Namma Metro: ಹಸಿರು ಮಾರ್ಗದ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಬಿಬಿಎಂಪಿ, ಏನದು?
ಬೆಂಗಳೂರು, ಫೆಬ್ರವರಿ 01: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೀಡಿದೆ. ಹಸಿರು ಮಾರ್ಗದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ಅಭಿವೃದ್ಧಿ ಯೋಜನೆಗಳನ್ನು ಬಿಬಿಎಂಪಿ ಘೋಷಿಸಿದೆ. ಅದಕ್ಕಾಗಿ ಕೋಟ್ಯಂತರ ರೂಪಾಯಿ ಅನುದಾನ ನಿಗದಿಪಡಿಸಿದೆ.
ರೇಷ್ಮೆ ಸಂಸ್ಥೆಯಿಂದ ನಾಗಸಂದ್ರವರೆಗೆ ಇರುವ ಮೆಟ್ರೋ ಹಸಿರು ಮಾರ್ಗ (Namma Metro Green Line) ದಲ್ಲಿ ನಮ್ಮ ಮೆಟ್ರೊ ನಿಲ್ದಾಣಗಳಿಗೆ ಹೋಗುವ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಮರು ಅಭಿವೃದ್ಧಿಗೊಳಿಸಲು ಜೊತೆಗೆ ಹೊಸದಾಗಿ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ ಎಂದು TOI ವರದಿ ಮಾಡಿದೆ.

60 ಕೋಟಿಯ ಅಭಿವೃದ್ಧಿ ಕಾರ್ಯಗಳು
ಪಾದಚಾರಿ ಸ್ನೇಹಿ ಫುಟ್‌ಪಾತ್‌ಗಳನ್ನು ಖಚಿತಪಡಿಸಿಕೊಳ್ಳಲು ಬಿಬಿಎಂಪಿಯು 60 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಈ ವರ್ಷ ಯೋಜನೆಯನ್ನು ಪೂರ್ಣಗೊಳಿಸುವಂತೆ ಬಿಬಿಎಂಪಿಯು ರಸ್ತೆ ಮೂಲಸೌಕರ್ಯ ವಿಭಾಗಕ್ಕೆ ಜವಾಬ್ದಾರಿ ವಹಿಸಿದೆ ಎಂದು ಅಧಿಕಾರಿಗಳು ಹೇಳಿದರು.
ಹಸಿರು ಮಾರ್ಗದ ಮೆಟ್ರೋ ಲೈನ್ ಸಾಗುವ 'ಪಶ್ಚಿಮ ವಿಭಾಗದ ಸುಬೇದಾರ್ ಛತ್ರಂ ರಸ್ತೆ, ಡಾ ರಾಜ್‌ಕುಮಾರ್ ರಸ್ತೆ, ಮಹಾಲಕ್ಷ್ಮಿ ಬಡಾವಣೆಯ ಮುಖ್ಯರಸ್ತೆ, ಪೈಪ್‌ಲೈನ್ ರಸ್ತೆ, ವಾಚ್ ಫ್ಯಾಕ್ಟರಿ ರಸ್ತೆ, ಜಾಲಹಳ್ಳಿ ಅಡ್ಡರಸ್ತೆ, ಕೆರೆ ರಸ್ತೆ ಮತ್ತು ಹೆಸರಘಟ್ಟ ರಸ್ತೆಗಳ ಎಂಟು ರಸ್ತೆಗಳಲ್ಲಿ ಫುಟ್‌ಪಾತ್‌ಗಳನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ಈಗಾಗಲೇ ತೀರ್ಮಾನಿಸಿದೆ. ಅದಕ್ಕಾಗಿ 30 ಕೋಟಿ ರೂಪಾಯಿ ಬಳಕೆ ಮಾಡಲಿದೆ.
ರಸ್ತೆಗಳಿಂದ ಮೆಟ್ರೋ ನಿಲ್ದಾಣಕ್ಕೆ ಪಾದಾಚಾರಿ ಸಂಪರ್ಕ
ಇನ್ನೂ ಈ ರಸ್ತೆಗಳು ಸಂಪಿಗೆ ರಸ್ತೆ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಪೀಣ್ಯ, ಜಾಲಹಳ್ಳಿ, ದಾಸರಹಳ್ಳಿ ಮತ್ತು ನಾಗಸಂದ್ರದ ಮೆಟ್ರೋ ನಿಲ್ದಾಣಗಳ ಸಮೀಪ ಬಿಬಿಎಂಪಿ ನಿರ್ಮಿಸುವ ಈ ಪಾದಾಚಾರಿಗಳು ರಸ್ತೆಗಳಿಂದ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತವೆ,ಸದ್ಯ ಈ ಯೋಜನೆಯು ಟೆಂಡರ್ ಹಂತದಲ್ಲಿದ್ದು, ಅದೆಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಕಾಮಗಾರಿ ಆರಂಭವಾಗಲಿದೆ. ಮೆಟ್ರೋ ಸೇವೆಗಳನ್ನು ಅವಲಂಬಿಸಿರುವ ಪಾದಚಾರಿಗಳಿಗೆ ಸುರಕ್ಷಿತ ಫುಟ್‌ಪಾತ್‌ಗಳನ್ನು ಒದಗಿಸುವ ಗುರಿ ನಾವು ಹೊಂದಿದೆ ಎಂದು ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ (ಪಶ್ಚಿಮ) ದೇವರಾಜ್ ಹೇಳಿದರು.

