Namma Metro Blue Line: ಬೆಂಗಳೂರು ಏರ್ ಪೋರ್ಟ್ ತಲುಪಲು ₹1500 ಬೇಡ!, ಜಸ್ಟ್ ₹100 ಇದ್ರೆ ಸಾಕು, ಆಪರೇಷನ್ ಅಪ್ಡೇಟ್

ಬೆಂಗಳೂರು: ನಗರದ ಪ್ರಯಾಣಿಕರು ದೇವನಹಳ್ಳಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತಲುಪಬೇಕಾದರೆ ಸದ್ಯ 700 ರಿಂದ 1500ರೂಪಾಯಿ ವರೆಗೆ ಖರ್ಚು ಮಾಡಬೇಕಿದೆ. ಈ ಹಣ ತಗ್ಗಿಸಿ ಕೇವಲ 100 ರೂಪಾಯಿ ಒಳಗೆ ನೀವು ಕೆಇಎ ತಲುಪಲು ನಮ್ಮ ಮೆಟ್ರೋ ನೀಲಿ ಮಾರ್ಗ (Namma Metro Blue Line) ಆಸರೆಯಾಗಲಿದೆ. ಆದರೆ ಈ ಮಾರ್ಗ ತೆರೆಯುವವರೆಗೆ ಇನ್ನೂ ಸ್ವಲ್ಪ ಕಾಲ ಸಾರ್ವಜನಿಕರು ಕಾಯಬೇಕಿದೆ.

ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂ, ಹೆಬ್ಬಾಳ ಮಾರ್ಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ಎರಡು ಹಂತಗಳಲ್ಲಿ ನೀಲಿ ಮಾರ್ಗ ನಿರ್ಮಾಣವಾಗುತ್ತಿರುವುದು ನಿಮಗೆ ಗೊತ್ತೇ ಇದೆ. ಈ ಮಾರ್ಗವು ಒಟ್ಟು 59 ಕಿಲೋ ಮೀಟರ್ ಉದ್ದವಿದೆ..ನಗರದ ಹೃದಯಭಾಗದಿಂದ ಏರ್ ಪೋರ್ಟ್ ತಲುಪಬೇಕಾದರೆ, ಕ್ಯಾಬ್‌ಗಳಲ್ಲಿ ಟ್ರಾಫಿಕ್ ನಡುವೆ ಪ್ರಯಾಸದಾಯಕವಾಗಿ ಸಂಚಾರ ಮಾಡಬೇಕಾಗುತ್ತದೆ. ಇದರಿಂದ ಸಮಯ, ದುಡ್ಡು ಎರಡು ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗುತ್ತದೆ. ಹೀಗಾಗಿ ವಿಮಾನಯಾನ ಪ್ರಯಾಣಿಕರು ನೀಲಿ ಮಾರ್ಗದ ಆರಂಭಕ್ಕಾಗಿ ಕಾಯುವಂತಾಗಿದೆ.

Namma Metro Blue Line

ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ವರೆಗಿನ 2ಎ ಮಾರ್ಗದಲ್ಲಿ ಪ್ರಾಯೋಗಿಕ ರೈಲು ಪರೀಕ್ಷೆಗಳು ಇನ್ನೇನು ಆಗಬೇಕಿದೆ. ಈ ಲೈನ್ 2027ರ ಮಧ್ಯಭಾಗದಲ್ಲಿ ಲೋಕಾರ್ಪಣೆಗೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ಅದೇ ರೀತಿ ಕೆ.ಆರ್.ಪುರಂ-ಹೆಬ್ಬಾಳ ಮಾರ್ಗದಲ್ಲಿ ಕಾಮಗಾರಿಗೆ ಒಂದಷ್ಟು ಸವಾಲುಗಳು ಎದುರಾಗಿವೆ. ಹೀಗಾಗಿ ಇಲ್ಲಿ ಕೆಲಸ ಪೂರ್ಣಗೊಳ್ಳುವುದು ವಿಳಂಬವಾಗಲಿದೆ. ಹೆಬ್ಬಾಳ-ಕೆಐಎ ಮಾರ್ಗದಲ್ಲಿ ಶೇ.72ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 2027ರ ಸೆಪ್ಟಂಬರ್ ಇಲ್ಲವೇ ಡಿಸೆಂಬರ್ ಹೊತ್ತಿಗೆ ತೆರೆಯುವ ಸಾಧ್ಯತೆ ಇದೆ.

