Namma metro: ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ, 15 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ
ಬೆಂಗಳೂರು, ಜನವರಿ 05: ಬೆಂಗಳೂರಿನ ನಮ್ಮ ಮೆಟ್ರೋ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಫೋನ್ ತೆಗೆದುಕೊಳ್ಳಲು ಮೆಟ್ರೋ ಹಳಿಗೆ ಇಳಿದ ಘಟನೆ ನಡೆದಿದ್ದು, ಸದ್ಯ ಈ ವೇಳೆ ಅಲ್ಲಿನ ಸಿಬ್ಬಂದಿ ವಿದ್ಯುತ್ ತಪ್ಪಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಇದೀಗ ಮತ್ತೊಂದು ಘಟನೆ ನಡೆದಿದೆ.
ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಮೆಟ್ರೋ ಹಳಿ ಮೇಲೆ ಜಿಗಿದಿರುವ ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ಬಳಿಕ ಯುವಕನ ಸ್ಥಿತಿ ಗಂಭೀರವಾಗಿತ್ತು. ಮೆಟ್ರೋ ಸಿಬ್ಬಂದಿ ಆ್ಯಂಬುಲೆನ್ಸ್‌ನಲ್ಲಿ ಆತನನ್ನು ಕರೆದೊಯ್ದು ಯಶವಂತಪುರದ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ದರಿಂದ ಹಸಿರು ಮಾರ್ಗದಲ್ಲಿ ನಮ್ಮ ಸಂಚಾರವನ್ನು 15 ನಿಮಿಷಗಳ ಕಾಲ ಸ್ಥಗಿತ ಮಾಡಲಾಗಿತ್ತು ಎಂದು ತಿಳಿದುಬಂದಿದ್ದು, ಇದರಿಂದ ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದ ಘಟನೆಯೂ ನಡೆದಿದೆ.

ಮೆಟ್ರೋ ಹಳಿಗಳ ಪಕ್ಕದಲ್ಲಿ 750 ವೋಲ್ಟ್ ಹೆವಿ ಪವರ್ ಲೈನ್ ಹಾದು ಹೋಗಿರುತ್ತದೆ. ಆದ್ದರಿಂದ ಮತ್ತೆ ಪವರ್ ಜನರೇಟ್ ಮಾಡಲು ಅರ್ಧ ಗಂಟೆ ಸಮಯ ಬೇಕಾಗುತ್ತದೆ ಎಂದು ಬಿಎಂಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಕೇರಳ ರಾಜ್ಯದ ಅಲಪ್ಪುಜ (23) ಮೂಲದವನು ಎನ್ನುವ ಮಾಹಿತಿ ಲಭ್ಯವಾಗಿದ್ದು, ಈತ ಬೆಂಗಳೂರಿನ ಅಬ್ಬಿಗೆರೆಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಈ ಆತ್ಮಹತ್ಯೆಗೆ ಯತ್ನಿಸಿರುವ ಯಾಕೆ ಎನ್ನುವ ಕಾರಣ ಇನ್ನು ತಿಳಿದುಬಂದಿಲ್ಲ.
ಮೆಟ್ರೋ ಹಳಿಗೆ ಇಳಿದ ಮಹಿಳೆ
ಇನ್ನು ಇತ್ತೀಚೆಗಷ್ಟೇ ಕೆಳಗೆ ಬಿದ್ದ ಮೊಬೈಲ್ ಅನ್ನು ಎತ್ತಿಕೊಳ್ಳಲು ಮಹಿಳೆಯೊಬ್ಬರು ಹಳಿಗೆ ಇಳಿದ ಘಟನೆ ನಡೆದಿದ್ದಿತ್ತು. ಈ ಘಟನೆ ನಡೆದಿದ್ದು ಹೊಸವರ್ಷದಂದು ಆಗಿದ್ದು, ಇದರಿಂದ ಏನೆಲ್ಲ ಸಮಸ್ಯೆಗಳು ಆಗಿವೆ ಗೊತ್ತಾ ಇಲ್ಲಿದೆ ಮಾಹಿತಿ.
ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಮೆಟ್ರೋ ಹಳಿಗೆ ಮಹಿಳೆಯೊಬ್ಬರು ಇಳಿದ ಆಘಾತಕಾರಿ ಘಟನೆ ಹೊಸ ವರ್ಷದಂದೇ ಬೆಂಗಳೂರಿನ ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಸೋಮವಾರ (ಜನವರಿ 01) ಸಂಜೆ 6:40ರ ಸುಮಾರಿಗೆ ಇಂದಿರಾನಗರ ಮೆಟ್ರೋ ಸ್ಟೇಷನ್‌ನಲ್ಲಿ ಮಹಿಳೆ ಮೆಟ್ರೋಗಾಗಿ ಕಾಯುತ್ತಾ ನಿಂತಿದ್ದು, ಈ ವೇಳೆ ಅವರ ಕೈಯಿಂದ ಮೊಬೈಲ್ ಜಾರಿ ಮೆಟ್ರೋ ಹಳಿ ಮೇಲೆ ಬಿದ್ದಿದೆ. ಅದನ್ನು ತೆಗೆದುಕೊಳ್ಳು ಮಹಿಳೆ ಟ್ರ್ಯಾಕ್‌ಗೆ ಇಳಿದಿದ್ದಾರೆ. ತಕ್ಷಣ ಎಚ್ಚೆತ್ತ ಮೆಟ್ರೋ ಸಿಬ್ಬಂದಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದರು.
ಇಲ್ಲಿನ ಮೆಟ್ರೋ ಸಿಬ್ಬಂದಿಯ ಮುಂಜಾಗ್ರತೆಯಿಂದ ಭಾರೀ ಅನಾಹುತ ತಪ್ಪಿದೆ. ಮಹಿಳೆಯ ಬೇಜವಾಬ್ದಾರಿತನದ ವರ್ತನೆಯಿಂದಾಗಿ 15 ನಿಮಿಷ ಮೆಟ್ರೋ ಸಂಚಾರ ಸ್ಥಗಿತ ಆಗಿತ್ತು. ನೇರಳೆ ಮಾರ್ಗದ ಲೈನ್‌ನಲ್ಲಿ ಜಸ್ಟ್ ಮಿಸ್ ಆಗಿ ಮಹಿಳೆ ದೊಡ್ಡ ಆಘಾತದಿಂದ ಪಾರಾಗಿದ್ದಾರೆ ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು.
ವಿದ್ಯುತ್ ಸ್ಥಗಿತಗೊಳಿಸಿದ ಬಳಿಮ ಎಲ್ಲವನ್ನೂ ರೀಸೆಟ್ ಮಾಡಲು 15 ನಿಮಿಷ ಸಮಯ ತೆಗೆದುಕೊಂಡಿತು. ಆದ್ದರಿಂದ ಮೆಟ್ರೋ ಸಂಚಾರ ಈ ಮಾರ್ಗದಲ್ಲಿ ವಿಳಂಬವಾಯಿತು ಎಂದು ಮಾಹಿತಿ ನೀಡಿತ್ತು.












Click it and Unblock the Notifications