ಯೋಜನೆ ಜಾರಿಗೆ ಟೆಂಡರ್ ಆಹ್ವಾನ
ನಮ್ಮ ಮೆಟ್ರೋ ಈ ಹಸಿರು ಮಾರ್ಗದ ತಲಘಟ್ಟಪುರ (ಸಿಲ್ಕ್ ಇನ್‌ಸ್ಟಿಟ್ಯೂಟ್), ವಾಜರಹಳ್ಳಿ, ಕೋಣನಕುಂಟೆ, ಜೆಪಿ ನಗರ, ಸೌತ್ ಎಂಡ್ ರಸ್ತೆ, ನ್ಯಾಷನಲ್ ಕಾಲೇಜು, ಚಿಕ್ಕಪೇಟೆ ಮತ್ತು ಕೆಆರ್ ಮಾರುಕಟ್ಟೆ, ಚಿಕ್ಕಪೇಟೆ, ಮೆಜೆಸ್ಟಿಕ್, ಸಂಪಿಗೆ ರಸ್ತೆ, ಹೀಗೆ ಮಾದವಾರವರೆಗೆ ಸಾಗುತ್ತದೆ. ಈ ಪೈಕಿ ತಲಘಟ್ಟಪುರದಿಂದ ಕೆ.ಆರ್ ಮಾರುಕಟ್ಟೆವರೆಗಿ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷಿತ ಕೊನೆಯ ಮೈಲಿ ಸಂಪರ್ಕವನ್ನು ಒದಗಿಸಲು ಪಾದಾಚಾರಿ ಮಾರ್ಗ ಮರುಅಭಿವೃದ್ಧಿ ಕಾರ್ಯ, ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ.
ಅಭಿವೃದ್ಧಿಗೊಳ್ಳಲಿರುವ ರಸ್ತೆಗಳ ಪಟ್ಟಿ
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಒಟ್ಟು 28 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆಗಳು ಅಭಿವೃದ್ಧಿ ಕಾಣಲಿವೆ. ತಲಘಟ್ಟಪುರದ 100 ಅಡಿ ರಸ್ತೆ, ಕೆಎಸ್‌ಐಟಿ ಸಂಪರ್ಕಿಸುವ 80 ಅಡಿ ರಸ್ತೆ, ವಸಂತಪುರ ಮುಖ್ಯ ರಸ್ತೆ, ಸಾರಕ್ಕಿ ಗ್ರಾಮದ ರಸ್ತೆ, ಸೌತ್ ಎಂಡ್ ರಸ್ತೆ, ವಾಸವಿ ದೇವಸ್ಥಾನದ ಬೀದಿ, ಶಂಕರ ಮಠ ಮತ್ತು 10ನೇ ಅಡ್ಡರಸ್ತೆ, ಬಿವಿಕೆ ಅಯ್ಯಂಗಾರ್. ರಸ್ತೆ ಮತ್ತು ಟಿಪ್ಪು ಸುಲ್ತಾನ್ ರಸ್ತೆಗಳು ಅಭಿವೃದ್ಧಿಗೊಳ್ಳಲಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾದಚಾರಿಸ್ನೇಹಿ ಮೂಲ ಸೌಕರ್ಯದೊಂದಿಗೆ ಪಾದಚಾರಿ ಮಾರ್ಗಗಳು ಮತ್ತು ಸೈಕಲ್ ಟ್ರ್ಯಾಕ್‌ಗಳನ್ನು ಒಳಗೊಂಡಂತೆ ಅಪಧಮನಿಯ ರಸ್ತೆಗಳನ್ನು ನವೀಕರಿಸಲು ಯೋಜಿಸಲಾಗಿದೆ. ಇದು ಯೋಜನಾ ವರದಿ ತಯಾರಿಕೆಯ ಹಂತದಲ್ಲಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮೂಲಕ ಆದಷ್ಟು ಶೀಘ್ರವೇ ಮೆಟ್ರೋ ಹಸಿರು ಮಾರ್ಗದಲ್ಲಿ ಪ್ರಯಾಣ ಮಾಡುವವರು ನೂತನ ಪಾದಾಚಾರಿ ಮಾರ್ಗ ಪಡೆಯಲಿದ್ದಾರೆ.












Click it and Unblock the Notifications