ಒಟ್ಟಾರೆಯಾಗಿ ಸಿಲ್ಕ್ ಬೋರ್ಡ್‌ನಿಂದ- ಏರ್ ಪೋರ್ಟ್‌ವರೆಗೆ 59 ಕಿಮೀ ಸಂಪೂರ್ಣ ನೀಲಿ ಮಾರ್ಗವು 2028ರ ಅಂತ್ಯದೊಳಗೆ ತೆರೆಯುವ ನಿರೀಕ್ಷೆಗಳು ಇವೆ. ಅಲ್ಲಿಯವರೆಗೆ ಮೆಟ್ರೋ ಪ್ರಯಾಣಿಕರು ಕಾಯಬೇಕಿದೆ. ಒಂದೊಮ್ಮೆ ಮೆಟ್ರೋ ಕಾರ್ಯಾಚರಣೆ ಆರಂಭವಾದರೆ ಏರ್ ಪೋರ್ಟ್ ತಲುಪುವುದು ಮತ್ತಷ್ಟು ಸುಲಭವಾಗಲಿದೆ.

ಖಾಸಗಿ ವಾಹನಗಳ ಮೇಲಿನ ಅವಲಂಬನೆ ಇಳಿಕೆ

ಏರ್ ಪೋರ್ಟ್ ನೀಲಿ ಮೆಟ್ರೋ ಮಾರ್ಗವು ಪ್ರಯಾಣಿಕರಿಗೆ ಮುಕ್ತವಾಗುತ್ತಿದ್ದಂತೆ ಟ್ಯಾಕ್ಸಿ, ಕ್ಯಾಬ್‌ಗಳು ಹಾಗೂ ಖಾಸಗಿ ವಾಹನಗಳ ಮೇಲಿನ ಅವಲಂಬನೆ ಕಡಿಮೆ ಆಗಲಿದೆ. ಜನರ ಪಬ್ಲಿಕ್ ಸಾರಿಗೆ ಮೆಟ್ರೋ ಬಳಕೆ ಹೆಚ್ಚಾಗುವ ನಿರೀಕ್ಷೆಗಳಿವೆ. ಇದರಿಂದ ವಾಹನಗಳ ಸಂಚಾರ ದಟ್ಟಣೆ ನಿಯಂತ್ರಣ ಆಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ ಸಿಎಲ್) ವಿಶ್ವಾಸ ವ್ಯಕ್ತಪಡಿಸಿದೆ.

ನೀಲಿ ಮಾರ್ಗವು ಸೆಂಟ್ರಲ್ ಸಿಲ್ಕ್‌ ಬೊರ್ಡ್‌ನಿಂದ ಹೊರ ವರ್ತುಲ ರಸ್ತೆ, ಆಗರ, ಮಹದೇವಪುರ, ಕೆ.ಆರ್.ಪುರಂ, ಹೆಬ್ಬಾಳ, ಯಲಹಂಕ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ನೀಲಿ ಮಾರ್ಗ ಸಂಪರ್ಕಿಸಲಿದೆ. ಈ ಭಾಗದ ದೈನಂದಿನ ಪ್ರಯಾಣಿಕರಿಗೆ ಮೆಟ್ರೋ ಸೇವೆ ಲಭ್ಯವಾಗಲಿದೆ. ಆಯಾ ಭಾಗದ ಆಸ್ತಿಗಳ ದರ, ಮನೆ ಬಾಡಿಗೆ, ಪಿಜಿಗಳ ದರವು ಏರಿಕೆ ಆಗಲಿದೆ. ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ, ಕೊನೆ ಮೈಲಿ ಸಂಪರ್ಕ ಸಿಕ್ಕಂತಾಗುತ್ತದೆ.

ಕಾಮಗಾರಿ ವಿಳಂಬ ಏಕೆ?

ಯೋಜನೆ ಆರಂಭದ ಹೊತ್ತಿನಲ್ಲಿ ಭೂಮಿ ಸ್ವಾಧೀನ ಸಮಸ್ಯೆ ಆಗಿತ್ತು. ನಂತರ ರೈಲ್ವೆ ಬ್ರಿಡ್ಜ್ ಬಳಿಕ ಕೆಲಸ, ವಯಾಡಕ್ಟ್ ಜೋಡಣೆ, ಗರ್ಡರ್ ನಿರ್ಮಾಣದಂತಹ ಸವಾಲುಗಳು, ಕೋರ್ಟ್ ಪ್ರಕರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಸದ್ಯ ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ಮಾರ್ಗವು ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಸಿವಿಲ್ ಕೆಲಸ ಮುಗಿದಿವೆ. ಇನ್ನೇನು ಸಿಗ್ನಲಿಂಗ್ ಇನ್ನಿತರ ಅಂತಿಮ ಕೆಲಸಗಳು ಮುಗಿಯುತ್ತಿದ್ದಂತೆ ನೀಲಿ ರೈಲು ಮಾರ್ಗಗಳ ಪ್ರಾಯೋಗಿಕ ಸಂಚಾರ ಸಾಧ್ಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+