ಬೊಮ್ಮಸಂದ್ರ (19 ಕಿ.ಮೀ) ವರೆಗಿನ ಮೂರನೇ ಹಳದಿ ರೈಲು ಮಾರ್ಗ ತೆರೆದ ಮೇಲೆ ಪ್ರಯಾಣಿಕರ ಸಂಖ್ಯೆ ಸುಮಾರು 11 ಲಕ್ಷದಷ್ಟಿದೆ. ನೇರಳೆ ಮತ್ತು ಹಸಿರು ಮಾರ್ಗದಿಂದ ಬಂದು ಈ ಹಳದಿ ಮಾರ್ಗಕ್ಕೆ ಸಂಚಾರ ಬದಲಾಯಿಸಿಕೊಳ್ಳುತ್ತಾರೆ.

ಹೆಚ್ಚಿನ ಪ್ರಯಾಣಿಕರ ನಿರ್ವಹಣೆಗೆ ಹಾಲಿ ರೈಲುಗಳು ಸಾಲುತ್ತಿಲ್ಲ. ಇದರಿಂದ ನಿತ್ಯ ದಟ್ಟಣೆ, ನೂಕು ನುಗ್ಗಲು ಉಂಟಾಗಿದೆ. ಇದರ ನಿಯಂತ್ರಣ, ಸಮಸ್ಯೆ ಪರಿಹಾರಾರ್ಥವಾಗಿ ಚೀನಾದಲ್ಲಿ ನಿರ್ಮಿಸಿದ ಸುಮಾರು 21 ರೈಲುಗಳು ಆಗಮಿಸಲಿವೆ. ಇದರಲ್ಲಿ ಮೂರು ರೈಲುಗಳು ಹಸಿರು ಮಾರ್ಗಕ್ಕೆ ಸೇರ್ಪಡೆಗೊಳ್ಳಲಿವೆ. ಇದರ ನಿಮಿತ್ತ ಒಂದಷ್ಟು ತಪಾಸಣೆ ಕೈಗೊಳ್ಳಲಾಗುತ್ತದೆ. ಹೀಗಾಗಿ ಶುಕ್ರವಾರ ಒಂದು ದಿನ ರಾತ್ರಿ ಹಸಿರು ಮಾರ್ಗದ ರೈಲುಗಳ (ಯಶವಂತಪುರ-ಮಾದಾವರ) ಸಂಚಾರದಲ್ಲಿ ಬದಲಾವಣೆ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+