Namma metro: 2024ರ ಹೊಸವರ್ಷಕ್ಕೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ, ಮಾಹಿತಿ ಇಲ್ಲಿದೆ
ಬೆಂಗಳೂರಿ, ಅಕ್ಟೋಬರ್, 06: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹಚ್ಚಳ ಆಗುತ್ತಿದೆ. ಆದ್ದರಿಂದ ಈಗಾಗಲೇ ನಗರದ ಹಲವೆಡೆ ಮೆಟ್ರೋ ಲೈನ್‌ಗಳನ್ನು ವಿಸ್ತರಣೆ ಮಾಡುವ ಕಾಮಾಗಾರಿಗಳು ಕೂಡ ನಡೆಯುತ್ತಿವೆ. ಅದೇ ರೀತಿ ನಾಗಸಂದ್ರ ಟು ಮಾದವಾರ ಮಾರ್ಗ ಕಾಮಾಗಾರಿ ಭಾರದಿಂದ ಸಾಗಿದ್ದು, ಇದು 2024ರ ಹೊಸ ವರ್ಷದ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರಿಗರ ಸಂಚಾರ ನಾಡಿ ಮೆಟ್ರೋ ತನ್ನ ಮತ್ತೊಂದು ವಿಸ್ತರಣೆ ಮಾರ್ಗದ ಕೆಲಸವನ್ನ ಪೂರ್ಣಗೊಳಿಸುವತ್ತ ಹೆಜ್ಜೆ ಇಟ್ಟಿದೆ. ಹಸಿರು ಮಾರ್ಗದ ಮುಂದುವರೆದ ಭಾಗವಾದ ನಾಗಸಂದ್ರ ಟು ಮಾದವಾರ ಮಾರ್ಗ ಕಾಮಗಾರಿ ಭರದಿಂದ ಸಾಗಿದೆ. 3 ಕಿಲೋ ಮೀಟರ್ ಉದ್ದದ ಈ ಮಾರ್ಗದಲ್ಲಿ ಸದ್ಯ ಈಗಾಗಲೇ 65 ರಷ್ಟು ಸಿವಿಲ್ ಕೆಲಸಗಳು ಮುಕ್ತಾಯದ ಹಂತ ತಲುಪಿವೆ.

ಮಾದವರ ಬಳಿಯ ಸ್ಟೇಷನ್ ಸಿವಿಲ್ ಕಾಮಗಾರಿ ಮಾತ್ರ ಬಾಕಿ ಇದೆ. ಈ ಭಾಗದಲ್ಲಿ ಜಾಗದ ಖರೀದಿ ಸೇರಿದಂತೆ ಕೆಲ ಸಮಸ್ಯೆಗಳ ಕಾರಣ ಕಾಮಗಾರಿ ಕೊಂಚ ಅಡಚಣೆಯಾಗಿತ್ತು. ಸದ್ಯ ಈ ಎಲ್ಲಾ ಸಮಸ್ಯೆಗಳು ಮುಕ್ತಾವಾಗಿದ್ದು, ಕಾಮಗಾರಿ ಕೆಲಸ ವೇಗ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಉಳಿದ ಭಾಗದಲ್ಲಿ ನಾಗವಾರ ಸ್ಟೇಷನ್ ಸೇರಿದಂತೆ ಇನ್ನುಳಿದ ಕಡೆ ಟ್ರ್ಯಾಕ್ ಕೆಲಸ ಮುಗಿದಿದೆ. ಈ ತಿಂಗಳ ಒಳಗೆ ಎಲ್ಲಾ ಕೆಲಸ ಮುಗಿಸಬೇಕು. ಜೊತೆಗೆ ಎಲೆಕ್ಟ್ರಿಕ್ ಕೆಲಸ ಸೇರಿದಂತೆ ಎಲ್ಲಾ ಡಿಸೆಂಬರ್ ಒಳಗೆ ಮುಗಿಸಬೇಕು. ಹಳಿ ಜೋಡಿಸುವ ಕೆಲಸ ಸೇರಿದಂತೆ ಸಿವಿಲ್ ವರ್ಕ್ 65% ಮುಗಿದಿದೆ. ರೈಲ್ವೆ ಸುರಕ್ಷತಾ ಪರೀಕ್ಷೆ ನಡೆಸಬೇಕು. ಡಿಸೆಂಬರ್ ತಿಂಗಳಲ್ಲಿ ವಾಣಿಜ್ಯ ಸಂಚಾರಕ್ಕೆ ಸಿಗಲಿದೆ. 3 ಕಿ.ಮೀ. ವ್ಯಾಪ್ತಿಯಲ್ಲಿ ಸ್ಟೇಷನ್ ನಾಗಸಂದ್ರ, ಚಿಕ್ಕಬಿದರೇಕಲ್ಲು, ಮಾದವಾರ ಸೇರಿದಂತೆ ಮೂರು ನಿಲ್ದಾಣಗಳಿರಲಿದೆ.
ಇದರ ಜೊತೆಗೆ ಕಳೆದ ತಿಂ ಗಳಿನಿಂದ ಕಾದಿದ್ದ ಕೆ.ಆರ್. ಪುರಂ ಟು ಬೈಯಪ್ಪನಹಳ್ಳಿ ಹಾಗೂ ಚಲಘಟ್ಟ ಟು ಕೆಂಗೇರಿ ಮಿಸ್ಸಿಂಗ್ ಮಾರ್ಗ ಕೂಡ ಮುಂದಿನ 10 ದಿನಗಳಲ್ಲಿ ಸಂಚಾರ ಮುಕ್ತವಾಗಲಿದೆ. ಈಗಾಗಲೇ ಕೇಂದ್ರ ಸುರಕ್ಷತಾ ತಂಡ ಫಿಟ್ನೆಸ್ ಸರ್ಟಿಫಿಕೇಟ್ ಕೂಡ ನೀಡಿದ್ದು, ಸದ್ಯ ಸಂಚಾರಕ್ಕೆ ಬೇಕಾದ ಎಲ್ಲ ರೀತಿಯ ಕ್ಲಿಯರೆನ್ಸ್ ನೀಡಿದೆ. BMRCL ಕೂಡ ಸದ್ಯ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದು, ಎರಡು ಮಿಸ್ಸಿಂಗ್ ಲಿಂಕ್ ಮಾರ್ಗದ ಉದ್ಘಾಟನೆಗೆ ಸರ್ಕಾರ ದಿನಾಂಕ ನಿಗಧಿ ಮಾಡಬೇಕಿದೆ.
ಒಟ್ಟಾರೆ ಮುಂದಿನ ಮೂರ್ನಾಲ್ಕು ತಿಂಗಳು ಬಹುನೀರಿಕ್ಷಿತ ಮಾರ್ಗ ಸಂಚಾರಕ್ಕೆ ಅನುವು ಸಿಗಲಿದೆ. ಈ ಮೂಲಕ ನಮ್ಮ ಮೆಟ್ರೋ ತನ್ನ ವಿಸ್ತರಣೆ ಹೆಚ್ಚಿಸುವುದರ ಮೂಲಕ ಈ ಭಾಗದ ಟ್ರಾಫಿಕ್ ಸಮಸ್ಯೆ ಪರಿಹಾರ ಸಿಗಲಿದೆ.












Click it and Unblock the Notifications